ಬೆಂಗಳೂರು:ಇನ್ನೊಬ್ಬನ ಮೇಲಿನ ಮೋಹದಿಂದ ಪತ್ನಿಯೇ ಗಂಡನನ್ನು ಕೊಲೆ ಮಾಡಿಸಿದ ಪ್ರಕರಣವೊಂದು ನಡೆದಿದೆ. ಮಾತ್ರವಲ್ಲ, ಕೊಲೆ ಮಾಡಿ ಶವವನ್ನು ಮೋರಿಗೆ ಹಾಕಿದ್ದ ಈ ಜೋಡಿ, ಸುಳಿವು ಸಿಗಬಾರದೆಂದು ಕೊಲೆಗೆ ಬಳಸಿದ್ದ ವಸ್ತುಗಳನ್ನು ಒಂದೊಂದು ಕಡೆಗೆ ಎಸೆದಿದ್ದರು. ಅದಾಗ್ಯೂ ಪೊಲೀಸರು ಈ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಬೆಂಗಳೂರಿನ ಸೋಮಶೆಟ್ಟಿಹಳ್ಳಿ ನಿವಾಸಿ ದಾಸೇಗೌಡ (48) ಕೊಲೆಯಾದ ವ್ಯಕ್ತಿ. ಈತನ ಪತ್ನಿ ಜಯಲಕ್ಷ್ಮಿ ಮತ್ತು ಈಕೆಯ ಪ್ರಿಯಕರ ರಾಜೇಶ್ ಆರೋಪಿಗಳಾಗಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಮೋರಿಯಲ್ಲಿ ಶವ ಸಿಕ್ಕ ಪ್ರಕರಣದ ರಹಸ್ಯ ಬಯಲಾದಂತಾಗಿದೆ.
ದಾಸೇಗೌಡ ನಾಪತ್ತೆಯಾಗಿದ್ದ ಬಗ್ಗೆ ಪತ್ನಿ ಜಯಲಕ್ಷ್ಮಿಯೇ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ನ. 28ರಂದು ಪ್ರಕರಣ ದಾಖಲಿಸಿದ್ದಳು. ಆ ಬಳಿಕ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಸೇಗೌಡ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದಾಸೇಗೌಡನ ಪತ್ನಿ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಪ್ರಿಯಕರನನ್ನು ತಮ್ಮ ಎಂದು, ಪ್ರಿಯಕರ ಜಯಲಕ್ಷ್ಮೀಯನ್ನು ಅಕ್ಕ ಎಂದೂ ಹೇಳುವ ಮೂಲಕ ಪೊಲೀಸರನ್ನು ಹಾದಿತಪ್ಪಿಸಲು ಯತ್ನಿಸಿದ್ದರು. ಆದರೆ ಪತ್ನಿಯ ಕಾಲ್​ ಡಿಟೇಲ್ಸ್ ತೆಗೆದು ಪರಿಶೀಲನೆ ನಡೆಸಿದಾಗ ಅತಿಹೆಚ್ಚಿನ ಕರೆ ಪ್ರಿಯಕರನಿಗೆ ಹೋಗಿದ್ದು ಗೊತ್ತಾಗಿದ್ದು, ಆ ಬಳಿಕ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಅಸಲಿಯತ್ತು ಹೊರಬಿದ್ದಿದೆ.
ರಾಮನಗರ ಮೂಲದ ದಾಸೇಗೌಡ ಹಾಗೂ ಜಯಲಕ್ಷ್ಮೀ 16 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇವರು ಬೆಂಗಳೂರಿನ ಸೋಮಶೆಟ್ಟಿಹಳ್ಳಿಯಲ್ಲಿ ನೆಲೆಸಿದ್ದು, ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಅಲ್ಲದೆ ಈಕೆಗೆ ಅನೈತಿಕ ಸಂಬಂಧವಿದ್ದಿದ್ದು, ಗಂಡ ಮನೆಯಲ್ಲಿ ಇಲ್ಲದಾಗ ಪ್ರಿಯಕರ ಬಂದು ಹೋಗುತ್ತಿದ್ದ. ಈ ಕುರಿತು ಪತಿಗೆ ಅನುಮಾನ ಕೂಡ ಬಂದಿತ್ತು. ಭಾನುವಾರ ರಾತ್ರಿ ಸೋಲದೇವನಹಳ್ಳಿ ಫಾರ್ಮ್​ಹೌಸ್​ನಲ್ಲಿ ಗಲಾಟೆ ವೇಳೆ ಗಂಡ ಬೈಯುವುದನ್ನು ಪ್ರಿಯಕರನಿಗೆ ಕರೆ ಮಾಡಿ ಕೇಳಿಸಿದ್ದಳು. ಬಳಿಕ ಹಿಂಬಾಗಿಲಿನ ಮೂಲಕ ಮನೆಗೆ ಹೊಕ್ಕಿದ್ದ ಪ್ರಿಯಕರ ದನದ ಕೊಟ್ಟಿಗೆಯಲ್ಲಿನ ಹಗ್ಗ ತಂದು ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ.
ದಾಸೇಗೌಡನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಆರೋಪಿಗಳು ಶವವನ್ನು ಕಾರಿನಲ್ಲಿ ಕೊಂಡೊಯ್ದು ಮೈಸೂರು ಬೆಂಗಳೂರು ಹೆದ್ದಾರಿಯ ಮೋರಿಯಲ್ಲಿ ಎಸೆದಿದ್ದರು. ಮೋರಿಯಲ್ಲಿ ಸುಮಾರು 50 ಮೀಟರ್​ನಷ್ಟು ದೂರಕ್ಕೆ ಶವವನ್ನು ತುರುಕಿದ್ದ ಆರೋಪಿಗಳು, ಮೊಬೈಲ್​ಫೋನ್​ನನ್ನು ಅಲ್ಲಿಂದ 500 ಮೀಟರ್​ ದೂರದಲ್ಲಿ ಎಸೆದಿದ್ದರು. ಉಸಿರುಗಟ್ಟಿಸಲು ಬಳಸಿದ್ದ ಹಗ್ಗವನ್ನು ಮತ್ತೊಂದೆಡೆ ಎಸೆದಿದ್ದರು, ನಂತರ ಕಾರನ್ನು ಇನ್ನೊಂದು ಕಡೆ ಬಿಟ್ಟು, ಯಾವುದೇ ಸುಳಿವು ಸಿಗದಂತೆ ಎಚ್ಚರಿಕೆ ವಹಿಸಿದ್ದರು.
ಮದ್ವೆ ಆಗದೆ 2 ವರ್ಷ ಒಂದೇ ರೂಮಲ್ಲಿದ್ರು ಬ್ಯೂಟಿಷಿಯನ್​-ಬಾರ್ಬರ್; ಕೊನೆಗೆ ಅವನ ಸಿಟ್ಟಿಗೆ ಅವಳ ಪ್ರಾಣವೇ ಹೋಯ್ತು!

ಹೆಂಡ್ತಿ ಜತೆ ಜಗಳವಾಡಿ ಬಂದವನ ಕಂಡು ನಾಯಿ ಬೊಗಳಿತು; ಸಿಟ್ಟಾದ ಆತ ಅದರ ಒಡತಿಯನ್ನೇ ಕೊಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
