ಬೆಂಗಳೂರು:ಐಷಾರಾಮಿ ಕಾರುಗಳ ತೆರಿಗೆ ವಂಚನೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಸರ್ಕಾರ ನಿರ್ಧರಿಸಿದೆ. ಸರಣಿ ವರದಿಗಳ ಪ್ರಕಟಿಸುವ ಮೂಲಕ 100 ಕೋಟಿ ರೂ.ಗೂ ಅಧಿಕ ತೆರಿಗೆ ವಂಚಿಸಿರುವ ಆರ್​ಟಿಒ ಹಗರಣವನ್ನು ವಿಜಯವಾಣಿ ಬಯಲಿಗೆಳೆದಿತ್ತು. ಈಗ ಸಿಐಡಿ ತನಿಖೆಗೆ ಒಪ್ಪಿಸುವ ವಿಚಾರವನ್ನು ಖುದ್ದು ಸಾರಿಗೆ ಸಚಿವ ಬಿ.ಶ್ರೀರಾಮುಲು ವಿಧಾನಪರಿಷತ್​ನಲ್ಲಿ ಶುಕ್ರವಾರ ಪ್ರಕಟಿಸುವುದರೊಂದಿಗೆ ವಿಜಯವಾಣಿ ಅಭಿಯಾನಕ್ಕೆ ಯಶಸ್ಸು ಸಿಕ್ಕಿದೆ. 2022ರ ಜ.8ರಂದು ‘ಕೋಟಿ ಕಾರುಗಳು ತೆರಿಗೆ ಧೋಖಾ’ ಶೀರ್ಷಿಕೆಯಡಿ ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಮಧುಗಿರಿ ಆರ್​ಟಿಒ ಹಾಗೂ ಇಂದಿರಾನಗರ ಆರ್​ಟಿಒ ಲಾಗಿನ್ ಐಡಿ ಮತ್ತು ಪಾಸ್​ವರ್ಡ್ ದುರ್ಬಳಕೆ ಮಾಡಿಕೊಂಡು ವಾಹನ ನೋಂದಣಿ ಮಾಡುತ್ತಿರುವ ಹಗರಣವನ್ನೂ ವಿಜಯವಾಣಿ ಬಯಲಿಗೆಳೆದಿತ್ತು. ಈ ವರದಿ ಆಧರಿಸಿ ಸಾರಿಗೆ ಆಯುಕ್ತರು, 20 ಲಕ್ಷ ರೂ. ಮೌಲ್ಯದ ವಾಹನಗಳ ತೆರಿಗೆ ವಂಚನೆ ಬಗ್ಗೆ ಲೆಕ್ಕಪರಿಶೋಧನೆಗೆ ಆದೇಶಿಸಿ, ಎಆರ್​ಟಿಒ ಎ.ವಿ.ಪ್ರಸಾದ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಎ.ವಿ.ಪ್ರಸಾದ್ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿದಾಗ ಬೆಂಗಳೂರಿನ ಹಲವು ಆರ್​ಟಿಒ ಕಚೇರಿಗಳಲ್ಲಿ 100 ಕೋಟಿ ರೂ.ಗೂ ಅಧಿಕ ತೆರಿಗೆ ಅಕ್ರಮ ನಡೆದಿರುವುದು ದೃಢಪಟ್ಟಿತ್ತು. ಐಶಾರಾಮಿ ಕಾರುಗಳನ್ನು ಟ್ಯಾಕ್ಸ್ ಕಟ್ಟಿಸಿಕೊಳ್ಳದೆ ನೋಂದಣಿ ಮಾಡಿರುವ ಬಗ್ಗೆ ವಾಹನಗಳ ನೋಂದಣಿ ಸಂಖ್ಯೆ ಪಟ್ಟಿ ಸಮೇತ ಮಧ್ಯಂತರ ವರದಿ ಸಲ್ಲಿಸಿತ್ತು. ಈ ಬಗ್ಗೆಯೂ 2022 ಫೆ.4ರಂದು ವಿಜಯವಾಣಿ ಮುಖಪುಟದಲ್ಲಿ ‘100 ಕೋಟಿ ತೆರಿಗೆ ಟೋಪಿ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ಯಾವೆಲ್ಲ ಕಾರುಗಳ ನೋಂದಣಿ:ಮೂರರಿಂದ 5 ಕೋಟಿ ರೂ.ನ ಲ್ಯಾಂಬೋರ್ಗಿನಿ, 40 ಲಕ್ಷ ರೂ.ನಿಂದ 2 ಕೋಟಿ ರೂ. ಮೌಲ್ಯದ ಬಿಎಂಡಬ್ಲು, 2 ಕೋಟಿ ರೂ.ಗಿಂತ ಹೆಚ್ಚಿನ ಪೋರ್ಶೆ ಹೀಗೆ ಕೋಟಿ ಕೋಟಿ ಬೆಲೆಯ ಕಾರುಗಳಿಗೆ ತೆರಿಗೆ ಕಟ್ಟಿಸಿಕೊಳ್ಳದೆ ಕಳ್ಳದಾರಿಯಲ್ಲಿ ನೋಂದಣಿ ಮಾಡಿಕೊಡಲಾಗಿದೆ. ಸರ್ಕಾರಕ್ಕೆ ಸೇರಬೇಕಾದ ತೆರಿಗೆ ವಂಚಿಸಿ ವೈಯಕ್ತಿಕ ಲಾಭ ಮಾಡಿಕೊಳ್ಳಲಾಗಿದೆ.
ವಂಚನೆಗೆ ಅಧಿಕಾರಿಗಳ ಸಾಥ್:ವಾಹನಗಳ ಶೋರೂಂ ಡೀಲರ್​ಗಳ ಜತೆ ಕೆಲ ಆರ್​ಟಿಒ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈಜೋಡಿಸಿ ತೆರಿಗೆ ವಂಚಿಸಿರುವುದು ಸಮಿತಿ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಅದರಲ್ಲೂ ನಾನ್ ಟ್ರಾನ್ಸ್​ಫೋರ್ಟ್ (ಎನ್​ಟಿ) ಸೆಕ್ಷನ್​ನಲ್ಲಿ ಕೆಲಸ ಮಾಡುತ್ತಿರುವ ಸೂಪರಿಂಟೆಂಡೆಂಟ್​ಗಳು ಅವ್ಯವಹಾರದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಕೆಲ ಕಚೇರಿಗಳಲ್ಲಿ 15-20 ವರ್ಷದಿಂದ ಎನ್​ಟಿ ಸೆಕ್ಷನ್​ನಲ್ಲಿ ಕೆಲಸ ಮಾಡುತ್ತಿದ್ದು, ಬೇರೆಡೆಗೆ ವರ್ಗಾವಣೆಯಾದೆ ಅಲ್ಲೇ ಠಿಕಾಣಿ ಹೂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಸಚಿವ ಬಿ.ಶ್ರೀರಾಮುಲು ಪ್ರಕಟ:ಐಷಾರಾಮಿ ಕಾರುಗಳಿಗೆ ಜೀವಾವಧಿ ತೆರಿಗೆ ಪಾವತಿಸಿಕೊಳ್ಳದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ವಿಧಾನ ಪರಿಷತ್​ನಲ್ಲಿ ಶುಕ್ರವಾರ ಪ್ರಕಟಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್​ನ ಸಿ.ಎನ್.ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನ ಕೇಂದ್ರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಐಷಾರಾಮಿ ಕಾರುಗಳು ತೆರಿಗೆ ಪಾವತಿಸದೆ ನೋಂದಣಿಯಾಗಿರುವ ಮಾಹಿತಿ ಆಧರಿಸಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೇತೃತ್ವದ ತಂಡ ನೀಡಿದ ವರದಿ ಪ್ರಕಾರ 124 ಐಷಾರಾಮಿ ಕಾರುಗಳು ತೆರಿಗೆ ಕಟ್ಟದೆ ನೋಂದಣಿಯಾಗಿರುವುದು ದೃಢಪಟ್ಟಿದ್ದು, 13 ವಾಹನಗಳನ್ನು ಜಪ್ತಿ ಮಾಡಿ 1.64 ಕೋಟಿ ರೂ. ದಂಡ ಸಹಿತ ತೆರಿಗೆ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.
ರಾಮ್​ಗೋಪಾಲ್ ವರ್ಮಾ ಜತೆ ಅಂಡರ್​ವರ್ಲ್ಡ್​​ನಲ್ಲಿ ಉಪೇಂದ್ರ; ಯಾರದು ‘R’?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
