ಬೆಂಗಳೂರು:ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡಿರುವ ಹಲವರು ಪಾರ್ಟಿಗೆಂದೇ ಫ್ಲ್ಯಾಟ್​-ರೆಸಾರ್ಟ್ ಮಾಡಿಕೊಂಡಿದ್ದ ವಿಷಯ ಒಂದೊಂದಾಗಿ ಹೊರಬರುತ್ತಿದೆ. ಆ ಪೈಕಿ ಇದೀಗ ಸೇರ್ಪಡೆ ಆಗಿರುವ ಮತ್ತೊಂದು ಹೆಸರು ವೈಭವ್ ಜೈನ್​.
ಆರೋಪಿಗಳಲ್ಲಿ ಒಬ್ಬನಾಗಿರುವ ವೈಭವ್​ ಜೈನ್​, ಮಾದಕ ಚಟುವಟಿಕೆಗಳಿಗೆಂದೇ ವೈಭವೋಪೇತ ಫ್ಲ್ಯಾಟ್​ವೊಂದನ್ನು ಇರಿಸಿಕೊಂಡಿದ್ದ ವಿಷಯ ಬಹಿರಂಗಗೊಂಡಿದೆ. ಆ ಐಷಾರಾಮಿ ಫ್ಲ್ಯಾಟ್​ ಕುರಿತ ಮಾಹಿತಿ ದಿಗ್ವಿಜಯ್​ ನ್ಯೂಸ್​ಗೆ ಲಭಿಸಿದೆ.
ಬೆಂಗಳೂರಿಗನ ಹೆಣ್ಣೂರು ಬಳಿ ಇರುವ ಈ ಐಷಾರಾಮಿ ಫ್ಲ್ಯಾಟ್​​ಗೆ ಯಾರ್ಯಾರೋ ಅಷ್ಟು ಸಲೀಸಾಗಿ ಪ್ರವೇಶಿಸಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿಗೆ ವೈಭವ್​ ಜೈನ್​ ಆಪ್ತರಿಗಷ್ಟೇ ಪ್ರವೇಶ. ವಿಶೇಷವೆಂದರೆ, ಬೆಂಗಳೂರಿನ ಸೆಲೆಬ್ರಿಟಿಗಳಲ್ಲದೆ ತೆಲಂಗಾಣದ ರಾಜಕಾರಣಿಗಳ ಮಕ್ಕಳೂ ಇಲ್ಲಿಗೆ ಬರುತ್ತಿದ್ದರು ಎಂಬ ವಿಷಯವೂ ಕೇಳಿಬಂದಿದೆ.
ಎರಡು ಬೆಡ್ ರೂಂ ಮತ್ತು ವಿಶಾಲವಾದ ಹಾಲ್ ಹೊಂದಿರೋ ಫ್ಲ್ಯಾಟ್​ನಲ್ಲಿ ವೀಕೆಂಡ್​ಗಳಲ್ಲಿ ಭಾರಿ ಪಾರ್ಟಿಗಳು ನಡೆಯುತ್ತಿದ್ದು, ಆಪ್ತವಲಯದ ಸದಸ್ಯರಷ್ಟೇ ಇಲ್ಲಿರುತ್ತಿದ್ದರು ಎನ್ನಲಾಗಿದೆ. ಫ್ಲ್ಯಾಟ್ ಕುರಿತ ಕೆಲವು ಫೋಟೋಗಳ ಝಲಕ್ ಇಲ್ಲಿದೆ.
ಆರೋಪಿಗಳಲ್ಲಿ ಒಬ್ಬನಾಗಿರುವ ಆದಿತ್ಯ ಆಳ್ವ ಒಡೆತನದ “ಹೌಸ್​ ಆಫ್​ ಲೈಫ್”, ನಿರೂಪಕ ಅಕುಲ್​ ಬಾಲಾಜಿಗೆ ಸೇರಿರುವ ಫ್ಲ್ಯಾಟ್​ ಹೆಸರು ಕೂಡ ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + nine =
Remember me
