ಚಿಕ್ಕಮಗಳೂರು:ಸುಳ್ಳೇ ಕಾಂಗ್ರೆಸಿನ ಮನೆ ದೇವರಾಗಿದ್ದು ಯಾರಿಂದಲೂ ಆ ಪಟ್ಟವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಬಂದ ಮೇಲೆ ಆ ಪಕ್ಷದ ಪಾಠವನ್ನೇ ಕೇಳುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಳ್ಳು ಹೇಳುವುದರಲ್ಲಿ ಯಡಿಯೂರಪ್ಪ ಮಿನಿ ಮೋದಿ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ರವಿ, ಸತ್ಯವನ್ನು ನಂಬದವರಿಗೆ ಹೇಳಿದ್ದೆಲ್ಲ ಸುಳ್ಳಾಗಿ ಗೋಚರವಾಗುತ್ತದೆ. ಸತ್ಯ ನಂಬುವ ಸ್ವಭಾವವೇ ಕಾಂಗ್ರೆಸಿಗರಿಗಿಲ್ಲ. ಸುಳ್ಳು ಹೇಳುವುದರಲ್ಲಿ ಅವರಿಗಿಂತ ನಿಸ್ಸೀಮರು ಇನ್ಯಾರೂ ಇಲ್ಲ ಎಂದು ಹೇಳಿದರು.
ಯಾರದಾದರೂ ಪೌರತ್ವ ಹೋಗಿದೆಯೇ?ಸಿಎಎನಿಂದ ಪೌರತ್ವವನ್ನೆಲ್ಲ ಕಿತ್ತು ಹಾಕಲಾಗುತ್ತದೆ ಎಂದು ಮುಸ್ಲಿಮರಲ್ಲಿ ಭಯ ಹುಟ್ಟಿಸಿ ಬೀದಿಗಿಳಿಸಿದ್ದರು. ಈಗ ಸಿಎಎ ಬಂದು ಒಂದು ವರ್ಷ ಕಳೆದಿದೆ. ಯಾವುದೇ ಒಬ್ಬನ ಪೌರತ್ವ ಹೋಗಿದೆಯೇ ಎಂದು ಪ್ರಶ್ನಿಸಿದ ಅವರು, ಹೀಗಿದ್ದಾಗ ಸುಳ್ಳು ಹೇಳಿದ್ದು ಯಾರು? ಕಾಂಗ್ರೆಸಿಗರೆ. ಇದು ಕೊಡುವ ಬಿಲ್ ಹೊರತು ಕಿತ್ತುಕೊಳ್ಳುವುದಲ್ಲ ಎಂದು ನಾವು ಹೇಳಿದ್ದೆವು. ಆದರೂ ಬೀದಿಗಿಳಿದವರು, ಅವರನ್ನು ಬೆಂಬಲಿಸಿದವರು, ಭಾಷಣ ಮಾಡಿದವರು ಎಲ್ಲ ಕಾಂಗ್ರೆಸಿಗರೆ ಎಂದು ಟೀಕಿಸಿದರು.
ಮತ್ತೊಂದು ನಿದರ್ಶನವೆಂದರೆ ಟಿಪ್ಪು ಸುಲ್ತಾನ್ ಕನ್ನಡ ಪ್ರೇಮಿ ಎಂದು ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಆದರೆ ಟಿಪ್ಪು ಕಾಲದಲ್ಲೇ ಆಡಳಿತ ಭಾಷೆಯಾಗಿ ಪರ್ಷಿಯನ್ ಅನ್ನು ಇಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು. ಆದರೂ ಆತನನ್ನು ಕನ್ನಡ ಪ್ರೇಮಿ ಎಂದು ಕರೆದರು. ಇದು ಸುಳ್ಳೋ ಸತ್ಯವೋ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಪಪ್ರಚಾರಈಗ ಕೃಷಿ ಸುಧಾರಣಾ ಬಿಲ್ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡಲು ಹೊರಟಿದೆ. ರೈತರ ಬದುಕನ್ನೇ ಅದು ಕಿತ್ತುಕೊಂಡು ಬಿಡುತ್ತದೆ ಎಂದು ಪ್ರಚಾರ ಮಾಡುತ್ತಿದೆ. ನಾವು ರೈತರನ್ನು ದಲ್ಲಾಳಿಗಳಿಂದ ಮುಕ್ತರನ್ನಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ಈ ಸುಧಾರಣಾ ಬಿಲ್ ತಂದಿದ್ದು ಅತೀ ಹೆಚ್ಚು ಕನಿಷ್ಠ ಬೆಂಬಲ ಬೆಲೆ ನೀಡಿರುವುದು ಮೋದಿ ಸರ್ಕಾರ, ಬಿಜೆಪಿ ಸರ್ಕಾರ. ಆದರೂ ಅದರ ವಿರುದ್ಧ ಅಪ್ರಚಾರ ಕಾಂಗ್ರೆಸ್ ನಡೆಸುತ್ತಿದೆ. ಹಾಗಾದರೆ ಸುಳ್ಳು ಹೇಳುತ್ತಿರುವವರು ಯಾರು ಎಂದು ಕೇಳಿದರು.
ನಿಗಮ-ಮಂಡಳಿ ವಿಚಾರ ಕೋರ್ ಕಮಿಟಿಯಲ್ಲಿ ಚರ್ಚೆನಿಗಮ ಮಂಡಳಿ ನೇಮಕದಿಂದ ಪಕ್ಷದ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಅವರು, ಡಿ.4 ರಂದು ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಕೆಲವು ವಿಚಾರಗಳನ್ನು ಅಲ್ಲಿ ಚರ್ಚಿಸಲಾಗುತ್ತದೆ. ವ್ಯಕ್ತಿಗಳನ್ನು ತೃಪ್ತಿಪಡಿಸಲಾಗದು. ಆದರೆ, ಆಯ್ಕೆಯ ಮಾನದಂಡ ಏನಿರಬೇಕು ಅಥವಾ ಆಯ್ಕೆ ಮಾಡುವ ಪದ್ಧತಿ ಹೇಗಿರಬೇಕು ಎಂಬ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುತ್ತದೆ ಎಂದರು.
ರಾಜಕೀಯಕ್ಕೆ ರಜನಿಕಾಂತ್ ಬರುತ್ತಾರೆ ಎನ್ನುವುದು ಕಳೆದ 10 ವರ್ಷಗಳಿಂದ ಕೇಳಿ ಬರುತ್ತಿರುವ ಮಾತು. ಅವರು ತಮ್ಮ ತೀರ್ಮಾನ ಪ್ರಕಟಿಸಿದ ಬಳಿಕ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.
ಕರೊನಾ ಎಚ್ಚರಿಕೆ ಅಗತ್ಯಕರೊನಾ ಮುನ್ನೆಚ್ಚರಿಕೆ ಗಮನದಲ್ಲಿರಿಸಿಕೊಂಡು ಮೈಮರೆಯದೆ ಗ್ರಾಪಂ ಚುನಾವಣೆ ನಡೆಸಿ ಯೋಗ್ಯರನ್ನು ಆರಿಸುವುದು ಅಗತ್ಯ. ಪಕ್ಷಾತೀತ ಚುನಾವಣೆಯಾದರೂ ಪಕ್ಷದ ಹಿಂಬಾಲಕರು ಇದ್ದೇ ಇರುತ್ತಾರೆ. ಹೀಗಿರುವಾಗ ತಮ್ಮ ಊರಿನ ಸಮಸ್ಯೆ ಬಗೆಹರಿಸಲು ಯಾರು ಜನರ ನಡುವೆ ಕೆಲಸ ಮಾಡುತ್ತಿದ್ದಾರೊ ಅಂಥ ಯೋಗ್ಯರನ್ನು ಆರಿಸಿ ಎಂದು ಮತದಾರರನ್ನು ಕೋರುವುದಾಗಿ ಹೇಳಿದರು.
ಬಿಜೆಪಿ ಕಾರ್ಯಕರ್ತರ ಆಯ್ಕೆ ಸಹಜಬಿಜೆಪಿ ಈಗಾಗಲೇ ಚುನಾವಣೆ ಸಿದ್ಧತೆಯಲ್ಲಿದ್ದು ಉದ್ದಗಲಕ್ಕೂ ಗ್ರಾಮ ಸ್ವರಾಜ್ಯ ಯಾತ್ರೆ ನಡೆಯುತ್ತಿದೆ. ಪಕ್ಷದ ಕಾರ್ಯಕರ್ತರು ಸದಾಕಾಲ ಜನರ ನಡುವೆ ಇದ್ದು ಕೆಲಸ ಮಾಡುತ್ತಿರುವುದರಿಂದ ಸ್ವಾಭಾವಿಕವಾಗಿ ಪಕ್ಷದ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿದ್ದಾರೆ. ಪಕ್ಷದ ಪ್ರಭಾವಕ್ಕಿಂತಲೂ ಅವರ ವ್ಯಕ್ತಿತ್ವವೇ ಹೆಚ್ಚು ಮುಖ್ಯವಾಗುತ್ತದೆ ಎಂದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:20 − sixteen =
Remember me
