ಬೆಂಗಳೂರು:ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಚಿದಾನಂದಮೂರ್ತಿ ಅವರದು ಚಿರಸ್ಮರಣೀಯವಾದ ದೊಡ್ಡ ಹೆಸರು. ಸುಮಾರು ಐದು ದಶಕಗಳವರೆಗೆ ಅವರು ಸಂಶೋಧನ ಕ್ಷೇತ್ರದಲ್ಲಿ ದುಡಿದು, ನೂರಾರು ಸಂಶೋಧನೆಗಳಿಗೆ ಕಾರಣರಾಗಿದ್ದರು. ಚಿದಾನಂದಮೂರ್ತಿಯವರು ಇಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ, ನಾನೂರಕ್ಕೂ ಹೆಚ್ಚು ಸಂಪ್ರಬಂಧಗಳನ್ನೂ ಪ್ರಕಟಿಸಿದ್ದರು. ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ನಾಟಕ ಇತಿಹಾಸ, ಸಂಸ್ಕೃತಿ ಮತ್ತಿತರ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದರು.
ಮೇಲ್ನೋಟಕ್ಕೆ ಚಳವಳಿಗಾರ, ಹೋರಾಟಗಾರ ಎನಿಸಿದರೂ ಅವರಲ್ಲಿ ಅಗಾಧ ಪಾಂಡಿತ್ಯವಿತ್ತು. ಸಂಶೋಧಿಸುವ ಛಲವಿತ್ತು. ಹೀಗಾಗಿ ಚಿದಾನಂದ ಮೂರ್ತಿಯವರು ಹಲವು ಕೃತಿಗಳಿಗೆ ಜೀವ ನೀಡಿದ್ದು, ಅನೇಕ ಪ್ರಶಸ್ತಿಗಳ ಗೌರವಕ್ಕೂ ಪಾತ್ರರಾಗಿದ್ದಾರೆ.
ಕೃತಿಗಳು1. ಶೂನ್ಯಸಂಪಾದನೆಯನ್ನು ಕುರಿತು2. ಭಾಷಾವಿಜ್ಞಾನದ ಮೂಲತತ್ತ್ವಗಳು3. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ4. ಬಸವಣ್ಣನವರು5. ಸಂಶೋಧನತರಂಗ (ಎರಡು ಸಂಪುಟಗಳು)6. ವಚನಸಾಹಿತ್ಯ7. ಗ್ರಾಮೀಣ8. ವಾಗರ್ಥ9. ಪೂರ್ಣ ಸೂರ್ಯಗ್ರಹಣ10. ವೀರಗಲ್ಲು ಮತ್ತು ಮಾಸ್ತಿಗಲ್ಲು11. ಪಗರಣ12. ಕನ್ನಡ ಸಾಹಿತ್ಯ ಮತ್ತು ಶಾಸನಗಳಲ್ಲಿ ಸಂಗೀತವಿಚಾರ13. ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ14. ಲಿಂಗಾಯತ ಅಧ್ಯಯನಗಳು15. ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ16. ಹೊಸತು ಹೊಸತು17. ಛಂದೋತರಂಗ18. ವಚನಶೋಧ (1, 2)19. ಕನ್ನಡಾಯಣ20. ವೀರಶೈವಧರ್ಮ ಮತ್ತು ಭಾರತೀಯ ಸಂಸ್ಕೃತಿ21. ಪಾಂಡಿತ್ಯರಸ22. ಕರ್ನಾಟಕ ನೇಪಾಳ: ಸಾಂಸ್ಕೃತಿಕ ಸಂಬಂಧ23. ಸ್ಥಾವರಜಂಗಮ24. ಭಾಷಿಕ ಬೃಹತ್ ಕರ್ನಾಟಕ25. ಹಂಪಿ ಉಳಿಸಿ; ಭಾರತ ಉಳಿಸಿ26. ಅಪಾರ್ಥ, ಅಕ್ರಮಣಗಳಿಗೆ ಒಳಗಾಗಿರುವ ಹಿಂದುಧರ್ಮ27. ಗೋ-ಗೋಮಾತೆ-ಗೋಹತ್ಯಾನಿಷೇಧ ಕಾನೂನು28. ಕರ್ನಾಟಕ ನಾಡಗೀತೆ- ಒಂದು ವಿಶ್ಲೇಷಣೆ29. ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ30. ಚಿದಾನಂದಾಯಣ31. ಸಂಪ್ರಬಂಧ ಸಂಚಯ32. ಹೊಸ ಬೆಳಕಿನಲ್ಲಿ ಬಸವಣ್ಣ33. ಹೊಸ ಬೆಳಕಿನಲ್ಲಿ ಹಂಪಿ34. ಮೂಲದಾಖಲೆಗಳಲ್ಲಿ ಹುದುಗಿದ್ದ ಟಿಪ್ಪು300ಕ್ಕೂ ಹೆಚ್ಚು ಸಂಶೋಧನ ಲೇಖನಗಳು (ಕನ್ನಡ ಮತ್ತು ಇಂಗ್ಲಿಷ್​ನಲ್ಲಿ)
ಪ್ರಶಸ್ತಿಗಳು1977: ಕನ್ನಡ ಸಾಹಿತ್ಯ ಪರಿಷತ್ ವಜ್ರಮಹೋತ್ಸವ ಪ್ರಶಸ್ತಿ1984: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ1985: ಕನ್ನಡ ರಾಜ್ಯೋತ್ಸವ ಪ್ರಶಸ್ತಿ1993: ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ1993: ಭೂಸನೂರು ಮಠ ಸ್ಮಾರಕ ಪ್ರಶಸ್ತಿ1996: ಬೆಂಗಳೂರು ಅರ್ಬನ್ ಆರ್ಟ್ ಕಮಿಷನ್ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿಗೊರುಚ ಗ್ರಾಮ ವಿಕಾಸ ಪ್ರತಿಷ್ಠಾನ ಸೇವಾ ಪ್ರಶಸ್ತಿ1997: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ1999: ಅನಕೃ ಪ್ರಶಸ್ತಿ2000: ಸೇಡಿಯಾಪು ಸಂಶೋಧನ ಪ್ರಶಸ್ತಿ2000 ಲಕ್ಕೇಗೌಡ ಸೇವಾ ಪ್ರಶಸ್ತಿ2001: ಮಾಸ್ತಿ ಪ್ರಶಸ್ತಿ2001 ಸಿರಿವಾರ ಚುಕ್ಕಿ ಪ್ರಶಸ್ತಿ2001 ಶಂ.ಭಾ. ಜೋಶಿ ಪ್ರಶಸ್ತಿ2002: ಪಂಪ ಪ್ರಶಸ್ತಿ2004: ನಾಡೋಜ ಪ್ರಶಸ್ತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eight =
Remember me
