| ಆರ್.ಮಹೇಶ್ ಕುದೂರು (ಮಾಗಡಿ)
ಕೊಪ್ಪಳ ಜಿಲ್ಲೆ, ಗಂಗಾವತಿ ಗ್ರಾಮದ ಪವಿತ್ರಾ 2010ರಲ್ಲಿ ಪ್ರಥಮ ಪಿಯು ಓದುತ್ತಿದ್ದ ಸಮಯ. ಸಂಬಂಧಿಯೊಬ್ಬರಿಗೆ ಮೊಬೈಲ್ ಕರೆ ಮಾಡುವಾಗ ಕೊನೇ ನಂಬರ್ ಬೇರೆಯಾಗಿ ಕುದೂರಿನ ಯುವಕ ರಾಜುಗೆ (ಮಸಿ) ಹೋಗುತ್ತದೆ. ಕರೆ ಸ್ವೀಕರಿಸಿದಾತ, ರಾಂಗ್ ನಂಬರ್ ಎಂದು ಕರೆ ಸ್ಥಗಿತ ಮಾಡುತ್ತಾನೆ. ಎರಡು ದಿನದ ನಂತರ ಪವಿತ್ರಾ, ರಾಜುಗೆ ಕರೆ ಮಾಡಿ ಮಾತಾಡಲು ಪ್ರಾರಂಭಿಸುತ್ತಾಳೆ. ಹೀಗೆ ಸ್ನೇಹ ಬೆಳೆದು ತಿಂಗಳಾಗುವುದರೊಳಗೆ ರಾಜು ಪ್ರೊಪೋಸ್ ಮಾಡುತ್ತಾನೆ.
ಪರಸ್ಪರ ಪ್ರೀತಿ ಶುರುವಾದ ಬಳಿಕ ನಿತ್ಯದ ಮಾತು ಕಡಿಮೆ ಆಗುತ್ತದೆ. ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಪವಿತ್ರಾ ಕರೆ ಮಾಡುತ್ತಾ, ನಂತರ ಮಾತಾಡುವುದನ್ನೇ ನಿಲ್ಲಿಸಿ ವರ್ಷಕೊಮ್ಮೆ ರಾಜು ಹುಟ್ಟುಹಬ್ಬಕ್ಕೆ ಮಾತ್ರ ಕರೆ ಮಾಡಿ ಶುಭ ಹಾರೈಸುತ್ತಾಳೆ. ಇಬ್ಬರೂ ಪರಸ್ಪರ ಮುಖ ನೋಡದೆ 7 ವರ್ಷ ಪ್ರೀತಿಸುತ್ತಾರೆ. 2017ರಲ್ಲಿ ಪದವಿ ಶಿಕ್ಷಣ ಮುಗಿಸುವ ಪವಿತ್ರಾ, ಎಂಕಾಂ ಓದಲು ಮಂಡ್ಯಕ್ಕೆ ಬರುತ್ತಾಳೆ. ರಾಜುಗೂ ಮಂಡ್ಯಕ್ಕೆ ಬರಹೇಳಿ, ಭೇಟಿಯಾಗುತ್ತಾಳೆ!
ಮುಂದಾ..?:ಎಂಕಾಂ ಮುಗಿಸಿ ಗಂಗಾವತಿಗೆ ತೆರಳಿದ ಪವಿತ್ರಾ, ಬೆಂಗಳೂರಿಗೆ ಉದ್ಯೋಗ ಅರಸಿ ಹೋಗುತ್ತಿದ್ದೇನೆ. ನಿಮ್ಮ ಮನೆಯವರೊಂದಿಗೆ ಮಾತನಾಡಲು ಬರುವುದಾಗಿ ತಿಳಿಸಿ, 2019ರ ಮೇನಲ್ಲಿ ಕುದೂರಿಗೆ ಬರುತ್ತಾಳೆ. ಮದುವೆಯಾಗದ ಯುವತಿ ಮನೆಯಲ್ಲಿರುವ ಸುದ್ದಿ ಗ್ರಾಮದೆಲ್ಲಡೆ ಹರಡುತ್ತದೆ. ಪಂಚಾಯಿತಿ ಕೂಡ ಸೇರಿಸಲಾಗುತ್ತೆ. ಗ್ರಾಮಸ್ಥರೆಲ್ಲ ಯುವತಿಯನ್ನು ಕೂರಿಸಿಕೊಂಡು, ರಾಜು ಓದಿರುವುದು 7ನೇ ಕಾಸ್, ನೇಕಾರಿಕೆ ಕೂಲಿ ಕೆಲಸ. ಇವನ ಜತೆ ನಿನ್ನ ಜೀವನ ಸರಿಹೊಂದುವುದಿಲ್ಲ. ವಿಷಯವನ್ನು ನಿಮ್ಮ ತಂದೆ-ತಾಯಿಗೆ ತಿಳಿಸುತ್ತೇವೆಂದು ಹೇಳುತ್ತಾರೆ. ನನ್ನ ಪ್ರೀತಿಯ ವಿಷಯ ಪಾಲಕರಿಗೆ ತಿಳಿಸದಿರುವಂತೆ ಯುವತಿ ಕೈ ಮುಗಿದು ಬೇಡಿಕೊಳ್ಳುತ್ತಾಳೆ. ಬದುಕುವುದಾದರೆ ರಾಜು ಜತೆ ಮಾತ್ರ ಎಂದು ಕೇಳಿಕೊಳ್ಳುತ್ತಾಳೆ. ಪಂಚಾಯಿತಿ ಮುಖಂಡರು ನ್ಯಾಯ ತೀರ್ಮಾನ ಮುಗಿಸಿ, ಎರಡೇ ದಿನದಲ್ಲಿ (2019 ಮೇ 29) ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಮದುವೆ ಮಾಡುತ್ತಾರೆ.
ಈಗ ರಾಜು-ಪವಿತ್ರಾಗೆ ಒಂದು ಗಂಡು ಮಗುವಿದೆ. ಶಿಕ್ಷಕಿಯಾಗಿ ಗ್ರಾಮದ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಮನೆಯಲ್ಲೇ ಕ್ಲಾಸ್ ನಡೆಸುತ್ತಿದ್ದ ಪವಿತ್ರಾ, ಸದ್ಯ ಕರೊನಾ ಹೊಡೆತದಿಂದ ಕೆಲಸವಿಲ್ಲದೆ ಮನೆಯಲ್ಲಿದ್ದಾಳೆ. ಸರ್ಕಾರಿ ಹುದ್ದೆಗಾಗಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಳೆ. ರಾಜು ಸಹ ಕುಟುಂಬದ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದು, ಅತ್ತೆ ಮನೆಯವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + twelve =
Remember me
