ಬೆಂಗಳೂರು:ಬೆಂಗಳೂರಿನ ಕೊನೆಯ ಡಾನ್​ ಎನಿಸಿಕೊಂಡಿದ್ದ ಭೂಗತ ಲೋಕದ ಮಾಜಿ ಪಾತಕಿ ಮುತ್ತಪ್ಪ ರೈ ನಿಧನದ ಬಳಿಕ ಹಲವು ಜನರು ಹಲವು ಬಗೆಯ ಟ್ವೀಟ್​ ಮಾಡಿದ್ದಾರೆ. ಆದರೆ, ಅವರ ಸಾವಿಗೆ ಒಂದು ದಿನ ಮೊದಲು ಬೆಂಗಳೂರಿನ ಒಂದು ಕಾಲದ ಡಾನ್​ ಜಯರಾಜ್​ ಪುತ್ರ ಹಾಗೂ ಚಿತ್ರನಟ ಅಜಿತ್​ ಜಯರಾಜ್​ ಟ್ವೀಟ್​ ಕುತೂಹಲ ಕೆರಳಿಸಿದೆ.
ರಾಜನಾದವನು ತಾನೇಕೆ ರಾಜನಾದ ಎಂಬುದನ್ನು ಮೂರ್ಖರಿಗೆ ಆಗಾಗ ನೆನಪಿಸಬೇಕಾಗುತ್ತಿರುತ್ತದೆ ಎಂಬ ಅರ್ಥದ (Sometimes the king has to remind the fools why he is king… Love you appa) ಎಂದು ಟ್ವೀಟ್​ ಮಾಡಿದ್ದಾರೆ.
ಇದನ್ನೂ ಓದಿ:VIDEO| ಭೂಗತ ಲೋಕಕ್ಕೆ ಮುತ್ತಪ್ಪ ರೈ ಬಂದಿದ್ದೇಕೆ?: ಹಿಂದೆ ನೀಡಿದ್ದ ಸಂದರ್ಶನದಲ್ಲಿ ಕುತೂಹಲಕಾರಿ ವಿಚಾರಗಳು!

ಸಾಕಷ್ಟು ಜನರು ಇದಕ್ಕೆ ಬಗೆ ಬಗೆಯಾಗಿ ಪ್ರತಿಕ್ರಿಯಿಸುತ್ತಿರುವಂತೆ ಸುದ್ದಿಗಾರರ ಜತೆ ಮಾತನಾಡಿದ ಅಜಿತ್​ ಜಯರಾಜ್​, “ನಾನು ಜಯರಾಜ್​ ಪುತ್ರ ನಿಜ. ಆದರೆ, ನಾನು ನನ್ನ ತಂದೆಯ ಹೆಸರಿನ ನೆರಳಿನಲ್ಲಿ ಮೇಲೆ ಬರುವುದಕ್ಕಿಂತ ನನ್ನಲ್ಲಿರುವ ಪ್ರತಿಭೆಯಿಂದ ಮೇಲೆ ಬರಬೇಕು ಎಂದು ಬಯಸುವವನು. ಹಾಗಾಗಿ ನಾನು ನಟನಾಗಿ ಚಿತ್ರರಂಗದಲ್ಲಿ ನನ್ನ ಪ್ರತಿಭೆ ತೋರುತ್ತಾ, ಮೇಲೆ ಬರಲು ಯತ್ನಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.8 ತಿಂಗಳ ಮಗು: ಬೆಂಗಳೂರಿನ ಡಾನ್​ ಎನಿಸಿಕೊಂಡಿದ್ದ ಎಂ.ಪಿ. ಜಯರಾಜ್​ ಅವರು ಹೆಲೆನ್​ ಎಂಬುವರನ್ನು ಮದುವೆಯಾಗಿದ್ದರು. ಇವರ ಪುತ್ರನೇ ಅಜಿತ್​ ಜಯರಾಜ್​. ತಮ್ಮ ತಂದೆ ಎಂ.ಪಿ. ಜಯರಾಜ್​ ಹತ್ಯೆಯಾದಾಗ ಅಜಿತ್​ ಕೇವಲ 8 ತಿಂಗಳ ಮಗು. ಆಗ 19 ವರ್ಷದವರಾಗಿದ್ದ ಹೆಲೆನ್​ ಅವರನ್ನು ಜಯರಾಜ್​ ಅವರ ಸಹೋದರ ಎಂ.ಪಿ. ಉಮೇಶ್​ ಮದುವೆಯಾಗಿ, ಅಜಿತ್​ಗೆ ತಂದೆಯ ಕೊರತೆ ಕಾಡದಂತೆ ನೋಡಿಕೊಂಡರು.
ಹೆಲೆನ್​ ಅವರಂತೂ ಪುತ್ರನನ್ನು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿ, ಆತ ಅಪರಾಧ ಲೋಕದ ಸೆಳೆತಕ್ಕೆ ಒಳಗಾಗದಂತೆ ಎಚ್ಚರ ವಹಿಸಿದರು. ನಿರ್ವಹಣಾಶಾಸ್ತ್ರ ಪದವೀಧರರಾಗಿರುವ ಅಜಿತ್​, ಅಗಮ್ಯ ಸೇರಿ ಹಲವು ಕನ್ನಡ ಚಲನಚಿತ್ರಗಳಲ್ಲಿ ನಟಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಪಂಚಭೂತಗಳಲ್ಲಿ ಲೀನರಾದ ಮುತ್ತಪ್ಪ ರೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
