ಚಳ್ಳಕೆರೆ ವೀರೇಶ್ವಿವಿಧ ಧರ್ಮಗಳ ನೆಲೆಬೀಡು ಕರ್ನಾಟಕ. ಹನ್ನೆರಡನೇ ಶತಮಾನದಲ್ಲಿ ಜನರು ಸಾಮಾಜಿಕ ಅಸಮಾನತೆಯ ತುಳಿತಕ್ಕೆ ಒಳಗಾಗಿದ್ದರು. ಆ ಕಾಲಘಟ್ಟದಲ್ಲಿ ಸರ್ವರಿಗೂ ಸಮಪಾಲು, ಸಹಬಾಳ್ವೆ ಒದಗಿಸಲು ಬಸವ ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಪ್ರಕಾಶಮಾನವಾಗಿ ಕಂಡುಬರುತ್ತಾನೆ. ದಕ್ಷನನ್ನು ಸಂಹಾರ ಮಾಡಿ ಉತ್ಸಾಹದಿಂದ ಶಿವನನ್ನು ಕಾಣಲು ವೀರಭದ್ರ ಶಿವನ ಸಭೆಯೊಳಗೆ ನಡೆದು ಬರುತ್ತಾನೆ. ಸಭೆಯಲ್ಲಿರುವ ಶಿವಭಕ್ತನಿಗೆ ಈತನ ಉತ್ತರೀಯ ತುದಿ ತಾಕುತ್ತದೆ. ವಿಜಯದ ಉದ್ವೇಗದಲ್ಲಿ ಆದ ಈ ತಪ್ಪಿಗೆ, ಭೂಲೋಕದಲ್ಲಿ ಮಡಿವಾಳನಾಗಿ ಜನಿಸಿ ಶರಣರ ವಸ್ತ್ರಗಳನ್ನು ಮಡಿ ಮಾಡುವ ಕಾಯಕ ಪೂರೈಸಿ ದೋಷಮುಕ್ತನಾಗಿ ಬರುವಂತೆ ಶಿವನ ಆದೇಶವಾಗುತ್ತದೆ. ಮಾಚಿದೇವನು ವೀರಭದ್ರನ ದೇವಾಂಶ ಸಂಭೂತ ಅವತಾರ ಪುರುಷ ಎಂಬ ಪ್ರತೀತಿ ಇದೆ.
ವಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವರಹಿಪ್ಪರಗಿ ಗ್ರಾಮದ ಪರುವತಯ್ಯ-ಸುಜ್ಞಾನವ್ವ ದಂಪತಿಗೆ ಶರಣ ಮಾಚಯ್ಯ ಜನಿಸಿದ್ದು ಕ್ರಿ.ಶ.1120ರಿಂದ 1130ರ ನಡುವೆ. 12ನೇ ಶತಮಾನದ ಶಿವಶರಣರ ಮತ್ತು ಕಾಯಕನಿಷ್ಠೆಯುಳ್ಳವರ ಬಟ್ಟೆಗಳನ್ನು ಮಡಿ ಮಾಡಿ ಅವರಿಗೆ ಮುಟ್ಟಿಸುವ ಕಾಯಕ ಇವನದ್ದಾಗಿತ್ತು. ಕಾಯಕ ಮಾಡದ ಸೋಮಾರಿಗಳ, ಬಡವರನ್ನು ಶೋಷಿಸುವ, ದುರ್ಗಣವುಳ್ಳವರ ಬಟ್ಟೆಗಳನ್ನೆಂದೂ ಆತ ಮುಟ್ಟುತ್ತಿರಲಿಲ್ಲ. ‘ಅರಸುತನ ಮೇಲಲ್ಲ, ಅಗಸತನ ಕೀಳಲ್ಲ’ ಎಂಬುದನ್ನು ಜನಕ್ಕೆ ಸಾರಿದ. ಹನ್ನೆರಡನೇ ಶತಮಾನದ ಸಾಂಸ್ಕೃತಿಕ ವೀರ, ವಚನಗಳ ರಕ್ಷಕ ಮಡಿವಾಳ ಮಾಚಿದೇವ ಜಂಗಮ ವೇಷದಲ್ಲಿ ಹಿಮಾಲಯಕ್ಕೆ ಬಂದ ಶಿವನ ಬಟ್ಟೆಯನ್ನು ತನ್ನ ಹೆಂಡತಿ ಮಲ್ಲಿಗೆಮ್ಮಳ ಎದೆ ಬಗೆದು ರಕ್ತದಲ್ಲಿ ಬಟ್ಟೆ ಒಗೆದ ಕಥೆ ಮಾಚಿದೇವನ ಕಾಯಕನಿಷ್ಠೆ, ಹಿರಿಮೆಯನ್ನು ಸಾರುತ್ತದೆ.
ಮಹಾನ್ ವ್ಯಕ್ತಿತ್ವ: ನುಲಿಯ ಚಂದಯ್ಯ ತನ್ನ ಕಾಯಕಕ್ಕೆ ಬೇಕಾದ ಹುಲ್ಲನ್ನು ಕೆರೆಯಲ್ಲಿ ಕುಯ್ಯುತ್ತಿದ್ದಾಗ ಧರಿಸಿದ ಇಷ್ಟಲಿಂಗ ಜಾರಿ ಕೆರೆಯೊಳಗೆ ಬಿತ್ತು. ‘ಜಾರಿಬಿದ್ದ ಲಿಂಗ ಮತ್ತೇಕೆ, ಭಾವಲಿಂಗವೊಂದನೆ ಪೂಜಿಸಿದರೆ ಸಾಕು’ ಎಂದು ಹುಲ್ಲಿನ ಹೊರೆ ಹೊತ್ತು ಮನೆಗೆ ತೆರಳಿದ. ಆಗ ಲಿಂಗದೇವ, ಮಾಚಿದೇವರ ಮೊರೆ ಹೋದ. ಮಾಚಿತಂದೆಗಳು, ‘ಸವಿ ಬೇಕು, ಹಣ್ಣು ಬೇಡವೆಂದರೆ ಹೇಗೆ? ಗುರುಪೂಜೆ ಅರಿದೊಡೆ ಲಿಂಗಪೂಜೆ ಬಿಡಲಾಗದೆಂದು’ ಚಂದಯ್ಯನವರ ತಪ್ಪಿನ ಅರಿವನ್ನುಂಟು ಮಾಡುವರು. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ, ಮಡಿ ಹಾಸಿ ಸ್ವಾಗತಿಸುವ ಕೆಲಸ ಈತನದಾಗಿತ್ತು. ಮಾಚಿದೇವನ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲವೆಂಬುದು ಮಾಚಯ್ಯನ ಮಹಾಘನತೆಗೆ ಸಾಕ್ಷಿಯಾಗಿದೆ.
ಸಾಮಾಜಿಕ ಅರಿವಿನ ವಚನಗಳು: ‘ಹೆರರ, ನೆರನೆತ್ತಿ ಇರಿಯಲಾಗದು ಪ್ರಾಣಿಯ, ಜರಿಯಲಾಗದು ನುಡಿಯಲಾಗದಾರುವನು, ಹೆರರ ವಧುವ ಕಂಡು ಮರುಗದಿರ್ದಡೆ ಶಿವಲೋಕ ತಳಾ ಮಳಕವೆಂದ ಕಲಿದೇವರದೇವಾ’ ಹೀಗೆ 450ಕ್ಕೂ ಹೆಚ್ಚು ವಚನಗಳನ್ನು ರಚಿಸುವ ಮೂಲಕ ಸಮಾಜದ ಅಸ್ಪೃಶ್ಯತೆ, ಅಸಮಾನತೆ, ಮೌಢ್ಯಗಳ ವಿರುದ್ದ ಹೋರಾಡಿ ಮಹಾನ್ ಶರಣನಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದವರಲ್ಲಿ ಮಾಚಿದೇವರು ಪ್ರಮುಖರು.
(ಲೇಖಕರು ಹವ್ಯಾಸಿ ಬರಹಗಾರರು)
ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಡಾ. ರವೀಂದ್ರನಾಥ್​ ನೇಮಕ

ದೇವಾಲಯಗಳು ಪಿಕ್ನಿಕ್​ ಸ್ಪಾಟ್​ ಅಲ್ಲ, ಹಿಂದೂಗಳಲ್ಲದವರು ಪ್ರವೇಶಿಸುವಂತಿಲ್ಲ: ಮದ್ರಾಸ್​ ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 2 =
Remember me
