ಅರಕಲಗೂಡು:ತಾಲೂಕಿನ ಕೇರಳಾಪುರ ಗ್ರಾಮದಲ್ಲಿ ಮನೆ ಮುಂದೆ ಕುಳಿತಿದ್ದ 70 ವರ್ಷದ ವೃದ್ಧೆ ಮೇಲೆ ದಾಳಿ ನಡೆಸಿದ ಹುಚ್ಚು ನಾಯಿ ಅವರ ಮುಖ ಮತ್ತು ಬಾಯಿ ಕಚ್ಚಿ ವಿಕಾರಗೊಳಿಸಿದೆ. ಸಮೀಪದಲ್ಲೇ ಆಟವಾಡುತ್ತಿದ್ದ 3 ವರ್ಷದ ಬಾಲಕಿ ಸೇರಿ ಮೂವರ ಮೇಲೆ ದಾಳಿ ನಡೆಸಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿರಿಕರೊನಾಗೆ ಪತ್ನಿ ಬಲಿ, ಐಸೋಲೇಶನ್​ನಲ್ಲಿ ಪತಿ
ಕೇರಳಾಪುರ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಕಾಣಿಸಿಕೊಂಡ ಹುಚ್ಚುನಾಯಿ ಗ್ರಾಮಸ್ಥರ ಮೇಲೆಲ್ಲ ದಾಳಿ ನಡೆಸಲು ಮುಂದಾಗಿದ್ದು, ಹಲವರು ಮನೆಯೊಳಗೆ ಓಡಿಹೋಗಿ ಬಾಗಿಲು ಹಾಕಿಕೊಂಡರು. ಮನೆ ಮುಂದೆ ಆಟವಾಡುತ್ತಿದ್ದ ಹೇಮಂತಕುಮಾರ್ ಅವರ ಮೂರು ವರ್ಷದ ಮಗಳು ತನುಶ್ರೀ ಮೇಲೂ ದಾಳಿ ಮಾಡಿದ್ದು, ಮಗುವಿನ ಬಲಗೈ ಮಾಂಸ ಖಂಡ ಕಿತ್ತು ಬಂದಿದೆ. ವೃದ್ಧೆಯ ಮೇಲೆ ದಾಳಿ ಮಾಡಿದ ನಾಯಿ, ಮುಖದ ಮಾಂಸಖಂಡ ಕಿತ್ತು ಬರುವಂತೆ ಕಚ್ಚಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಜನತೆ ಮನೆಯಿಂದ ಹೊರ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿರಿಜೈಲು ಸಿಬ್ಬಂದಿಗೆ ಕರೊನಾ ಪಾಸಿಟಿವ್​.. ಇದು ಪಾದರಾಯನಪುರ ವರಪ್ರಸಾದ ?
ಹಲವೆಡೆ ಹುಚ್ಚುನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾವು ನೋವು ಸಂಭವಿಸುತ್ತಲೇ ಇವೆ. ಇತ್ತೀಚಿಗೆ ತುಮಕೂರು ಜಿಲ್ಲೆ ಕುಣಿಗಲ್​ ಪಟ್ಟಣದ ವಾರ್ಡ್ ನಂಬರ್​ 2ರಲ್ಲಿ ಮೂರೂವರೆ ವರ್ಷದ ​ಬಾಲಕನೊಬ್ಬ ಹುಚ್ಚುನಾಯಿ ದಾಳಿಗೆ ಬಲಿಯಾಗಿದ್ದ. ಮತ್ತೊಬ್ಬ ಬಾಲಕ ಗಂಭೀರ ಗಾಯಗೊಂಡಿದ್ದ. ಇನ್ನಾದರೂ ಸಂಬಂಧಪಟ್ಟವರು ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿರಿಇಂದು ಚಂದ್ರ ಗ್ರಹಣ: ಎಷ್ಟೊತ್ತಿಗೆ, ಎಲ್ಲೆಲ್ಲಿ ಗೋಚರ… ಇಲ್ಲಿದೆ ವಿವರ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + fifteen =
Remember me
