ದಾವಣಗೆರೆ:ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜೈಲು ಪಾಲಾಗುತ್ತಿದ್ದಂತೆ, ಬಿಜೆಪಿಯಿಂದ ಟಿಕೆಟ್ ಪಡೆಯಲು ಮಾಡಾಳ್ ಕುಟುಂಬದ ಕಸರತ್ತು ನಡೆಸುತ್ತಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬಂದಿವೆ. ಈ ನಡುವೆ ಮಾಡಾಳ್ ವಿರೂಪಾಕ್ಷಪ್ಪ ಹಿರಿಯ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಚನ್ನಗಿರಿ ಪಟ್ಟಣದ ತಾಲೂಕಾ ಬಿಜೆಪಿ ಕಚೇರಿಯಲ್ಲಿ ಆಪ್ತರ ಕರೆದು ಮಾತನಾಡಿದ್ದಾರೆ.
ನಿನ್ನ ಜೀವ ಹೋದರೂ ಈ ಜನರನ್ನು ಬಿಡಬೇಡ ಎಂದು ನನ್ನ ತಾಯಿ ಹೇಳಿದ್ದಾರೆ ಎನ್ನುತ್ತಲೇ ಚನ್ನಗಿರಿಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಮಾತನಾಡುತ್ತಲೇ ಗಳಗಳನೆ ಅತ್ತ ಘಟನೆಯೂ ನಡೆದಿದೆ. ಸಭೆಯಲ್ಲಿ ತಾಯಿ ಮಾತು ನೆನಪು ಮಾಡಿಕೊಳ್ಳುತ್ತಾ, ನಮಗೆ ಇನ್ಯಾವ ತೊಂದರೆ ಕೊಡುತ್ತಾರೋ ಗೊತ್ತಿಲ್ಲ, ನಾವೇನು ಮಾಡಿದ್ದೇವೆ ಎಂದು ನಮ್ಮ ಕುಟುಂಬಕ್ಕೆ ಇಷ್ಟು ತೊಂದರೆ ಕೊಡುತ್ತಿದ್ದಾರೊ ಗೊತ್ತಿಲ್ಲ. ನಮ್ಮನ್ನು ಪಕ್ಷ ರಕ್ಷಣೆ ಮಾಡುತ್ತದೆ ಎಂದು ನಾನು ಭಾವಿಸಿದ್ದೇನೆ. ನಾವು ಇಲ್ಲೆ ಹುಟ್ಟಿದ್ದು… ಇಲ್ಲೆ ಸಾಯೋದು. ಯಾರು ಧೃತಿಗೆಡಬೇಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮುಂಬೈನಿಂದ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ‘ರೀಲ್ಸ್​’ ಸ್ಟಾರ್​ ಅಂದರ್!

ಚನ್ನಗಿರಿ ಕ್ಷೇತ್ರಕ್ಕೆ ಮಾಡಾಳ್ ಮಲ್ಲಿಕಾರ್ಜುನ್​ಗೆ ಟಿಕೆಟ್ ನೀಡುವಂತೆ ಪಕ್ಷದ ಹೈಕಮಾಂಡ್​ಗೆ ಬಿಜೆಪಿ ಮುಖಂಡರು ಒತ್ತಾಯ ಮಾಡಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಕೇಸ್ ವಿಚಾರದಲ್ಲಿ ಬಂಧನವಾಗುತ್ತಿದ್ದಂತೆ ತಂದೆಯ ಅನುಪಸ್ಥಿತಿಯಲ್ಲಿ ಪಕ್ಷದ ಮೇಲಿನ ಹಿಡಿತ ಉಳಿಸಿಕೊಳ್ಳಲು ಮಲ್ಲಿಕಾರ್ಜುನ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ:ಬಿಜೆಪಿ ಟಿಕೆಟ್‌ಗಾಗಿ CPI ಹುದ್ದೆಗೆ ರಾಜೀನಾಮೆ; ನಾಗಠಾಣ ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ
ಸಧ್ಯದಲ್ಲೇ ಬಿಜೆಪಿ ಟಿಕೆಟ್ ಘೋಷಣೆ ಆಗುವ ಸಾದ್ಯತೆಯಿದ್ದು, ಮಾಡಾಳ್ ವಿರೂಪಾಕ್ಷಪ್ಪ ಬಂಧನ ನಂತರ ಪಕ್ಷದಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಈ ‘ಹಿನ್ನೆಲೆ ತಾಲೂಕಿನ ಪ್ರಮುಖ ನಾಯಕರನ್ನು ಒಟ್ಟುಗೂಡಿಸಿ ಮಾಡಾಳ್ ಮಲ್ಲಿಕಾರ್ಜುನ ಮಹತ್ವದ ಸಭೆ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
