ದಾವಣಗೆರೆ:ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಭಾರಿ ಮೊತ್ತದ ಹಣ ಸಿಕ್ಕು ತಮ್ಮ ವಿರುದ್ಧ ಆರೋಪ ಬರುತ್ತಿದ್ದಂತೆ ಬಂಧನದ ಭಯದಿಂದ ಕೆಲವು ದಿನಗಳ ಕಾಲ ಕಾಣೆಯಾಗಿದ್ದರು. ಆದರೆ ಬಳಿಕ ನಿರೀಕ್ಷಣಾ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷರಾದ ಅವರು ‘ನಾನು ಎಲ್ಲೂ ಹೋಗಿಲ್ಲ, ಮನೆಯಲ್ಲೇ ಇದ್ದೆ’ ಎಂದಿದ್ದರು.
ಇದನ್ನೂ ಓದಿ:ಚುನಾವಣಾ ಆಯೋಗಕ್ಕೆ ವಿಶೇಷ ಮನವಿ: ಜಾರಿಯಾಗುತ್ತಾ ಹೊಸ ಸೂಚನೆ?
ಅದೇ ಮಾಡಾಳ್ ವಿರೂಪಾಕ್ಷಪ್ಪ ಅವರು ಇಂದು ಬಂಧನದ ಭಯದಿಂದ ಅಜ್ಞಾತವಾಸಿಯಾಗಿದ್ದಾರೆ. ಇದೀಗ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಮಾಡಾಳ್ ಸದ್ಯಕ್ಕೆ ಯಾರಿಗೂ ಸಿಗದಂತಾಗಿದ್ದಾರೆ. ಜಾಮೀನು ಅರ್ಜಿ ವಜಾ ವಿಷಯ ತಿಳಿಯುತ್ತಿದಂತೆ ಚನ್ನಗಿರಿ ಪ್ರವಾಸಿ ಮಂದಿರದಿಂದ ವಿರೂಪಾಕ್ಷಪ್ಪ ದಿಢೀರ್ ತೆರಳಿದ್ದಾರೆ. ಐಬಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತಿದ್ದ ಅವರು, ಅಹವಾಲು ಸ್ವೀಕರಿಸುವುದನ್ನು ಅರ್ಧಕ್ಕೇ ಮೊಟಕುಗೊಳಿಸಿ ತೆರಳಿದ್ದಾರೆ.
ಇದನ್ನೂ ಓದಿ:ನಾನು ತಲೆಮರೆಸಿಕೊಂಡಿಲ್ಲ, ಮನೆಯಲ್ಲೇ ಇದ್ದೆ; ಮತ್ತೆ ಬಿಜೆಪಿ ಸದಸ್ಯತ್ವ ಪಡೆಯುವೆ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ
ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದಿದ್ದ ಮಾಡಾಳ್, ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ತೆರಳಿರುವ ಮಾಡಾಳ್, ಎಲ್ಲಿಗೆ ಹೋಗಿದ್ದಾರೆ, ಈಗ ಎಲ್ಲಿದ್ದಾರೆ ಎಂಬುದರ ಸುಳಿವಿಲ್ಲ.
ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

ಬಾಯ್ಬಿಟ್ಟು ಕೆಟ್ಟಳು ಕಿಡ್ನ್ಯಾಪ್ ಮಾಡಿದ್ದ ಮಹಿಳೆ; ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತು ‘ಹಾಲು-ಉಪ್ಪಿಟ್ಟು’!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + 7 =
Remember me
