ಕೋಲಾರ:ಇಂದು (ಮಾ.17) ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರ ಮೂಲದ ದಂಪತಿ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಕ್ರಾಸ್​ನಲ್ಲಿ ನಡೆದಿದೆ.
ಮೃತ ದಂಪತಿಯನ್ನು ಆಂಧ್ರ ಪ್ರದೇಶದ ಮದನಪಲ್ಲಿಯ ಶಫಿ (55) ಮತ್ತು ಶಾಮಾ‌ (50) ಎಂದು ಗುರುತಿಸಲಾಗಿದೆ. ಕಾರು ಬೆಂಗಳೂರಿನಿಂದ ಮದನಪಲ್ಲಿಗೆ ತೆರಳುತ್ತಿತ್ತು. ಶ್ರೀನಿವಾಸಪುರದ ಲಕ್ಷ್ಮೀಪುರ ಕ್ರಾಸ್​ನಲ್ಲಿ ರಸ್ತೆಯ ಬಲ ಬದಿಯ 20 ರಿಂದ 25 ಅಡಿ ಹಳ್ಳಕ್ಕೆ ಕಾರು ಬಿದ್ದಿದೆ. ಪರಿಣಾಮ ದಂಪತಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಮದ್ವೆ ಹಿಂದಿದೆ ಅದೊಂದು ಪ್ಲಾನ್​: ಪವಿತ್ರಾ ಲೋಕೇಶ್​ ವಿರುದ್ಧ ಮಾಜಿ ಪತಿ ಸುಚೇಂದ್ರ ಪ್ರಸಾದ್ ಗಂಭೀರ ಆರೋಪ​
ಕ್ರೇನ್ ಸಹಾಯದಿಂದ ಕಾರನ್ನು ಮೇಲೆತ್ತಿ ಮೃತ ದೇಹಗಳನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಇದಕ್ಕೂ ಮುನ್ನ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ ಗೌನಿಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದೇಶಕ್ಕೆ ಹೋಗುತ್ತಿದ್ದ ಮಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿ ಅಂಧ್ರ ಪ್ರದೇಶದ ಮದನಪಲ್ಲಿಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ಗೌನಿಪಲ್ಲಿ ಪೊಲೀಸರು ತಿಳಿಸಿದ್ದಾರೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.(ದಿಗ್ವಿಜಯ ನ್ಯೂಸ್​)
ಚಾಲಕ ರಹಿತ ಮೆಟ್ರೋ ಸೇವೆ ಮೂಲಕ ಚೆನ್ನೈ ಮೆಟ್ರೋದಿಂದ ಕ್ರಾಂತಿಕಾರಕ ಬದಲಾವಣೆ

ತಾಳಿ ಕಟ್ಟಿದ 3 ದಿನಕ್ಕೆ ಗಂಡ ನಾಪತ್ತೆ! ಮದ್ವೆ ಫೋಟೋ ಸಾಕ್ಷಿಗೆ ಪತಿ ಕೊಟ್ಟ ಉತ್ತರ ಕೇಳಿ ಪತ್ನಿ ಶಾಕ್​

ಲೈಂಗಿಕ ದೌರ್ಜನ್ಯ ಕುರಿತ ಹೇಳಿಕೆ: ರಾಹುಲ್​ ಗಾಂಧಿಗೆ ದೆಹಲಿ ಪೊಲೀಸರಿಂದ ನೋಟಿಸ್​ ಜಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + sixteen =
Remember me
