ಮದ್ದೂರು:ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಪೌರಕಾರ್ಮಿಕ ನೇಣು ಬಿಗಿದುಕೊಂಡು ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದು, ಮೂವರು ಮಕ್ಕಳೀಗ ಅಪ್ಪನನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ನಾರಾಯಣ್​(35) ಮೃತ. ಪುರಸಭೆಯಲ್ಲಿ ಕಾಯಂ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇವರು ಪಟ್ಟಣದ ಸಿದ್ದಾರ್ಥನಗರ ಬಡಾವಣೆಯಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಸಾವಿಗೂ ಮುನ್ನಾ, “ನನ್ನ ಸಾವಿಗೆ ಪುರಸಭೆಯ ಮುಖ್ಯಾಧಿಕಾರಿ ಮುರಗೇಶ್​ ಹಾಗೂ ಆರೋಗ್ಯ ನಿರೀಕ್ಷಕ ರಸಿಮ್​ಖಾನ್​ ಕಾರಣ’ ಎಂದು ಡೆತ್​ನೋಟ್​ ಬರೆದಿಟ್ಟಿದ್ದಾರೆ.
ನಾರಾಯಣ್​ರ ಪತ್ನಿ ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದು, ಅವರನ್ನು ನಾರಾಯಣ್​ರ ಅತ್ತೆ ನೋಡಿಕೊಳ್ಳುತ್ತಿದ್ದಾರೆ. ಪುರಸಭೆಯಲ್ಲಿ 12 ವರ್ಷಗಳಿಂದ ನಾರಾಯಣ್​ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಯಾವುದೇ ಸ್ವಚ್ಛತಾ ಸಕಲರಣೆ ಇಲ್ಲದೆ ಬರಿಗೈಯಲ್ಲಿ ಮ್ಯಾನ್​ಹೋಲ್​ ಸ್ವಚ್ಛಗೊಳಿಸಿದ್ದರು ಎನ್ನಲಾಗಿದೆ.
ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಣೆಯಿಂದ ತಾನೇ ಮ್ಯಾನ್​ಹೋಲ್​ಗೆ ಇಳಿದಿರುವುದಾಗಿ ಒಪ್ಪಿಕೊಳ್ಳುವಂತೆ ಅಧಿಕಾರಿಗಳು ಒತ್ತಡ ಏರುವ ಮೂಲಕ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ನಾರಾಯಣ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ತಾಯಿ ಇಲ್ಲದ ಕೊರಗಿನಲ್ಲೇ ಇದ್ದ ಮಕ್ಕಳೀಗ ತಂದೆಯನ್ನೂ ಕಳೆದುಕೊಂಡು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಡೆತ್​ನೋಟ್​ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ

ಕೋಟಿ ಮೌಲ್ಯದ ಜಮೀನು ದಾನ ಕೊಡ್ತೀನಿ, ತಾಕತ್​ ಇದ್ರೆ ರಾಮಮಂದಿರ ಕಟ್ಟಿಸಿ: ಸಿದ್ದುಗೆ ರೈತನ ಸವಾಲು

ವಿವಾಹಿತೆ ಜತೆ ಯುವಕನ ಸಲ್ಲಾಪ, ತಡರಾತ್ರಿ ಸಿಕ್ಕಿಬಿದ್ದ ಜೋಡಿಯನ್ನ ಟ್ರ್ಯಾಕ್ಟರ್​ಗೆ ಕಟ್ಟಿಹಾಕಿದ ಗ್ರಾಮಸ್ಥರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + fifteen =
Remember me
