ಹನೂರು:ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ರಸ್ತೆಯಲ್ಲಿ ಹಾದು ಹೋಗುವಾಗ ಪ್ರಾಣಿ-ಪಕ್ಷಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ವಾಹನ ಸವಾರರಿಗೆ ಶನಿವಾರ ಬಣ್ಣಬಣ್ಣದ ಕೋಳಿ‌ಮರಿಗಳ ದರ್ಶನವಾಗಿದೆ.
ಹೂಪಿಳ್ಳೆ ಎಂದೇ ಕರೆಯುವ ಕೋಳಿಮರಿಗಳಿಗೆ ತಾವೆಲ್ಲಿದ್ದೇವೆ ಎಂಬುದರ ಅರಿವೇ ಇಲ್ಲ. ತನ್ನ ಮಾಲೀಕನ್ಯಾರು ಎಂಬುದೂ ಗೊತ್ತಿಲ್ಲ. ಪುಟ್ಟಪುಟ್ಟ- ಕಲರ್​ಫುಲ್​ ಮರಿಗಳು ಪಿಳಿಪಿಳಿ ಕಣ್ಣುಬಿಡುತ್ತ ಅತ್ತಿಂದಿತ್ತ ಹೋಡಾಡುತ್ತಿದ್ದವು. ಇವುಗಳ ಮಾಲೀಕ ಇಲ್ಲೇ ಎಲ್ಲೋ ಹೋಗಿರಬೇಕು ಎಂದು ಸುಮಾರು ಹೊತ್ತು ವಾಹನ ಸವಾರರು ಮತ್ತು ದಾರಿಹೋಕರು ಅಲ್ಲೇ ನಿಂತು ಕೋಳಿಮರಿಗಳ ಚಿನ್ನಾಟ ನೋಡುತ್ತ ನಿಂತಿದ್ದರೂ ಆ ಮಾಲೀಕ ಬರಲೇ ಇಲ್ಲ.
ವ್ಯಾಪಾರ ಮಾಡಲೆಂದು ಬಂದ ವ್ಯಕ್ತಿ 300ಕ್ಕೂ ಹೆಚ್ಚು ಕೋಳಿಮರಿಗಳನ್ನು ರಾಮಾಪುರ ವಲಯ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ. ಇವುಗಳ ಮಾಲೀಕ ಎಷ್ಟೊತ್ತಾದರೂ ಬಾರದ ಕಾರಣ ಕೆಲವರು, ‘ಏ ಪುಕ್ಕಟೆಯಾಗಿ ಸಿಕ್ತಿವೆ ಕೋಳಿಮರಿಗಳು.. ಕೈಗೆ ಸಿಕ್ಕಷ್ಟು ಹಿಡಿದುಕೊಳ್ಳಿ…’ ಎನ್ನುತ್ತಾ ಚೀಲ, ಬ್ಯಾಗ್​, ಕವರ್​ ಹಿಡಿದು ಕೋಳಿಮರಿಗಳನ್ನು ತುಂಬಿಕೊಂಡು ಹೋದರು.
ಕೋಳಿ ಮರಿಗಳಿಗೆ ರೋಗ ಬಂದಿರುವುದಕ್ಕೆ ವ್ಯಾಪಾರಿಗಳು ಕಾಡಿನ ರಸ್ತೆಯಲ್ಲಿ ಬಿಟ್ಟು ಹೋಗಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ

ಕಾಡಾನೆ ದಾಳಿಗೆ ರೈತ ಮತ್ತು ಕೂಲಿ ಕಾರ್ಮಿಕ ದುರ್ಮರಣ, ಭೀಕರ ದೃಶ್ಯಕ್ಕೆ ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − two =
Remember me
