ಶಿವಮೊಗ್ಗ:ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಬಿಜೆಪಿಯವರ ಆರೋಪಗಳಿಗೆ ಸೊಪ್ಪು ಹಾಕುವುದಿಲ್ಲ. ತಿದ್ದುಪಡಿ ಮಾಡಿಯೇ ತೀರುತ್ತೇವೆ ಎಂದು ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿದ ಸಚಿವ ಮಧು ಬಂಗಾರಪ್ಪ ಬಿಜೆಪಿ ಅಂದ್ರೆ ಬಿಜಿನೆಸ್ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ ಎಂದು ವಾಗ್ದಾಳಿ ನಡೆಸಿದ್ಧಾರೆ.
ಮಕ್ಕಳಿಗೆ ಸೂಕ್ತ ಶಿಕ್ಷಣದ ಅವಶ್ಯಕತೆಯಿದೆ. ಅದಕ್ಕೆ ಪೂರವಾಗಿ ಶಾಲಾ ಮಟ್ಟದಿಂದಲ್ಲೇ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಮನದಟ್ಟಾಗಬೇಕು. ಆಗ ಮಾತ್ರ ಸಂವಿಧಾನದ ಪರಿಕಲ್ಷನೆ ಮಕ್ಕಳ ಮನಸ್ಸಿನಲ್ಲಿ ಬೇರೂರಲು ಸಾಧ್ಯ. ಈ ಎಲ್ಲಾ ವಿಚಾರಗಳಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಅತ್ಯಗತ್ಯ ಎಂದು ಹೇಳಿದ್ಧಾರೆ.
ಗ್ಯಾರಂಟಿ ಸರ್ಕಾರ ಹೆಚ್ಚಿನ ದಿನ ಉಳಿಯಲ್ಲ ಎಂಬ ಮಾಜಿ ಸಿಎಂ ಬಿಎಸ್​ವೈ ಹೇಳಿಕೆಗೆ ಪ್ರತಿಕ್ರಿಯಿಸಿ 65 ಇರೋದು 165 ಆಗುತ್ತಾ ಇನ್ನು ಅದೇ ಲೆಕ್ಕದಲ್ಲೇ ಬಿಜೆಪಿಯವರು ಇದ್ದಾರೆ ಎಂದು ಟಾಂಗ್​ ಕೊಟ್ಟಿದ್ಧಾರೆ. ಬಿಜೆಪಿಯವರು ಕಾಂಗ್ರೆಸ್​ ಸರ್ಕಾರದ ಬಗ್ಗೆ ಚಿಂತನೆ ಮಾಡುವುದನ್ನು ಬಿಟ್ಟು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಕುರ್ಚಿ ಉಳಿಸಿಕೊಳ್ಳುವ ಬಗ್ಗೆ ಯೋಚಿಸಲಿ ಎಂದು ತಿರುಗೇಟು ನೀಡಿದ್ಧಾರೆ.
ಇದನ್ನೂ ಓದಿ:ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಗೆ ಚಿಂತನೆ: ಕಂದಾಯ ಸಚಿವ ಕೃಷ್ಣ ಭೈರೇಗೌಡ
ಬಿಜೆಪಿಯವರು ಜೀವಮಾನದಲ್ಲಿ ಯಾವತಾದ್ರೂ ಕರ್ನಾಟಕದಲ್ಲಿ ಸ್ವಂತ ಶಕ್ತಿ ಮೇಲೆ ಬಿಜೆಪಿ ಕೆಲಸ ಮಾಡಿದ್ದಾರಾ‌‌. ಜನರೇ ನಿರ್ಧಾರ ಕೊಟ್ಟಿದ್ದಾರೆ. ಇಂತಹ ಸರ್ಕಾರ ಬೇಡ ಎಂದು ಅದನ್ನು ನೋಡಿ ಮೊದಲು ಕಲಿಯಿರಿ, ಆ ನಂತರ ಭಾಷಣ ಮಾಡಿ ಎಂದು ಸಲಹೆ ನೀಡಿದ್ಧಾರೆ.
ಬಿಜೆಪಿ ಅಂದ್ರೇ ಬಿಜಿನೆಸ್ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ ಮಾಧ್ಯಮಗಳ ಮುಂದೆ ಮಾತ್ರ ಅವರು ಬಾಲ ಬಿಚ್ಚುತ್ತಿದ್ಧಾರೆ. ತನ್ನ ಸ್ವಾರ್ಥದ ರಾಜಕಾರಣದಿಂದ ಆಡಳಿತದ ಅಂತ್ಯಕ್ಕೆ ನಾಂದಿ ಹಾಡಿಕೊಂಡಿದೆ. ಹಿಂದುತ್ವ, ದ್ವೇಷದ ರಾಜಕಾರಣದಿಂದ ತನ್ನ ಚಿಂತನೆಯೆ ಅಸ್ತಿತ್ವ ಕಳೆದುಕೊಂಡಿದೆ. ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಿ ಜನರ ದಿಕ್ಕು ತಪ್ಪಿಸಲು ಹೊರಟಿದ್ಧಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 6 =
Remember me
