ಮಧುಗಿರಿ:ರಸ್ತೆ ಬದಿ ರೈತರೊಬ್ಬರ ಜಮೀನಿನಲ್ಲಿ ಸ್ವತಃ ತಹಸೀಲ್ದಾರ್ ಡಾ. ಜಿ.ವಿಶ್ವನಾಥ್ ಅವರು ಜೋಳ ತುಂಬಿದ್ದ ಮಂಕರಿಯನ್ನು ತಲೆ ಮೇಲೆ ಹೊತ್ತು ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದರು. ಆ ಮೂಲಕ ಸುಗ್ಗಿ ಹಬ್ಬದ ಶುಭಾಶಯ ತಿಳಿಸಿದರು.
ಗುರುವಾರ ಬೆಳೆ ಸಮೀಕ್ಷೆ ನಿಮಿತ್ತ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಮತ್ತು ಕೊಡಿಗೇನಹಳ್ಳಿಗೆ ತಹಸೀಲ್ದಾರ್​ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಐ.ಡಿ.ಹಳ್ಳಿಯ ನಾಗಿರೆಡ್ಡಿಯವರ ಜಮೀನಿನಲ್ಲಿ ಯಂತ್ರ ಬಳಸಿ ಜೋಳ ಬಿಡಿಸುವ ಕೆಲಸದಲ್ಲಿ ರೈತರು ನಿರತರಾಗಿದ್ದರು.ಇದನ್ನೂ ಓದಿರಿಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?
ಅಲ್ಲಿಗೆ ಭೇಟಿ ನೀಡಿದ ತಹಸೀಲ್ದಾರ್, ಕೃಷಿ ಚಟುವಟಿಕೆಗಳ ಬಗ್ಗೆ ಜಮೀನಿನ ಮಾಲೀಕರೊಂದಿಗೆ ಮಾಹಿತಿ ಪಡೆದರು. ಬಳಿಕ ರೈತರ ಕೆಲಸಕ್ಕೆ ಉತ್ತೇಜನ ನೀಡಲು ಸ್ವತಃ ತಾವೇ ಜೋಳ ತುಂಬಿದ ಮಂಕರಿಯನ್ನು ತಲೆ ಮೇಲೆ ಹೊತ್ತು ಯಂತ್ರಕ್ಕೆ ಹಾಕಿದರು.ಅಧಿಕಾರಿಯಂತೆ ದರ್ಪ ತೋರದೆ ರೈತರಂತೆ ನಡೆದುಕೊಂಡ ತಹಸೀಲ್ದಾರ್ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಧಿಕಾರಿಗಳೆಂದರೆ ಹೀಗಿರಬೇಕು ಎಂದು ತಲೆದೂಗಿದ್ದಾರೆ.
ಮಂಡ್ಯದ ತೈಲೂರಿನಲ್ಲಿ ಸಂಕ್ರಾಂತಿ ಸಡಗರ: ಹಾಡು-ಅಡುಗೆ, ಸುಗ್ಗಿ-ಕುಣಿತ

ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 2 =
Remember me
