|ಎನ್. ವೆಂಕಟೇಶಚಿಕ್ಕಬಳ್ಳಾಪುರ
‘ಎಲ್ಲರನ್ನೂ ಪ್ರೀತಿಸಿ, ಎಲ್ಲರ ಸೇವೆ ಮಾಡು’ ಎಂಬ ದಿವ್ಯಸಂದೇಶವನ್ನು ಜಗತ್ತಿಗೆ ಸಾರುವುದರ ಜತೆಗೆ ಆಧ್ಯಾತ್ಮಿಕ ಮತ್ತು ಮಾನವ ಕಲ್ಯಾಣ ಸೇವೆಗಳ ಮೂಲಕ ಶ್ರೇಷ್ಠ ಆಧ್ಯಾತ್ಮಿಕ ಗುರು, ಮಾನವತಾವಾದಿ ಎಂಬ ಗೌರವಕ್ಕೆ ಭಾಜನರಾದವರು ಪುಟ್ಟಪರ್ತಿ ಶ್ರೀ ಸತ್ಯ ಸಾಯಿ ಬಾಬಾ. ಅವರ ಹೆಜ್ಜೆಗುರುತಿನ ಮಾರ್ಗದಲ್ಲಿ ಸಾಗುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ.
ಭಗವಾನ್ ಬಾಬಾ ಅವರು 2011ರ ಏಪ್ರಿಲ್ 24ರಂದು ಭೌತಿಕ ಕಾಯವನ್ನು ತೊರೆದರೂ ಮನುಕುಲದಲ್ಲಿ ದಿವ್ಯತ್ವವನ್ನು ಸುಪ್ತಗೊಳಿಸುವ ಕೆಲಸವನ್ನು ಸದ್ಗುರು ಮಧುಸೂದನ ಸಾಯಿ ಎಂಬ ತಾವೇ ಆರಿಸಿಕೊಂಡ ಮಾಧ್ಯಮದ ಮೂಲಕ ಮುಂದುವರಿಸುತ್ತಿದ್ದಾರೆ ಎಂಬ ದೃಢ ನಂಬಿಕೆ ಭಕ್ತರಲ್ಲಿದೆ. ಇಂದು ಮಧುಸೂದನ ಸಾಯಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಕೆಲಸಕಾರ್ಯಗಳ ಕಿರು ಅವಲೋಕನ ಇಲ್ಲಿದೆ.
ದಶಕದಲ್ಲಿ ವಿಶಿಷ್ಟ ಸಾಧನೆ: ಸತ್ಯ ಸಾಯಿ ಬಾಬಾ ಅವರು ಬಡ ಜನರಿಗೆ ಉಚಿತ ಸೇವೆ ಒದಗಿಸಬೇಕೆಂಬ ಆಶಯದೊಂದಿಗೆ ನಾಲ್ಕು ವಿದ್ಯಾಸಂಸ್ಥೆ ಮತ್ತು 2 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಿದರು. ಹಾಗೆಯೇ ಬಾಬಾರ ಮಾರ್ಗದರ್ಶನದಂತೆ ಮಧುಸೂದನ ಸಾಯಿ ಅವರು ಕಳೆದ ಒಂದು ದಶಕದಲ್ಲಿ ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಭಾರತದಲ್ಲಿ ಮೂರು ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ (ಛತ್ತಿಸ್​ಗಢ, ಹರಿಯಾಣ, ಮಹಾರಾಷ್ಟ್ರ) ಮತ್ತು ಕರ್ನಾಟಕದಲ್ಲಿ (ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಸರಳಾ ಮೆಮೋರಿಯಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ) ಮತ್ತು ವಿದೇಶದಲ್ಲಿ 4 (ನೈಜೀರಿಯಾ, ಅಮೆರಿಕ, ಫಿಜಿ, ಶ್ರೀಲಂಕಾ) ಆಸ್ಪತ್ರೆಗಳನ್ನು ನಿರ್ವಿುಸಿದ್ದಾರೆ. ಇದರೊಟ್ಟಿಗೆ, ಶೈಕ್ಷಣಿಕ ರಂಗದಲ್ಲಿಯೂ ಅವರ ಕಾರ್ಯ ಅನನ್ಯ. ಕರ್ನಾಟಕದ 21 ಜಿಲ್ಲೆಗಳಲ್ಲಿ 40 ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದು, 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಉಚಿತವಾಗಿ ಸಿಗುತ್ತಿದೆ. ಬಡ ಮಕ್ಕಳು 6ನೇ ತರಗತಿಯಿಂದ ಪಿಎಚ್​ಡಿವರೆಗೆ ವ್ಯಾಸಂಗ ಮಾಡಲು ಅನುಕೂಲವಾಗಿದೆ. ಜತೆಗೆ ಉದ್ಯೋಗ ಖಾತ್ರಿ ಸಿಗುತ್ತಿದೆ. ಗುಲ್ಬರ್ಗಾದಲ್ಲಿ ಶ್ರೀ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಸ್ಥಾಪನೆಯು ಅವರ ಶೈಕ್ಷಣಿಕ ಕಾರ್ಯದಲ್ಲಿ ದೊಡ್ಡ ಗರಿಮೆ. ಭಾರತದಲ್ಲಿ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಮತ್ತು ಸಮುದಾಯ ಸೇವಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸೇವೆಯನ್ನು ಸಲ್ಲಿಸುತ್ತಿರುವ ಸಂಸ್ಥೆಗಳ ಜತೆಗೆ 30 ದೇಶಗಳಲ್ಲಿ ವಿವಿಧ ರೀತಿಯಲ್ಲಿ ಪ್ರೀತಿ ಮತ್ತು ಸೇವೆಯ ಮೂಲಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.
ವೈವಿಧ್ಯಮಯ ಕಾರ್ಯ:ಸತ್ಯ ಸಾಯಿ ಬಾಬಾ ಅವರು ಆಧ್ಯಾತ್ಮಿಕ ವಿಶ್ವದ ಮೂಲಕ ದಿವ್ಯಪ್ರಜ್ಞೆಯನ್ನು ಸ್ಥಾಪಿಸಿದ್ದಾರೆ. ಅವರ ನಿಸ್ವಾರ್ಥ ಪ್ರೇಮ ಮತ್ತು ಅಪಾರ ಕರುಣೆಯು ಶಿಕ್ಷಣ, ಆರೋಗ್ಯ, ರಕ್ಷಣೆ, ಕುಡಿಯುವ ನೀರು, ಪೋಷಣೆ ಮತ್ತು ಗ್ರಾಮಗಳ ಅಭಿವೃದ್ಧಿ, ಸಂಕಷ್ಟದಲ್ಲಿದ್ದವರ ನೋವು ನಿವಾರಣೆ ಮಹತ್ಕಾರ್ಯಗಳಲ್ಲಿ ವ್ಯಕ್ತವಾಗಿದೆ. ಪ್ರಪಂಚದ ಲಕ್ಷಾಂತರ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಮಾನವೀಯತೆ, ಆಧ್ಯಾತ್ಮಿಕ ಬೆಳವಣಿಗೆ ಮತ್ತು ಧಾರ್ವಿುಕ ಸಾಮರಸ್ಯ ಕೊಡುಗೆ ಮಹತ್ತರವಾದುದು. ಇದರ ಮುಂದುವರಿದ ಭಾಗವಾಗಿ ಮನುಕುಲದ ಕಲ್ಯಾಣ ಮಾರ್ಗದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಮುನ್ನಡೆಸುತ್ತಿದ್ದಾರೆ. ಏಕೀಕೃತ ಜಗತ್ತು ಮತ್ತು ಏಕ ಜಾಗತಿಕ ಕುಟುಂಬದ ಅತ್ಯುನ್ನತವಾದ ಸಾಕ್ಷಾತ್ಕಾರದ ಕಡೆಗೆ ಕರೆದುಕೊಂಡು ಹೋಗುವ ದಿವ್ಯಪ್ರಜ್ಞೆಯ ಮಾರ್ಗದರ್ಶಿಯಾಗಿದ್ದಾರೆ.
ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರು ಅಧ್ಯಾತ್ಮವನ್ನು ಗುಡಿ ಗುಂಡಾರಗಳಿಂದ ಬಿಡಿಸಿ ಸೇವೆಯ ಜತೆ ಜೋಡಿಸಿದವರು. ಅವರ ಅದ್ಭುತ ಸೇವಾ ಕಾರ್ಯವನ್ನು ಮುಂದುವರಿಸಿರುವುದು ಶ್ಲಾಘನೀಯ.
|ನರೇಂದ್ರ ಮೋದಿಪ್ರಧಾನಮಂತ್ರಿ
ಭಗವಾನ್ ಬಾಬಾ ಅವರು 2011ರಲ್ಲಿ ಭೌತಿಕ ಶರೀರವನ್ನು ತ್ಯಜಿಸಿದರೂ, ಸದ್ಗುರು ಮಧುಸೂದನ ಸಾಯಿಯವರ ಮೂಲಕ ಪೂರ್ಣ ಪ್ರಮಾಣದಲ್ಲಿ ಸೇವಾ ಕಾರ್ಯಗಳನ್ನು, ಮಾರ್ಗದರ್ಶನ ನೀಡುವುದನ್ನು ಮುಂದುವರಿಸಿದ್ದಾರೆ.
|ಬಿ.ಎನ್. ನರಸಿಂಹಮೂರ್ತಿಕುಲಾಧಿಪತಿ, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ
ಇಲ್ಲಿ ಅಧ್ಯಾತ್ಮ, ಸೇವೆ, ಸರಳತೆ ಒಂದಾಗಿವೆ. ದಿವ್ಯತ್ವದ ಪ್ರೇರಣೆಯಿಲ್ಲದೆ ಇಂತಹ ಸೇವಾಕಾರ್ಯಗಳಿಗಾಗಿ ಜನರೆಲ್ಲ ಒಂದಾಗುವುದು ಸಾಧ್ಯವೇ ಇಲ್ಲ. ಸದ್ಗುರು ಮಧುಸೂದನ ಸಾಯಿ ಅವರ ಮೂಲಕ ಮತ್ತಷ್ಟು ಕೆಲಸಗಳು ವೇಗಗತಿಯಲ್ಲಿ ಸಾಗುತ್ತಿರುವುದು ಖುಷಿಯ ವಿಚಾರ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಕೃತಿಗಳ ಮೂಲಕ ಸಂದೇಶ:ಲೋಕಕಲ್ಯಾಣ ಸಂದೇಶ ಸಾರುವ ನಿಟ್ಟಿನಲ್ಲಿ ಮಧುಸೂದನ ಸಾಯಿ ಅನೇಕ ಪುಸ್ತಕಗಳನ್ನು ಬರೆದು, ಹೊರತಂದಿದ್ದಾರೆ. ಅಂತರ್ ದರ್ಶನ, ಶ್ರೀ ಸತ್ಯಸಾಯಿ ಉವಾಚ, ಫ್ರಮ್ ಹಾರ್ಟ್ ಟು ಹಾರ್ಟ್, ಇನ್ನರ್​ವ್ಯೂ, ದಿ ಸ್ಟೋರಿ ಡಿವೈನ್ ಭಾಗ-1 ಮತ್ತು ಭಾಗ-2 ಸೇರಿ ಅನೇಕ ಪ್ರಮುಖ ಪುಸ್ತಕಗಳು ಬಂದಿವೆ. ಕನ್ನಡ, ಇಂಗ್ಲಿಷ್, ತಮಿಳು, ಮರಾಠಿ, ಮಲಯಾಳಂ, ಹಿಂದಿ ಸೇರಿ ನಾನಾ ಭಾಗಗಳಲ್ಲಿ ದೇಶ-ವಿದೇಶಗಳನ್ನು ತಲುಪಿ, ಭಕ್ತ ಸಮುದಾಯದಲ್ಲಿ ಹೊಸ ಚೈತನ್ಯ ಮೂಡಿಸಿವೆ.
ನಾನು ರಾಜಕೀಯಕ್ಕೆ ಬರಲು ಕಾರಣ ಮುಸ್ಲಿಂ ಗುರುಗಳಲ್ಲ, ಒಕ್ಕಲಿಗ ಸ್ವಾಮೀಜಿ: ಜಮೀರ್ ಅಹ್ಮದ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
