ವಿಜಯನಗರ:ಎಲ್ಲೆಡೆ ವೇಗವಾಗಿ ಮದ್ರಾಸ್ ಐ ಸೋಂಕು ಹಬ್ಬುತ್ತಿದ್ದು, ವಿಜಯನಗರ ಜಿಲ್ಲೆಯಲ್ಲಿ ನಿತ್ಯವೂ ನೂರಾರು ಪ್ರಕರಣಗಳು ದಾಖಲಾಗುತ್ತಿವೆ.
ಇದನ್ನೂ ಓದಿ:ಪಸರಿಸುತ್ತಿದೆ ಮದ್ರಾಸ್ ಐ ಸೋಂಕು
ಇಲ್ಲಿಯವರೆಗೆ ವಿಜಯನಗರ ಜಿಲ್ಲೆಯಲ್ಲಿ ಅಂದಾಜು 2,400 ಪ್ರಕರಣ ದಾಖಲಾಗಿದ್ದು ಹರಪನಹಳ್ಳಿ, ಹಡಗಲಿ ಹಾಗೂ ಕೂಡ್ಲಿಗಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅತೀ ಹೆಚ್ಚು ಸೋಂಕು ಪತ್ತೆಯಾಗಿದೆ. ಈ ಸೋಂಕು ಮಕ್ಕಳಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಚಿಕ್ಕ ಮಕ್ಕಳಿಗೆ ಗೊತ್ತಾಗದೇ ಇರುವುದರಿಂದ ಸೋಂಕು ಹರಡುವಿಕೆ ಹೆಚ್ಚಾಗುವ ಆತಂಕ ಇದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಮಗುವಿಗೆ ಸೋಂಕು ಬಂದರೂ ಆ ಮಗುವಿಗೆ ರಜೆ ಕೊಡಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ:ಪಿಂಕಾದವೋ ಕಣ್ಣು… ಹೆಚ್ಚಿದ ಬೇನೆ: ಪಿಂಕ್ ಐ, ರೆಡ್ ಐ, ಮದ್ರಾಸ್ ಐ ಉಲ್ಬಣ; ಹವಾಮಾನ ವೈಪರೀತ್ಯದಿಂದ ತೀವ್ರತೆ
ಮದ್ರಾಸ್ ಐ ಸೋಂಕು ಬಂದಾಗ ಬೆಳಗಿನ ಜಾವ ರೆಪ್ಪೆಗಳು ಅಂಟಿಕೊಳ್ಳುತ್ತವೆ. ಮದ್ರಾಸ್ ಐ ಸೋಂಕು ಬಂದಾಗ ಬೆಚ್ಚಗಿನ ನೀರಿನಿಂದ ಕಣ್ಣನ್ನು ತೊಳೆಯಬೇಕು. ಈ ಬಗ್ಗೆ ವಿಜಯನಗರ ಜಿಲ್ಲೆಯ ಡಿಎಚ್ಓ ಡಾ. ಸಲೀಂ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಬೀಸುತ್ತಿದೆ ಮದ್ರಾಸ್-ಐ ಸೋಂಕಿನ ಗಾಳಿ – 12 ವರ್ಷದೊಳಗಿನವರೇ ಹೆಚ್ಚು ಬಾಧಿತರು
ಡಾ. ಸಲೀಂ, “ಮದ್ರಾಸ್ ಐ ಬಗ್ಗೆ ಜನರು ಜಾಗೃತಿಯಿಂದ ಇರಬೇಕು. ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳನ್ನ ಬಳಸಬಾರದು. ಮದ್ರಾಸ್ ಐ ಸೋಂಕು ಬಂದರೆ ಹೆಚ್ಚು ತುರಿಕೆ ಇರುತ್ತದೆ. ಜನರು ತಿಳಿಯದೇ ಚೆನ್ನಾಗಿ ಕಣ್ಣನ್ನು ಉಜ್ಜುತ್ತಾರೆ. ಅದನ್ನ ಮಾಡಬೇಡಿ. ಕಣ್ಣನ್ನ ಉಜ್ಜಿದ್ರೆ ಕಾರ್ನಿಯಲ್ ಅಲ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು” ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + seven =
Remember me
