ಮಾಗಡಿ:ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಕೆಎಸ್​ಆರ್​ಟಿಸಿಬಸ್​ ನಿಲ್ದಾಣದಲ್ಲಿ ಬಳಿ ಇರುವ ಉಮಾಮಹೇಶ್ವರಿ ದೇವಸ್ಥಾನದ ಶಿವಲಿಂಗ ಕಣ್ಣು ತೆರೆದಿದೆ ಎಂಬ ವದಂತಿ ಹಬ್ಬಿದ ಹಿನ್ನೆಲೆ ಇದನ್ನು ನೋಡಲು ಸಾವಿರಾರು ಭಕ್ತರು ದೇಗುಲಕ್ಕೆ ಆಗಮಿಸಿದ ಘಟನೆ ನಡೆದಿದೆ.
ಶಿವಲಿಂಗದಲ್ಲಿ ಕಣ್ಣು ತೆರೆದಿರುವ ಚಿತ್ರಗಳು ವೈರಲ್​ ಆಗಿದ್ದು, ಇದನ್ನು ನೋಡಲು ದೇವಸ್ಥಾನದ ಬಳಿ ಜನ ಸೇರುತ್ತಿದ್ದಾರೆ. ದೇವಸ್ಥಾನ 50 ವರ್ಷ ಹಳೆಯದಾಗಿದ್ದು, ಬಸವೇಶ್ವರ ದೇವಸ್ಥಾನ ಟ್ರಸ್ಟ್​ ವತಿಯಿಂದ ಉಮಾಮಹೇಶ್ವರಿ ದೇವಸ್ಥಾನವನ್ನು 5 ವರ್ಷದ ಹಿಂದೆ ಜೀರ್ಣೊದ್ಧಾರ ಮಾಡಲಾಗಿತ್ತು.
ಅರ್ಚಕರಾದ ರುದ್ರೇಶ್​ ಅವರು ಶುಕ್ರವಾರ ದೇವಸ್ಥಾನಕ್ಕೆ ಬಂದಿರಲಿಲ್ಲ. ಅವರ ಸಹೋದರ ಚಂದನ್​ ಪೂಜೆ ಮಾಡುತ್ತಿದ್ದರು. ಸಂಜೆ ಹೊತ್ತಿನಲ್ಲಿ ಪಟ್ಟಣದ ಹೊಸಪೇಟೆಯ ನಾಗೇಶ್​ ಎಂಬ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೊಬೈಲ್​ನಲ್ಲಿ ಫೋಟೋ ತೆಗೆದುಕೊಂಡಿದ್ದಾರೆ. ನಂತರ ಫೋಟೋವನ್ನು ಗಮನಿಸಿದಾಗ ಲಿಂಗದಲ್ಲಿರುವ ಕಣ್ಣನ್ನು ಕಂಡು ಅರ್ಚಕ ರುದ್ರೇಶ್​ಗೆ ತಿಳಿಸಿದ್ದಾರೆ. ಆಗ ಪರೀಕ್ಷೆ ಮಾಡಿದಾಗ ಲಿಂಗದಲ್ಲಿ ಕಣ್ಣು ಮೂಡಿರುವುದು ಕಂಡುಬಂದಿದೆ.
ವಸ್ಥಾನದ ಟ್ರಸ್ಟ್​ ಅಧ್ಯಕ್ಷ ವಿಜಯಸಿಂಹ ಕೂಡ ಈ ಬಗ್ಗೆ ಪರೀಕ್ಷೆ ಮಾಡಿಸಿದ್ದು, ಅರ್ಚಕರ ಕೈಯಲ್ಲಿ ಶಿವಲಿಂಗವನ್ನು ಒರೆಸಿ ನೋಡಿದಾಗಲೂ ಬದಲಾವಣೆ ಕಂಡುಬಂದಿಲ್ಲ. ರಾತ್ರಿ ಆಗುತ್ತಿದ್ದಂತೆ ಕಣ್ಣು ಮುಚ್ಚಿಕೊಂಡ ರೀತಿಯಲ್ಲಿ ಕಾಣಿಸುತ್ತಿದ್ದು, ವಿಸ್ಮಯದ ದರ್ಶನಕ್ಕೆ ಜನರು ಸೇರುತ್ತಿದ್ದಾರೆ. ಈ ರೀತಿ ನಡೆದಿರುವುದು ನಮಗೂ ಅಚ್ಚರಿ ಮೂಡಿಸಿದೆ. ಯಾರು ಬೇಕಾದರೂ ಪರೀಕ್ಷೆ ಮಾಡಿಕೊಳ್ಳಲಿ ಎಂದು ದೇವಸ್ಥಾನದ ಟ್ರಸ್ಟ್​ನವರು ತಿಳಿಸಿದ್ದಾರೆ.
ಉಡುಪಿಯಲ್ಲಿ ದುರಂತ: ಮದ್ವೆ ಮುನ್ನಾ ದಿನದ ರೋಸ್ ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಯುವತಿ ಸಾವು!

ನಾನು ಮದ್ವೆ ಆಗ್ಬೇಕು, ಪ್ಲೀಸ್​ ಹೆಣ್ಣು ಹುಡುಕಿ ಕೊಡಿ ಸಾರ್… ಶಿವಮೊಗ್ಗ ಎಸ್ಪಿಗೆ ಜಾತಕ ಕೊಟ್ಟು ಅರ್ಜಿ ಸಲ್ಲಿಸಿದ ಯುವಕ!

ಉಡುಪಿಯಲ್ಲಿ ದುರಂತ: ಮದ್ವೆ ಮುನ್ನಾ ದಿನದ ರೋಸ್ ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಯುವತಿ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 11 =
Remember me
