ಮಂಗಳೂರು:ಮಂಗಳೂರಿನ ಕುಮಾರ್ ಇಂಟರ್ ನ್ಯಾಷನಲ್ ಹೋಟೆಲ್​ನಲ್ಲಿ ಸ್ನೇಹಿತರೊಂದಿಗೆ ಕುಳಿತಿದ್ದ ಯುವತಿ ಮೇಲೆ ಆಕೆಯ ಮಾಜಿ ಲವರ್​ನ ಗ್ಯಾಂಗ್​ ದಾಳಿ ಮಾಡಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಯುವತಿಯ ಮಾಜಿ ಲವರ್​ ತ್ರಿಶೂಲ್(19), ಸಂತೋಷ್ ಪೂಜಾರಿ (19), ಡ್ಯಾನಿಶ್ ಅರೆನ್ ಡಿಕ್ರೋಸ್ (18) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ತ್ರಿಶೂಲ್​ ಜತೆ ಲವ್ ಬ್ರೇಕ್ ಆಪ್ ಮಾಡಿಕೊಂಡು ರಿಂಗ್ ವಾಪಸ್ ಕೊಟ್ಟು ಹೋಗಿದ್ದ 18 ವರ್ಷದ ಯುವತಿ ಜ.30ರಂದು ಮತ್ತೊಬ್ಬ ಯುವಕನ ಜೊತೆ ಹೋಟೆಲ್​ನಲ್ಲಿ ಬರ್ತ್​ ಡೇ ಪಾರ್ಟಿ ಮಾಡಿಕೊಳ್ಳುತ್ತಿದ್ದಳು. ಈ ವೇಳೆ ಆಕೆಯ ಜತೆಯಲ್ಲಿ ಕೆಲ ಸ್ನೇಹಿತರೂ ಇದ್ದರು.ಇದನ್ನೂ ಓದಿರಿಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!
ಇದೇ ವೇಳೆ ಹೋಟೆಲ್​ಗೆ ತನ್ನ ಸ್ನೇಹಿತರೊಂದಿಗೆ ನುಗ್ಗಿದ್ದ ತ್ರಿಶೂಲ್​, ಮಾಜಿ ಪ್ರೇಯಸಿ ಜೊತೆಯಿದ್ದ ಪ್ರತೀಕ್ಷ್ ಎಂಬಾತನಿಗೆ ಚೂರಿಯಿಂದ ಇರಿದಿದ್ದಾನೆ. ಪ್ರತೀಕ್ಷ್​ಗೆ ನಾಲ್ಕು ಕಡೆ ಚೂರಿಯಿಂದ ಇರಿಯಲಾಗಿದ್ದು, ಜತೆಯಲ್ಲಿದ್ದವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆಯ ದೃಷ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತನ್ನೊಂದಿಗೆ ಲವ್​ ಬ್ರೇಕ್ ಆಪ್ ಮಾಡಿಕೊಂಡು ಮತ್ತೊಬ್ಬನೊಂದಿಗೆ ಬರ್ತ್​ ಡೇ ಪಾರ್ಟಿ ಮಾಡಿಕೊಳ್ಳುತ್ತಿರುವುದನ್ನ ಸಹಿಸದೆ ಮಾರಣಾಂತಿಕ ಹಲ್ಲೆ ಮಾಡಿದ ಭಗ್ನ ಪ್ರೇಮಿ ಇದೀಗ ಸಹಚರರೊಂದಿಗೆ ಮಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಸಿಎಂ ದಿ. ಧರ್ಮಸಿಂಗ್​‌ ಸಂಬಂಧಿ ಕೊಲೆ, 10 ದಿನದ ಬಳಿಕ ಪ್ರಕರಣ ಬಯಲು

ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 7 =
Remember me
