ಬೆಂಗಳೂರು:ಗೊರಕೆ ಹೋಗುವ ಟೋಪಿ ಕೊಡ್ತೀವಿ ಎಂದು ಹೇಳಿ ಖುದ್ದಾಗಿ ಟೋಪಿಯನ್ನು ಜನರ ತಲೆ ಮೇಲೆ ಇಟ್ಟ ಇವರು ಈಗ ಪೊಲೀಸರ ಅತಿಥಿಗಳು. ಅದಲ್ಲದೇ, ನಮ್ಮ ನೆಟ್ವರ್ಕ್​ಗೆ ಇನ್ನೊಬ್ಬರನ್ನು ಸೇರಿಸಿದರೆ ನಿಮಗೂ ಆದಾಯ ಬರುತ್ತೆ ಎಂದು ನಂಬಿಸಿ ಪಿರಮಿಡ್​ ಸ್ಕೀಮ್​ ಒಂದನ್ನು ಜನರಿಗೆ ರಂಗುರಂಗಾಗಿ ಹೇಳಿ ನಾಮ ಹಾಕುತ್ತಿದ್ದರು.
ಇವರು, ಮ್ಯಾಗ್ನೆಟಿಕ್ ಅಂಶವಿರುವ ಟೋಪಿ ಹಾಕಿದರೆ ಗೊರಕೆ ನಿಲ್ಲುತ್ತದೆ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದರು. ಇದರ ಜೊತೆಗೆ ಚೈನ್​ಲಿಂಕ್ ವ್ಯವಹಾರವನ್ನೂ ಈ ಕಂಪನಿ ಮಾಡುತ್ತಿತ್ತು.
ಏನಿದು ಪಿರಮಿಡ್​/ಚೈನ್​ಲಿಂಕ್​ ಸ್ಕೀಮ್​?ಪಿರಮಿಡ್​ ಅಥವಾ ಚೈನ್​ಲಿಂಕ್​ ಸ್ಕೀಮ್​ನಲ್ಲಿ ಒಂದು ಕಂಪೆನಿ, ತನ್ನ ಗ್ರಾಹಕರ ಸಂಖ್ಯೆಯನ್ನು ಹಠಾತ್​ ಆಗಿ ಹೆಚ್ಚಿಸಲು ಬಳಸುವ ಒಂದು ವಿಧಾನವಾಗಿದೆ. ಈ ರೀತಿಯ ನಕಲಿ ಕಂಪೆನಿಗಳು ವಿಶೇಷವಾಗಿ ಲಾಕ್​ಡೌನ್​ ಸಮಯದಲ್ಲಿ ತಲೆ ಎತ್ತಿದ್ದವು. ಇವು ಒಬ್ಬರ ಕೈಯಲ್ಲಿ ಹಣ ಇನ್ವೆಸ್ಟ್​ ಮಾಡಿಸಿ ಅವರ ಕೈಯಲ್ಲಿ ಇನ್ನೂ ಒಂದಷ್ಟು ಜನರನ್ನು ತಮ್ಮ ಕಂಪೆನಿಯಲ್ಲಿ ಹೂಡುವಂತೆ ಪುಸಲಾಯಿಸುತ್ತವೆ. ಕಮಿಷನ್ ಆಸೆ ತೋರಿಸುವ ಇವರು ಇಷ್ಟು ಜನರನ್ನು ಸೇರಿಸಿದರೆ ಇಷ್ಟು ಆದಾಯ ನಿಮಗೆ ಸಿಗುತ್ತೆ, ಇಷ್ಟು ಜನರನ್ನು ಸೇರಿಸಿದ ನಂತರ ನಿಮ್ಮ ಹೂಡಿಕೆ ನಿಮಗೆ ಮರಳುತ್ತದೆ ಎಂದು ನಂಬಿಸಿ ಕಡೆಗೆ ಎಲ್ಲಾ ಹಣವನ್ನು ಹಿಡಿದು ಪರಾರಿ ಆಗುತ್ತಾರೆ. ಇಂತಹ ಕಂಪೆನಿಗಳು ಹಣದ ವ್ಯವಹಾರ ಎಲ್ಲಾ ಸರಿ ಇದೆ ಎಂದು ನಂಬಿಸಲು ಗೊರಕೆ ನಿಯಂತ್ರಣ ಯಂತ್ರದಂತಹ ಕೆಲವು ವಸ್ತುಗಳನ್ನು ಮಾರಾಟ ಮಾಡುತ್ತಾರೆ.
ಶೇಕ್ ಸಾಧಿಕ್ ,ಯೋಗೇಶ್, ಪ್ರಮೋದ್, ಸುನೀಲ್ ಜೋಷಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಇವರೂ ಪಿರಮಿಡ್ ರೀತಿಯಲ್ಲಿ ಗ್ರಾಹಕರಿಂದ ಹಣ ಸಂಗ್ರಹಿಸಿ ವಂಚನೆ ಮಾಡುತ್ತಿದ್ದರು. ಇವರು ಇ ಬಯೋಮೆಟ್ರಿಕ್ ಎವಾಲ್ಯೂಷನ್ ಎಂಬ ಕಂಪನಿಯ ಹೆಸರಲ್ಲಿ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇನ್‌ಸ್ಪೆಕ್ಟರ್ ಶಿವಸ್ವಾಮಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

300 ರೂ. ಟೋಪಿಗೆ 5 ಸಾವಿರ ರೂ. ಬೆಲೆ!ಇವರು ಎಷ್ಟು ಚಾಲಾಕಿ ಎಂದರೆ 300 ರೂಪಾಯಿ ಬೆಲೆಬಾಳುತ್ತಿದ್ದ ಟೋಪಿಯನ್ನು 5000 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ವಂಚಕರು, ಗ್ರಾಹರಿಂದ ಡೆಪಾಸಿಟ್ ಮಾಡಿಕೊಂಡು ಹೆಚ್ಚಿನ ಹಣದ ಆಮಿಷ ಒಡ್ಡುತ್ತಿದ್ದರು. ಗ್ರಾಹಕರನ್ನು ಆಕರ್ಷಿಸಲು ಮಲ್ಟಿ ಲೆವೆಲ್ ಮನಿ‌ ಮಾರ್ಕೆಟಿಂಗ್ ಸ್ಕೀಮ್ ನಡೆಸಲು ಜಾಹಿರಾತು ನೀಡಿ ಆಮಿಷ ಒಡ್ಡುತ್ತಿದ್ದರು.
ಆರೋಪಿಗಳನ್ನು ಬಂಧಿಸಿದ ಪೊಲೀಸರು, ಮುಖ್ಯಸ್ಥ ಸುನೀಲ್‌ ಜೋಶಿ ಬ್ಯಾಂಕ್ ಖಾತೆಯಲ್ಲಿದ್ದ 30 ಲಕ್ಷಕ್ಕು ಹೆಚ್ಚು ಹಣ ಜಪ್ತಿ ಮಾಡಿದ್ದಾರೆ. ಸದ್ಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
18ರ ಯುವಕನಂತೆ ಕಾಣಲು ಈತ ದಿನಕ್ಕೆ 16 ಕೋಟಿ ರೂ. ಖರ್ಚು ಮಾಡುತ್ತಾನೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + twelve =
Remember me
