ಬೆಂಗಳೂರು:ತೆರಿಗೆ ತಾರತಮ್ಯ, ಅನುದಾನ ಹಂಚಿಕೆ ವಿಚಾರದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಮಹದಾಯಿ ಹೋರಾಟದ ಮಹಾಕಹಳೆ ಮೊಳಗಿಸಿದೆ. ಮಹದಾಯಿ ವಿಚಾರವಾಗಿ ವನ್ಯಜೀವಿ ಮಂಡಳಿ ಯಾವುದೇ ತೀರ್ಮಾನ ಕೈಗೊಳ್ಳದೆ ವಿಷಯ ಬಾಕಿ ಇಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತರಲು ಮೂರು ರೀತಿಯ ಸಮರ ಸಾರಲು ತೀರ್ವನಿಸಿದೆ.
ಕೇಂದ್ರದ ವನ್ಯಜೀವಿ ಮಂಡಳಿಯ 79ನೇ ಸಭೆ ಎದುರು ಮಹದಾಯಿ ಯೋಜನೆಗೆ ಅನುಮತಿ ನೀಡುವ ಅಜೆಂಡಾ ಇತ್ತು. ಆದರೆ ಈ ವಿಚಾರವಾಗಿ ಯಾವುದೇ ತೀರ್ಮಾನ ಹೊರಬೀಳದ ಹಿನ್ನೆಲೆಯಲ್ಲಿ ಈ ವಿಚಾರ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಗೊಳಪಟ್ಟಿತು. ಈ ವಿಚಾರವಾಗಿ ಸರ್ವಪಕ್ಷ ಸಭೆ ಕರೆದು ನಿರ್ಣಯ ಕೈಗೊಂಡು ಪ್ರಧಾನಿ ಬಳಿಗೆ ತೆರಳಿ ಕೇಂದ್ರದ ಮಧ್ಯಸ್ಥಿಕೆಗೆ ಒತ್ತಾಯಿಸುವುದು, ಕಾನೂನು ತಜ್ಞರ ಜತೆ ರ್ಚಚಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಸಚಿವರ ವಿಷಾದ:ನಮ್ಮ ಸರ್ಕಾರ ಬಂದಾಗಿನಿಂದಲೂ ಯೋಜನೆಗೆ ಅನುಮತಿ ಪಡೆಯುವ ಪ್ರಯತ್ನ ನಡೆದಿದೆ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಯೋಜನೆಗೆ ಒಪ್ಪಿಗೆ ಸಿಕ್ಕಿದೆ ಎಂದು ಕೆಲವರು ಕಾಗದ ತೋರಿಸಿದ್ದರು, ಗೋವಾ ಸಿಎಂ ಒಪ್ಪಿದ್ದಾರೆ ಎಂದಿದ್ದರು. ಅನೇಕ ಬಾರಿ ಚರ್ಚೆ ಕೂಡ ನಡೆದಿತ್ತು. ಈಗ ಯಾವುದೇ ಕೆಲಸ ಮಾಡದಂತೆ ಕೇಂದ್ರ ಸರ್ಕಾರದ ಮಂಡಳಿ ತೀರ್ಮಾನ ಮಾಡಿದೆ. ಮಂಡಳಿಯ ಸಭೆ ಇನ್ಯಾವಾಗ ಆಗುತ್ತದೋ ತಿಳಿದಿಲ್ಲ ಎಂದು ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಇದು ಕರ್ನಾಟಕ ಸರ್ಕಾರದ ಯೋಜನೆಯಾಗಿದ್ದು, ಗೋವಾ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತಿಳಿಸಿದರು. ಚರ್ಚೆಯ ನಂತರ, ಈ ವಿಷಯವನ್ನು ಮುಂದಿನ ಸಭೆಗೆ ಮುಂದೂಡಲು ಮಂಡಳಿಯು ತೀರ್ವನಿಸಿತು ಎಂದು ಎಚ್.ಕೆ.ಪಾಟೀಲ ವಿವರಿಸಿದರು.
ಮಹದಾಯಿಗೆ ವನ್ಯಜೀವಿ ಮಂಡಳಿ ಅನುಮೋದನೆ ನಿರೀಕ್ಷೆ ಹುಸಿಯಾಗಿದೆ. ಗೋವಾದ 435 ಎಕರೆ ಅರಣ್ಯ ಭೂಮಿ ಬಳಕೆಯಾಗುವ ವಿದ್ಯುತ್ ಮಾರ್ಗಕ್ಕೆ ಮಂಡಳಿ ಒಪ್ಪಿಗೆ ನೀಡುತ್ತದೆ. ಆದರೆ, ರಾಜ್ಯದ ಪ್ರಸ್ತಾವನೆ ಮುಂದೂಡಲಾಗುತ್ತದೆ.
| ಎಚ್.ಕೆ. ಪಾಟೀಲ್ ಕಾನೂನು ಸಚಿವ
* ಯೋಜನೆ ಪ್ರದೇಶ ಅಧ್ಯಯನ ಉದ್ದೇಶ
* ಹುಲಿ ಸಂರಕ್ಷಣಾ ಪ್ರಾಧಿಕಾರ ಎಂಟ್ರಿ
* ತಜ್ಞರ ತಂಡ ಕೆಲ ಶಿಫಾರಸು ಮಾಡಿದೆ
* ಪ್ರಾಧಿಕಾರದಿಂದ ಪ್ರತಿಕ್ರಿಯೆ ಕೇಳಲಾಗಿತ್ತು
* ಸಬ್​ಜುಡೀಸ್ ಕಾರಣ ಪ್ರತಿಕ್ರಿಯೆ ನೀಡಿಲ್ಲ
ಸ್ಕ್ರಾಪಿಂಗ್ ಪ್ರೋತ್ಸಾಹ ಅವಧಿ ವಿಸ್ತರಣೆ:ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ 2022ನ್ನು ಅನುಷ್ಠಾನಗೊಳಿಸಲು 15 ವರ್ಷಗಳನ್ನು ಪೂರೈಸಿರುವ ವಾಹನಗಳನ್ನು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನಾಶಗೊಳಿಸಲು ಮುಂದಾದಲ್ಲಿ, ವಾಹನಗಳ ಮೇಲೆ ಕೊನೆ 1 ವರ್ಷದ ಪ್ರಕರಣಗಳಲ್ಲಿನ ಬಾಕಿ ಇರುವ ದಂಡಗಳ ವಸೂಲಿಯಿಂದ ವಿನಾಯಿತಿ ನೀಡಿರುವ ಅವಧಿಯನ್ನು 2026 ಮಾ.31ರವರೆಗೆ ವಿಸ್ತರಿಸಲಾಗಿದೆ.
1. ಶ್ರೀಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ವಿಚಾರದಲ್ಲಿ ನ್ಯಾಯಾಂಗ ಉಲ್ಲಂಘನೆಯಾಗಿಲ್ಲ ಎಂಬ ಬಗ್ಗೆ ವಿಸõತ ಚರ್ಚೆ
2. ಕೌಶಲ ಉದ್ಯೋಗಿಗಳ ಸೃಷ್ಟಿಗೆ 100 ಕೋಟಿ ರೂ. ವೆಚ್ಚದಲ್ಲಿ ನಿಪುಣ ಕರ್ನಾಟಕ ಯೋಜನೆ ಜಾರಿ, ಈ ವರ್ಷ 10 ಕೋಟಿ ರೂ. ಬಳಕೆ
3. ಜೈವಿಕ ತಂತ್ರಜ್ಞಾನ ಕ್ಷೇತ್ರ ಪ್ರೋತ್ಸಾಹಿಸಲು ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ 4.0 ಗೆ (2024-29) ಅನುಮೋದನೆ
4. ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 59 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆಗೆ ನಿರ್ಧಾರ
5. ರಾಜ್ಯಪಾಲರು ವಾಪಸ್ ಕಳಿಸಿದ 11 ಮಸೂದೆ ಪೈಕಿ ಐದು ಮಸೂದೆಗಳಿಗೆ ಸರ್ಕಾರದಿಂದ ಸಮಜಾಯಿಷಿ, ಉಳಿದವು ಶೀಘ್ರವೇ ಸ್ಪಷ್ಟನೆಯೊಂದಿಗೆ ರವಾನೆ
ಗ್ರೂಪ್ -ಬಿ, ಸಿ ಹುದ್ದೆ ವಯೋಮಾನ ಸಡಿಲ:ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್- ಬಿ ಮತ್ತು ಗ್ರೂಪ್ -ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳಿಗೆ ಹೆಚ್ಚಿಸಲು ಒಂದು ಬಾರಿಯ ಕ್ರಮವಾಗಿ 1 ವರ್ಷದ ಅವಧಿಗೆ ಸಡಿಲಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಸಾಮಾನ್ಯ ವರ್ಗಕ್ಕೆ 35, ಪ್ರವರ್ಗಗಳಿಗೆ 38 ಮತ್ತು ಪರಿಶಿಷ್ಟ ಜಾತಿ, ಪಂಗಡಗಳಿಗೆ 40 ವರ್ಷ ಗರಿಷ್ಠ ವಯೋಮಿತಿಯಿದೆ. ಒಂದು ವರ್ಷದ ಮಟ್ಟಿಗೆ ಒಂದು ಬಾರಿಗೆ ಮೂರು ವರ್ಷಗಳಿಗೆ ಹೆಚ್ಚಳವಾಗಲಿದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಫುಡ್ಕಿಟ್ ಇಲ್ಲ, ಡಿಬಿಟಿ ಮುಂದುವರಿಕೆ:ಅನ್ನ ಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿ ಹೊರತಾಗಿ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆಯನ್ನೊಳಗೊಂಡ ಫುಡ್ ಕಿಟ್ ವಿತರಿಸಬೇಕೆಂಬ ಆಹಾರ ಇಲಾಖೆ ಪ್ರಸ್ತಾವನೆಯನ್ನು ಸಂಪುಟ ಸಭೆ ಸಾರಾಸಗಟಾಗಿ ತಳ್ಳಿಹಾಕಿದೆ. ಜತೆಗೆ ಸದ್ಯ ಜಾರಿಯಲ್ಲಿರುವ ಐದು ಕೆಜಿ ಅಕ್ಕಿ ಮೊತ್ತದ ಹಣವನ್ನು ಫಲಾನುಭವಿಗೆ ಡಿಬಿಟಿ ಮೂಲಕ ವರ್ಗಾಯಿಸುವ ವ್ಯವಸ್ಥೆ ಮುಂದುವರಿಯಲಿದೆ. ಆಹಾರ ಇಲಾಖೆ 3 ಪ್ರಸ್ತಾವನೆ ಇಟ್ಟಿತ್ತು. ಕೇಂದ್ರದವರು 28. ರೂ. ನಂತೆ ಅಕ್ಕಿ ಕೊಡಲು ಮುಂದೆ ಬಂದಿದ್ದು ಅಕ್ಕಿ ಖರೀದಿಸಿ ಕೊಡುವುದು ಅಥವಾ ತಲಾ ಅರ್ಧ ಕೆಜಿ ತೊಗರಿ ಬೇಳೆ, ಎಣ್ಣೆ, ಸಕ್ಕರೆ ಒಳಗೊಂಡ ಫುಡ್ಕಿಟ್ ವಿತರಿಸುವುದು ಇಲ್ಲವೆ ಚಾಲ್ತಿ ನೇರ ನಗದು ವರ್ಗಾವಣೆ ಮುಂದುವರಿಸುವ ಪ್ರಸ್ತಾವನೆ ಇಟ್ಟಿದ್ದರು. ಆದರೆ, ಹಣ ಕೊಡುವುದು ಉಪಯುಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು.
Paris Paralympics : ಜೂಡೋ ಕ್ರೀಡೆಯಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಕಪಿಲ್ ಪರ್ಮಾರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
