ಬೆಂಗಳೂರು:ಸುಪ್ರೀಂಕೋರ್ಟ್​ನಲ್ಲಿ ಮಹದಾಯಿ ವಿಚಾರಣೆ ಜ.23ರಿಂದ ಆರಂಭವಾಗಲಿದ್ದು, ರಾಜ್ಯದ ಪಾಲಿನ ನೀರು ಹಂಚಿಕೆ ಹಾಗೂ ಕಳಸಾ-ಬಂಡೂರಿ ಯೋಜನೆಗೆ ಅಡ್ಡಿ ನಿವಾರಿಸುವಂತಹ ತೀರ್ಪು ನಿರೀಕ್ಷಿಸಲಾಗಿದೆ.
ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಮೇಲ್ಮನವಿ, ಕುಡಿಯುವ ನೀರಿನ ಯೋಜನೆಗೆ ತಡೆ ನೀಡಿದ್ದಕ್ಕೆ ಆಕ್ಷೇಪಣೆ ಹಾಗೂ ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆ ಪ್ರಕಟಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ರಾಜ್ಯ ಸರ್ಕಾರ ಕೋರಿದೆ. ಎಲ್ಲ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ದಿನಾಂಕ ಗೊತ್ತುಪಡಿಸಿದ್ದು, ನಿರಂತರ ವಿಚಾರಣೆ ಅಥವಾ ಅದೇ ದಿನ ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಾನೂನು ಪರಿಣತರ ಜತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಅಡ್ವೋಕೇಟ್ ಜನರಲ್ ಈಚೆಗೆ ಸಮಾಲೋಚಿಸಿದ್ದಾರೆ. ನೀರಾವರಿ ತಜ್ಞರ ಜತೆಗೂ ವಿಚಾರ ವಿನಿಮಯ ಚಾಲ್ತಿಯಲ್ಲಿದೆ. ರಾಜ್ಯದ ಪರವಾಗಿ ತೀರ್ಪು ಬರುವಂತೆ ವಾದ ಮಂಡಿಸಲು ಕಾನೂನು ಕೋಶ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕಳಸಾ-ಬಂಡೂರಿ ನಾಲಾ ಯೋಜನೆಗೆ ಈ ಮೊದಲು ಅಸ್ತು ಎಂದಿದ್ದ ಕೇಂದ್ರ ಪರಿಸರ ಇಲಾಖೆ ನಂತರ ತಡೆಯೊಡ್ಡಿದ ‘ಅರ್ಥ’ದಲ್ಲಿ ಪತ್ರ ಬರೆದಿದೆ. ಗೋವಾ ತಗಾದೆ ಎತ್ತಿದ ಬಳಿಕ ಕೇಂದ್ರ ಇಲಾಖೆ ಈ ಪತ್ರ ಕಳುಹಿ ಸಿದ್ದು ರಾಜ್ಯ ಸರ್ಕಾರದ ತಲೆಬಿಸಿ ಹೆಚ್ಚಿಸಿದೆ. ಸುಪ್ರೀಂ ತೀರ್ಪಿನ ಪ್ರಕಾರ, ಕುಡಿಯವ ನೀರು ಯೋಜನೆಗೆ ಅಡ್ಡಿಪಡಿಸಲಾಗದು ಎಂದು ಪರಿಸರ ಇಲಾಖೆಗೆ ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು. ಕೇಂದ್ರ ಸಚಿವ ಪ್ರಕಾಶ ಜಾವಡೇಕರ್, ಗೋವಾ ಸಿಎಂ ಜತೆಗೆ ಸಿಎಂ ಬಿಎಸ್​ವೈ ಮಾತನಾಡಿದ್ದರು. ನ್ಯಾಯಾಧಿಕರಣ ಅಧಿಸೂಚನೆ ಪ್ರಕಟ ಬಳಿಕ ಯೋಜನೆ ಕೈಗೆತ್ತಿಕೊಳ್ಳಿರಿ ಎಂದು ಜಾವಡೇಕರ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪತ್ರ ಬರೆದಿದ್ದಾರೆ.
ಸುಪ್ರೀಂ ಕೋರ್ಟ್​ನಲ್ಲಿ ರಾಜ್ಯದ ಪರ ವಾದ ಮಂಡಿಸಲು ಹಿರಿಯ ವಕೀಲ ನಾರಿಮನ್ ಅವರನ್ನು ಸರ್ಕಾರ ನೇಮಿಸಬೇಕು.
| ವೀರೇಶ ಸೊಬರದಮಠ,ಮಹದಾಯಿ ಹೋರಾಟಗಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 14 =
Remember me
