ವಿಜಯಪುರ:ಭೀಮಾತೀರದಲ್ಲಿ ನಡೆದಿರುವ ಚಿನ್ನದ ವ್ಯಾಪಾರಿಗೆ 5 ಕೋಟಿ ರೂ.ಗಳ ಹಣದ ಬೇಡಿಕೆ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಆರೋಪಿ ಲಕ್ಷ್ಮೀಕಾಂತ ಪಾಟೀಲ ನಿನ್ನೆ ಹಾಗೂ ಇಂದು ಬಿಡುಗಡೆ ಮಾಡಿರುವ ವಿಡಿಯೋ ಬೆನ್ನು ಬಿದ್ದಿರುವ ಪೊಲೀಸರು ಯಾವ ಸ್ಥಳದಲ್ಲಿ ವಿಡಿಯೋ ಮಾಡಿದ್ದಾನೆ, ಇದು ವಿಡಿಯೋ ಮಾಡಿದವರು ಯಾರು ? ವಾಟ್ಸಪ್ ಮೂಲಕ ಮಾಧ್ಯಮ ಸೇರಿ ಇಂಡಿ ತಾಲೂಕಿನಲ್ಲಿ ವಿಡಿಯೋ ಹರಿದಾಡುತ್ತಿರುವದು ಹೇಗೆ ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದಾರೆ.
ಲಕ್ಷ್ಮೀಕಾಂತ ಪಾಟೀಲ, ಹಂತಕ ಬಾಗಪ್ಪ ಹರಿಜನ ಹಾಗೂ ಮಹಾದೇವ ಸಾಹುಕಾರ ಭೈರಗೊಂಡ ಈ ಹಣದ ಬೇಡಿಕೆಯ ಹಿಂದಿನ ರುವಾರಿಗಳಾಗಿದ್ದಾರೆ ಎಂದು ಅವರ ವಿರುದ್ದ ಪ್ರಕರಣ ದಾಖಲಾಗಿದ್ದು, ಮಹಾದೇವ ಸಾಹುಕಾರ ಭೈರಗೊಂಡ ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.
ಇದನ್ನೂ ಓದಿ:ಚೀನಾ ವಿರುದ್ಧ ಪ್ರಬಲ ರಾಷ್ಟ್ರಗಳ ಮೈತ್ರಿ ರೂಪುಗೊಳ್ಳುವ ಸಾಧ್ಯತೆ: ನಿಲುವು ಸ್ಪಷ್ಟಪಡಿಸಿತು ರಷ್ಯಾ!
ಇನ್ನಿಬ್ಬರು ತಲೆಮರೆಸಿ ಕೊಂಡಿದ್ದು, ಅವರಲ್ಲಿ ಈಗ ಲಕ್ಷ್ಮೀಕಾಂತ ಎರಡೆರಡು ವಿಡಿಯೋ ಸಂದೇಶಗಳನ್ನು ಬಿಡುಗಡೆ ಮಾಡಿ ತಮ್ಮ ವಿರುದ್ಧ ದೂರು ನೀಡಿರುವ ನಾಮದೇವ ಡಾಂಗೆ ವಿರುದ್ಧ ಕಿಡಿಕಾರಿದ್ದಾನೆ. ಪೊಲೀಸರು ಸಹ ಈ ವಿಡಿಯೋಗಳು ಯಾವ ರೀತಿ ಎಲ್ಲೆಡೆ ಹರಡಿರುವ ಕುರಿತು ತನಿಖೆ ನಡೆಸುತ್ತಿದ್ದು, ತನಿಖೆ ಮಾಹಿತಿ ಬಿಟ್ಟು ಕೊಡುತ್ತಿಲ್ಲ.
ಇದಲ್ಲದೆ ಡಾಂಗೆ ಮಗನ ಮದುವೆಯ ವೇಳೆ ನಾಮದೇವ ಡಾಂಗೆ ಹಾಗೂ ಮಹಾದೇವ ಸಾಹುಕಾರ ಸೇರಿ ಆರ್ಕೆಸ್ಟ್ರಾ ಯುವತಿಯರೊಂದಿಗೆ ಡ್ಯಾನ್ಸ್ ಮಾಡಿದ ವೈರಲ್ ಆಗಿದೆ. ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ಹಾಗೂ ಮಹಾದೇವ ಸಾಹುಕಾರ ಭೈರಗೊಂಡ ನಡುವೆ ಉತ್ತಮ ಸಂಬಂಧ ಇರುವ ಕುರಿತು ಭೀಮಾತೀರದ ಜನತೆಗೆ ಗೊತ್ತಿದೆ. ಆದರೂ ಲಕ್ಷ್ಮೀಕಾಂತ ಪಾಟೀಲ್ ಬಾಗಪ್ಪ ಹರಿಜನ ಸೇರಿ ವಿರುದ್ಧ 5 ಕೋಟಿ ರೂ.ಗಳ ಹಣದ ಬೇಡಿಕೆಯನ್ನು ಮಹಾದೇವ ಭೈರಗೊಂಡನ ತೋಟದ‌ ಮನೆಯಲ್ಲಿ ಇಟ್ಟಿರುವುದಾಗಿ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ದೂರು ನೀಡಿರುವ ಕುರಿತು ಭೀಮಾತೀರದಲ್ಲಿ ಹತ್ತು ಹಲವು ರೀತಿ ಮಾತುಗಳು ಕೇಳಿ ಬರುತ್ತಿವೆ.
ಇದರ ನಡುವೆ ಮಹಾದೇವ ಸಾಹುಕಾರ ಹಾಗೂ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ಇಬ್ಬರು ಮದುವೆಯೊಂದರಲ್ಲಿ ಕುಣಿದು ಕುಪ್ಪಳಿಸಿರುವ ವಿಡಿಯೋ ಸಹ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಇಬ್ಬರು ಮದುವೆಯಲ್ಲಿ ಗ್ರಾಮೀಣ ಭಾಗದ ಹಾಡಿಗೆ ಸಕತ್ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಸಹ ತುಂಬಾ ವೈರಲ್ ಆಗಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ಎಸ್ ಪಿ ತಿಳಿಸಿದ್ದಾರೆ.
ಇದನ್ನೂ ಓದಿ:ಚೀನಾ ಮತ್ತು ಪಾಕಿಸ್ತಾನ ಒಟ್ಟಾಗಿ ದಾಳಿ ಸಾಧ್ಯತೆ; ಸನ್ನದ್ಧವಾಗಿರಲು ಸೇನಾಪಡೆಗೆ ಸೂಚನೆ
ಉದ್ಯೋಗ ಮರಳಿಗಿಟ್ಟಿಸಿಕೊಳ್ಳಲು ಹಳೆ ಕಂಪನಿಯ ಡೇಟಾಬೇಸ್ ಅನ್ನೇ ಹ್ಯಾಕ್ ಮಾಡಿದ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen + 18 =
Remember me
