|ಅಶೋಕ ಶೆಟ್ಟರಬಾಗಲಕೋಟೆ
ರಾಜ್ಯದಲ್ಲಿ ಪಂಚಮಸಾಲಿ ಸಮಾಜದ 3ನೇ ಪೀಠ ಅಸ್ತಿತ್ವಕ್ಕೆ ಬರಲಿದೆ ಎನ್ನುವ ಸುದ್ದಿ ಇದೀಗ ಖಚಿತಗೊಂಡಿದ್ದು, ನೂತನ ಪೀಠದ ಪೀಠಾಧಿಕಾರಿ ಪಟ್ಟಾಧಿಕಾರಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಹೆಸರಿನಲ್ಲಿ ಫೆಬ್ರವರಿ 14 ರಂದು ಹೊಸ ಪೀಠ ಅಸ್ತಿತ್ವಕ್ಕೆ ಬರುವುದು ಖಚಿತವಾಗಿದೆ. ನೂತನ ಪೀಠಾಧಿಪತಿಗಳಾಗಿ ವಿಜಯಪುರ ಜಿಲ್ಲೆ ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ ವಿಜಯವಾಣಿಗೆ ಖಚಿತಪಡಿಸಿದ್ದಾರೆ.
ಈಗಾಗಲೆ ಪಂಚಮಸಾಲಿ ಸಮುದಾಯದ ಎರಡು ಪೀಠಗಳು ಅಸ್ತಿತ್ವದಲ್ಲಿದ್ದು, ಹರಿಹರ ಪೀಠಕ್ಕೆ ವಚನಾನಂದ ಸ್ವಾಮೀಜಿ ಹಾಗೂ ಕೂಡಲಸಂಗಮ ಪೀಠಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೀಠಾಧಿಪತಿಗಳಾಗಿದ್ದಾರೆ.
ಇವರೆಡು ಪೀಠಗಳು ಸಮಾಜದಲ್ಲಿ ಧಾರ್ವಿುಕ ಸಂಸ್ಕಾರಗಳಿಗೆ ಒತ್ತು ಕೊಡುತ್ತಿಲ್ಲ ಎಂದು ಆರೋಪಿಸಿ ನಾಡಿನ ವಿವಿಧ ಮಠಗಳ 50ಕ್ಕೂ ಹೆಚ್ಚು ಪಂಚಮಸಾಲಿ ಸಮಾಜದ ಮಠಾಧೀಶರು ಆರು ತಿಂಗಳಿಂದ ಸಭೆಗಳನ್ನು ನಡೆಸುತ್ತ ಬಂದಿದ್ದರು. ಅಲ್ಲದೆ, ಎರಡು ಪೀಠಗಳಿಗೆ ಪರ್ಯಾಯವಾಗಿ ಪಂಚಮಸಾಲಿ ಸ್ವಾಮೀಜಿಗಳ ಪರ್ಯಾಯ ಒಕ್ಕೂಟವನ್ನು ರಚಿಸಿಕೊಂಡಿದ್ದರು. ಮಹಾದೇವ ಶಿವಾಚಾರ್ಯರು(ಅಧ್ಯಕ್ಷರು) ಹಾಗೂ ಮನಗೂಳಿ ಸಂಗನಬಸವ ಸ್ವಾಮೀಜಿ (ಪ್ರಧಾನ ಕಾರ್ಯದರ್ಶಿ) ಜತೆಗೆ 9 ಜನ ಸ್ವಾಮೀಜಿಗಳನ್ನು ಒಳಗೊಂಡ ಟ್ರಸ್ಟ್ ರಚಿಸಿ ಜಮಖಂಡಿ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು. ಅದರ ಬೆನ್ನಲ್ಲಿಯೇ ಜಮಖಂಡಿ ತಾಲೂಕಿನ ಆಲಗೂರ ಗ್ರಾಮವನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ಅಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿ ಅದನ್ನು ಸಮತಟ್ಟುಗೊಳಿಸುವ ಕಾರ್ಯ ಮಾಡಿದ್ದರು. ಇದೀಗ 3ನೇ ಪೀಠಕ್ಕೆ ಆಲಗೂರ ಕೇಂದ್ರವನ್ನು ಸ್ಥಾನವನ್ನಾಗಿ ಮಾಡಿಕೊಂಡು ಪಟ್ಟಾಧಿಕಾರಕ್ಕೆ ವಿವಿಧ ಶ್ರೀಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಪಟ್ಟಾಧಿಕಾರ ಕಾರ್ಯಕ್ರಮಕ್ಕೆ ಫೆಬ್ರವರಿ 14 ರಂದು ಮುಹೂರ್ತ ಫಿಕ್ಸ್ ಮಾಡಿದ್ದು, ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ಪಟ್ಟಾಧಿಕಾರ ಕಾರ್ಯಕ್ರಮ ನಡೆಸಲು ಸ್ವಾಮೀಜಿಗಳು ತೀರ್ವನಿಸಿದ್ದಾರೆ. ಜಿಲ್ಲಾಡಳಿತ ಎಷ್ಟು ಜನರಿಗೆ ಪರವಾನಗಿ ನೀಡುತ್ತದೆಯೋ ಅಷ್ಟೇ ಜನರನ್ನು ಒಳಗೊಂಡು ಅಂದು ಪಟ್ಟಾಧಿಕಾರ ಸಮಾರಂಭ ನಡೆಸಲು ತೀರ್ವನಿಸಲಾಗಿದೆ. ನೂತನ ಜಗದ್ಗುರುಗಳ ಪಟ್ಟಾಧಿಕಾರ ಕಾರ್ಯಕ್ರಮಕ್ಕೆ ನಾಡಿನ ಪ್ರಮುಖ ಹರಗುರು ಚರಮೂರ್ತಿಗಳಿಗೆ ಆಹ್ವಾನ ನೀಡಲಾಗುವುದು. ರಾಜಕೀಯ ಮುಖಂಡರನ್ನೂ ಆಮಂತ್ರಿಸಲಾಗುತ್ತದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನೂತನ ಪೀಠದ ಬಗ್ಗೆ ಈಗ ಅಸ್ತಿತ್ವದಲ್ಲಿ ಇರುವ ಎರಡು ಪೀಠಗಳ ಜಗದ್ಗುರುಗಳು ಹಾಗೂ ಭಕ್ತ ವರ್ಗ ಯಾವ ಪ್ರತಿಕ್ರಿಯೆ ಕೊಡುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.
ಭಕ್ತರ ಅಭಿಲಾಸೆಯಂತೆ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆ ಆಗಲಿದೆ. ಮಹಾದೇವ ಶಿವಾಚಾರ್ಯ ಸ್ವಾಮೀಜಿ ಪೀಠಾಧಿಪತಿಗಳಾಗಲಿದ್ದಾರೆ.
|ಸಂಗನಬಸವ ಸ್ವಾಮೀಜಿಪ್ರಧಾನ ಕಾರ್ಯದರ್ಶಿಗಳು, ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ, ಆಲಗೂರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 9 =
Remember me
