ಮಹದೇವಪುರ:ವಿಧಾನಸಧಾ ಕ್ಷೇತ್ರವನ್ನು ಸ್ವಚ್ಛವಾಗಿ, ಹಸಿರಾಗಿ ಮತ್ತು ಆಕರ್ಷಕವಾಗಿಡಲು ಬದ್ಧರಾಗಿದ್ದೇವೆ ಎಂದು ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಕ್ಷೇತ್ರದ ವಿವಿಧ ಭಾಗಗಳಲ್ಲಿನ ರೆಸಿಡೆನ್ಸಿಯಲ್ ವೆಲ್ ಫೇರ್ ಅಸೋಸಿಯೇಷನ್ (ಆರ್‌ಡಬ್ಲ್ಯುಎ) ಸಭೆಯಲ್ಲಿ ಮಾತನಾಡಿದರು. ಆರೋಗ್ಯಕರ ಜೀವನಕ್ಕಾಗಿ ಸ್ವಚ್ಛ ಪರಿಸರ ಬಹಳ ಮುಖ್ಯ. ಆದ್ದರಿಂದ ನಮ್ಮ ಡಬಲ್ ಇಂಜಿನ್ ಸರ್ಕಾರದ ಸಹಕಾರ, ನನ್ನ ಪತಿ ಶಾಸಕ ಅರವಿಂದ ಲಿಂಬಾವಳಿ ಕಾಳಜಿಯಿಂದ ಕ್ಷೇತ್ರದಲ್ಲಿನ 65ಕ್ಕೂ ಹೆಚ್ಚು ಕೆರೆಗಳ ಪೈಕಿ ಶೇ.75 ಕೆರೆಗಳು ಸಂಪೂರ್ಣ ಅಭಿವೃದ್ಧಿಗೊಂಡಿವೆ ಎಂದರು.
ಕ್ಷೇತ್ರದಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಂಚಾರದಟ್ಟಣೆ ತಗ್ಗಿಸಲು ಮತ್ತು ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಲು ನಾವು ಬದ್ಧರಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿವೆ ಎಂದರು.
ವಿವಿಧೆಡೆ ಪ್ರಚಾರ: ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಬೊಮೇನಹಳ್ಳಿಯ ಪ್ರೆಸ್ಟೀಜ್ ಟ್ರಾಂಕ್ವಿಲಿಟಿ, ಬ್ರಿಗೇಡ್ ಬ್ಯೂನ ವಿಸ್ಟ, ಶ್ರೀರಾಮ್ ಗ್ರೀನ್ ಫೀಲ್, ಪುಕ್ಸ ವಿಲ್ಲಾಸ್, ಹುಸ್ಕೂರಿನ ಬ್ರಿಗೇಡ್ ಗೋಲ್ಡನ್ ಟ್ರಯಾಂಗಲ್, ಕೆ.ದೊಮ್ಮಸಂದ್ರದ ಯುನೈಟೆಡ್ ಸಾಯಿ ಆರ್ಕೆಡ್ ರೆಸಿಡೆನ್ಸಿಯಲ್ ವೆಲ್‌ಫೇರ್ ಅಸೋಸಿಯೇಷನ್‌ಗಳ ಸಭೆಯಲ್ಲಿ ಪಾಲ್ಗೊಂಡು ಮತಯಾಚಿಸಿದರು.
ಶಾಸಕ ಅರವಿಂದ ಲಿಂಬಾವಳಿಯವರು ಗುಂಜೂರು ಮುಖ್ಯರಸ್ತೆ, ಗುಂಜೂರು, ವರ್ತೂರು, ಬಳಗೆರೆ, ಶೀಗೆಹಳ್ಳಿ, ಕನ್ನಮಂಗಲ ಭಾಗಗಳಲ್ಲಿ ಅಭ್ಯರ್ಥಿ ಪರ ಮತಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಮನೋಹರ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್, ಮುಖಂಡರಾದ ಕೆ.ದೊಮ್ಮಸಂದ್ರ ಮಧು, ಜ್ಯೋತಿಪುರ ವೇಣು, ಬೊಮ್ಮೇನಹಳ್ಳಿ ಮುನಿರಾಜು ಮತ್ತಿತರರಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − 3 =
Remember me
