ಚಿಕ್ಕಬಳ್ಳಾಪುರ:ಮಹಾರಾಷ್ಟ್ರದ ಬಳಿಕ ಇದೀಗ ತಮಿಳುನಾಡಿನಲ್ಲೂ ಕನ್ನಡಿಗರ ಮೇಲೆ ಕಿರಿಕ್​ ಶುರುವಾಗಿದೆ. ಕಿಡಿಗೇಡಿಗಳ ಗುಂಪೊಂದು ಕರ್ನಾಟಕದ ಟೆಂಪೋ ಟ್ರಾವೆಲ್ಲರ್​ ಮೇಲೆ ಕಲ್ಲು ತೂರಿರುವುದಾಗಿ ವರದಿಯಾಗಿದೆ.
ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತರಿದ್ದ ವಾಹನದ ಮೇಲೆ ಕಲ್ಲು ತೂರಾಟ ನಡೆದಿದೆ. ತಮಿಳುನಾಡಿನ ಮಧುರೈನಲ್ಲಿ ಈ ಘಟನೆ ನಡೆದಿದೆ. ಅಯ್ಯಪ್ಪಸ್ಚಾಮಿ ದರ್ಶನ ಮುಗಿಸಿ ಮದುರೈ ದೇವಾಲಯಕ್ಕೆ ಕನ್ನಡಿಗರು ಆಗಮಿಸಿದ್ದರು. ಟಿಟಿ ವಾಹನದ ಮೇಲೆ ಕನ್ನಡ ಧ್ವಜ ಕಟ್ಟಿದ್ದಕ್ಕೆ ಕಿರಿಕ್ ಮಾಡಿರುವ ಕಿಡಿಗೇಡಿಗಳು, ವಾಹನದ ಮೇಲೆ ಕಲ್ಲು ತೂರಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಶಬರಿಮಲೆ‌ ಪ್ರವಾಸಕ್ಕೆ ತೆರಳಿ ಭಕ್ತರು ವಾಪಾಸ್ಸಾಗುತ್ತಿದ್ದರು. ಕನ್ನಡ ಧ್ವಜ ಕಟ್ಟಿದ್ದಕ್ಕೆ ಉದ್ದೇಶಪೂರ್ವಕವಾಗಿ ಕಲ್ಲು ತೂರಾಟ ನಡೆಸಿದ್ದು, ರಕ್ಷಣೆ ಕೊಡುವಂತೆ ಕನ್ನಡಿಗರು ಮನವಿ ಮಾಡಿದ್ದಾರೆ.
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಾರಾಷ್ಟ್ರದಲ್ಲಿ ಕೆಲ ಪುಂಡರು ಕರ್ನಾಟಕದ ವಾಹನಗಳಿಗೆ ಕಲ್ಲು ತೂರುವುದು ಮತ್ತು ಮಸಿ ಬಳಿಯುವಂತೆ ದುಷ್ಕೃತ್ಯಕ್ಕೆ ಇಳಿದಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡಿನಲ್ಲೂ ಈ ರೀತಿಯ ಘಟನೆ ನಡೆದಿರುವುದು ಆಘಾತಕಾರಿಯಾಗಿದೆ.(ದಿಗ್ವಿಜಯ ನ್ಯೂಸ್​​)
ಮೃತದೇಹದ ಒಳಗೆ ಜೀವಂತ ಹಾವು! ಶವಪರೀಕ್ಷೆ ವೇಳೆ ನಡೆದ ಭಯಾನಕ ಘಟನೆ ಇದು…

ಮತಾಂತರಗೊಂಡರೆ ಮೀಸಲು ಇಲ್ಲ; ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರದಿಂದ ಅಫಿಡವಿಟ್ ಸಲ್ಲಿಕೆ

ಹೋದ ಸಂದರ್ಶನದಲ್ಲಿ ಏಟು ತಿಂದಿದ್ದ ಕೆನ್ನೆಗೆ ಈ ಬಾರಿ ಸಿಹಿ ಮುತ್ತು! ಆಶು ರೆಡ್ಡಿ ಪಾದಕ್ಕೆ ಆರ್​ಜಿವಿ ಕಿಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 2 =
Remember me
