ಔರಂಗಾಬಾದ್:ದೇಶಾದ್ಯಂತ ಟೊಮ್ಯಾಟೊ ಕೆಜಿಗೆ 100 ರಿಂದ 200ರೂ.ವರೆಗೆ ಮಾರಾಟವಾಗುತ್ತಿದ್ದು, ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿರುವ ಕಾರಣ ಮಹಾರಾಷ್ಟ್ರದ ರೈತರೊಬ್ಬರು ತಮ್ಮ ಜಮೀನಿನಲ್ಲಿ ಸಿಸಿ ಟಿವಿ ಕ್ಯಾಮರಾವನ್ನು ಅಳವಡಿಸಿದ್ದಾರೆ.
ಔರಂಗಾಬಾದ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಶಹಪುರ್ ಬಂಜಾರ್‌ನಲ್ಲಿ ಕಳ್ಳರು ಟೊಮ್ಯಾಟೊ ಕಳ್ಳತನ ಮಾಡಿದ ನಂತರ ಅವರು ತಮ್ಮ ಜಮೀನಿಗೆ ಸಿಸಿಟಿವಿ ಅಳವಡಿಸಿದ್ದಾರಂತೆ.
“ಇಂದು ಹೆಚ್ಚು ಬೇಡಿಕೆಯಲ್ಲಿರುವ ತರಕಾರಿಯಲ್ಲಿ ಟೊಮ್ಯಾಟೊ ಕೂಡ ಒಂದಾಗಿದೆ. ಇದನ್ನು ನಾವು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಪಿಟಿಐಗೆ ತಿಳಿಸಿರುವ ಅವರು 22-25 ಕೆಜಿ ಟೊಮೆಟೊ ಈಗ 3 ಸಾವಿರಕ್ಕೆ ಮಾರಾಟವಾಗುತ್ತಿದೆ ಎಂದರು. ತೋಟವು 5 ಎಕರೆ ಜಾಗದಲ್ಲಿದೆ. ನಾವು 1.5 ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದು, ಇದರಿಂದ ಸುಲಭವಾಗಿ 6-7 ಲಕ್ಷ ಸಿಗುತ್ತದೆ.
10 ದಿನಗಳ ಹಿಂದೆ ಗಂಗಾಪುರ ತಾಲೂಕಿನ ನನ್ನ ಜಮೀನಿನಲ್ಲಿ 20-25 ಕಿಲೋ ಟೊಮ್ಯಾಟೊ ಕಳ್ಳತನವಾಗಿತ್ತು. ಇನ್ನೂ ಹಣ್ಣಾಗದ ಉಳಿದ ಬೆಳೆಯನ್ನು ರಕ್ಷಿಸಲು ನಾನು 22,000 ಮೌಲ್ಯದ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೇನೆ” ಎಂದು ಅವರು ಹೇಳಿದರು.
ಸೌರಶಕ್ತಿಯಿಂದ ಕ್ಯಾಮೆರಾ ಕಾರ್ಯನಿರ್ವಹಿಸುವುದರಿಂದ ಅದರ ವಿದ್ಯುತ್ ಪೂರೈಕೆಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ರೈತ ಹೇಳಿದರು. “ನನ್ನ ಫೋನ್‌ನಲ್ಲಿ ಎಲ್ಲಿಯಾದರೂ ನಾನು ದೃಶ್ಯಗಳನ್ನು ಪರಿಶೀಲಿಸಬಹುದು” ಎಂದೂ ಸಹ ಅವರು ತಿಳಿಸಿದರು.
ಐಎಎಸ್ ಅಧಿಕಾರಿಗೇ ಕಿರುಕುಳ; ಪತ್ನಿ ವಿರುದ್ಧ ದೂರು ದಾಖಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 16 =
Remember me
