ಬೆಂಗಳೂರು:ಕೃಷಿ ಕ್ಷೇತ್ರ ಹಾಗೂ ರೈತರ ಅಭ್ಯುದಯಕ್ಕಾಗಿ ಮಹಾರಾಷ್ಟ್ರ ಸರ್ಕಾರ ಅಳವಡಿಸಿಕೊಂಡಿರುವ ಕೆಲ ಯೋಜನೆಗಳನ್ನು ರಾಜ್ಯದಲ್ಲಿಯೂ ಜಾರಿಗೆ ತರುವ ಬಗ್ಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಚರ್ಚೆ ನಡೆಸಲಿದ್ದಾರೆ.
ಸಚಿವ ಪಾಟೀಲ್ ಮುಂಬೈಗೆ ತೆರಳಿ ಅಲ್ಲಿನ ಸಚಿವರು ಹಾಗೂ ಅಧಿಕಾರಿಗಳ ಜತೆ ಎರಡು ದಿನಗಳ ಕಾಲ ಚರ್ಚೆ ನಡೆಸಿ, ಅಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಮಹಾರಾಷ್ಟ್ರ ಕೈಗೊಂಡಿರುವ ಕ್ರಮಗಳನ್ನು ಕುರಿತ ವರದಿಯನ್ನು ಬೊಮ್ಮಾಯಿಗೆ ಸಲ್ಲಿಸಲಿದ್ದಾರೆ. ಮಹಾರಾಷ್ಟ್ರದಲ್ಲಿ ಪಂಚಾಯಿತಿಗೊಂದರಂತೆ ಗ್ರಾಮ ಕೃಷಿ ವಿಕಾಸ ಸಮಿತಿಗಳನ್ನು ಸ್ಥಾಪನೆ ಮಾಡಲಾಗಿದೆ. ಪ್ರತಿ ಸಮಿತಿಗೆ 12 ಸದಸ್ಯರಿರುತ್ತಾರೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ಬಳಕೆ, ಕೃಷಿಗೆ ಸಂಬಂಧಿಸಿದಂತೆ ಸರ್ಕಾರದ ಯೋಜನೆಗಳು ಸ್ಥಳೀಯವಾಗಿ ಸದ್ಬಳಕೆ ಆಗುವಂತೆ ನೋಡಿಕೊಳ್ಳುವ ಕೆಲಸವನ್ನು ಈ ಸಮಿತಿಗಳು ಮಾಡುತ್ತವೆ. ಅದೇ ರೀತಿ ರಾಜ್ಯದಲ್ಲಿಯೂ ಸಮಿತಿಗಳನ್ನು ರಚನೆ ಮಾಡುವ ಬಗ್ಗೆಯೂ ಮುಖ್ಯಮಂತ್ರಿ ಜತೆ ಸಚಿವ ಪಾಟೀಲ್ ಚರ್ಚೆ ನಡೆಸಲಿದ್ದಾರೆ. ಆಗ ಯೋಜನೆಗಳನ್ನು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ರೂಪಿಸಲು ಅನುಕೂಲವಾಗಲಿದೆ.
ಸರಕು ಸಾಗಣೆ ವ್ಯವಸ್ಥೆ:ಮಹಾರಾಷ್ಟ್ರದಲ್ಲಿ ಹಣ್ಣು ಮತ್ತು ತರಕಾರಿಯನ್ನು ಸಂಸ್ಕರಿಸಿ ವಿವಿಧ ದೇಶಗಳಿಗೆ ರವಾನೆ ಮಾಡಲು ವಿಮಾನ ನಿಲ್ದಾಣದಲ್ಲಿಯೇ ಸಂಸ್ಕರಣೆ ಮತ್ತು ಕಾಗೋ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿಯೂ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಯಲ್ಲಿಯೇ ಇಂತಹ ವ್ಯವಸ್ಥೆ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ.
ರೈತ ಸಂಪನ್ಮೂಲ ಬ್ಯಾಂಕ್:ಮಹಾರಾಷ್ಟ್ರದಲ್ಲಿ ರೈತ ಸಂಪನ್ಮೂಲ ಬ್ಯಾಂಕ್ ರಚನೆ ಮಾಡಲಾಗಿದೆ. ರಾಜ್ಯದ ಪ್ರಗತಿಪರ ರೈತರ ವಿವರಗಳು ಆ ಬ್ಯಾಂಕ್​ನ ವೆಬ್​ಸೈಟ್​ನಲ್ಲಿ ಲಭ್ಯ ಇವೆ. ಬೇರೆ ಬೇರೆ ರೈತರು ಬ್ಯಾಂಕ್​ನಲ್ಲಿ ದಾಖಲಾಗಿರುವ ರೈತರನ್ನು ಸಂಪರ್ಕ ಮಾಡಿ ವಿಚಾರ ವಿನಿಮಯ ಮಾಡಿಕೊಳ್ಳಲು ಅನುಕೂಲವಾಗಲಿದೆ. ರೈತರ ವಾಟ್ಸಾಪ್ ಗ್ರೂಪ್​ಗಳನ್ನು ಸಹ ರಚನೆ ಮಾಡಲಾಗಿದೆ. ವಿವಿಧ ಕೃಷಿ ಬೆಳೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಕೃಷಿ ಹೊಂಡ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ಕೃಷಿ ಹೊಂಡ ಯೋಜನೆ ನಿಂತುಹೋಗಿದೆ. ಆದರೆ, ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಅಲ್ಲಿ ಕೃಷಿ ಹೊಂಡದಿಂದಲೇ 2.5 ಲಕ್ಷ ಟಿಎಂಸಿ ನೀರು ಸಂಗ್ರಹವಾಗಿದೆ. ಆದ್ದರಿಂದ ರಾಜ್ಯದಲ್ಲಿ ಕೃಷಿ ಹೊಂಡ ಯೋಜನೆ ಮತ್ತೆ ಆರಂಭಿಸುವ ಬಗ್ಗೆ ಪ್ರಸ್ತಾಪವಾಗಲಿದೆ ಎಂದು ಮೂಲಗಳು ಹೇಳುತ್ತವೆ. ರೈತ ಉತ್ಪಾದಕ ಸಂಸ್ಥೆಗಳಿಗೆ ನೆರವಾಗುವುದು, ವಿವಿಧ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವುದು, ಬಿದಿರು ಮಂಡಳಿ ರಚನೆ ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ಬೊಮ್ಮಾಯಿ ಜತೆ ಸಮಾಲೋಚನೆ ಮಾಡಲಿದ್ದಾರೆ. ಯಾವ ಯೋಜನೆಗಳಿಗೆ ಸಮ್ಮತಿ ದೊರೆಯಲಿದೆ ಎಂಬುದು ಕುತೂಹಲದ ಸಂಗತಿಯಾಗಿದೆ.
ರೈತ ಮಹಿಳೆಯರಿಗೆ ಮೀಸಲು:ಕೃಷಿಗೆ ಸಂಬಂಧಿಸಿದ ಯೋಜನೆಗಳಲ್ಲಿ ರೈತ ಮಹಿಳೆಯರಿಗೆ ಶೇ.50 ಮೀಸ ಲಾತಿಯನ್ನು ತರಲಾಗಿದೆ. ಅದೇ ಪದ್ಧತಿಯನ್ನು ರಾಜ್ಯದಲ್ಲಿಯೂ ತರುವ ಕುರಿತು ಸಚಿವ ಪಾಟೀಲ್ ಚರ್ಚೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಮಹಾರಾಷ್ಟ್ರದಲ್ಲಿ ಸರ್ಕಾರದ ಯೋಜನೆಗಳ ಫಲವನ್ನು ನೇರವಾಗಿ ಫಲಾನು ಭವಿಗೆ ತಲುಪಿಸಲು ಮಹಾಡಿಬಿಡಿ ಪೋರ್ಟಲ್ ಪ್ರಾರಂಭಿಸಲಾಗಿದೆ. ಅದೇ ಮಾದರಿಯನ್ನು ರಾಜ್ಯದಲ್ಲಿ ಆರಂಭಿಸುವ ಕುರಿತು ಚರ್ಚೆ ನಡೆಸಲಾಗುತ್ತದೆ.
ಮತ್ತೆ ತಲೆಗೆ ಹುಳಬಿಟ್ಟ ಉಪೇಂದ್ರ; ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರನಾ?

ಶಾವಿಗೆ-ಸಂಡಿಗೆ ಒಣಗಿಸಲು ಬಳಕೆಯಾದ ಸುವರ್ಣಸೌಧ!; ಕೆಲಸ ಕಳೆದುಕೊಂಡ ಮಹಿಳೆ, ಇಂಜಿನಿಯರ್​ಗೆ ನೋಟಿಸ್​..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 5 =
Remember me
