ಬೆಂಗಳೂರು: ಕಳೆದ ಒಂಬತ್ತೂವರೆ ವರ್ಷಗಳ ಕಾಲ ಮೌನವಾಗಿದ್ದ ಪ್ರಧಾನಿ ಮೋದಿಯವರಿಗೆ ಏಕಾಏಕಿ ಮಹಿಳೆಯರ ಮೇಲೆ ಪ್ರೀತಿ ಹುಟ್ಟಿದೆ. ಕೇವಲ ಚುನಾವಣೆ ದೃಷ್ಟಿಯಿಂದ ಮಾತ್ರ ಈ ಸಿಂಪತಿ ಹುಟ್ಟಿದೆ ಎಂದು ಎಐಸಿಸಿ ಕಾರ್ಯದರ್ಶಿ ಮತ್ತು ದೆಹಲಿ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಮೃತ ಧವನ್ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆ ಮತ್ತೆ ಮುನ್ನೆಲೆಗೆ ಬಂದಿತು ಎಂದು ಮಹಿಳೆಯರಾದ ನಾವೆಲ್ಲ ಸಂಭ್ರಮದಿಂದ ಇದ್ದೆವು. ಆದರೆ ಆ ಸಂಭ್ರಮವನ್ನು ಬಿಜೆಪಿ ಸರ್ಕಾರ ಕಸಿದುಕೊಂಡಿತು. ಈ ಕೂಡಲೇ ಜಾರಿ ಮಾಡಲು ನಿಮಗೆ ಆಗುವುದಿಲ್ಲವೇ ಅಥವಾ ಮಹಿಳಾ ಮೀಸಲಾತಿ ಪರವಾಗಿ ಕೇವಲ ಬಾಯಿ ಮಾತಿನ ಉಪಚಾರವೇ ನಿಮ್ಮದು ಎಂದು ಕೇಂದ್ರವನ್ನು ಪ್ರಶ್ನಿಸಿದರು.ಬಿಜೆಪಿಯವರು ಎಂದಿಗೂ ಮಹಿಳಾ ಮೀಸಲಾತಿ ಪರ ಇಲ್ಲ. ಅವರ ಹೇಳಿಕೆಗಳು, ಮಾಡುವ ಕೆಲಸಗಳೆಲ್ಲಾ ಮಹಿಳಾ ವಿರೋಧಿಯಾಗಿವೆ. ಮಹಿಳಾ ಸಮಾನತೆ ಬಗ್ಗೆ ಕೇವಲ ಬೂಟಾಟಿಕೆಯ ಮಾತುಗಳನ್ನು ಬಿಜೆಪಿ ಆಡುತ್ತಲೇ ಇರುತ್ತದೆ ಎಂದರು.ಇತಿಹಾಸದಲ್ಲಿ ಯಾವುದೇ ಮಸೂದೆಗಳು ಇಷ್ಟು ಕೆಟ್ಟ ಪರಿಸ್ಥಿತಿಯಲ್ಲಿ ಜಾರಿಗೆ ಬಂದಿಲ್ಲ. ಮೀಸಲಾತಿ ಮಸೂದೆ ಜಾರಿ ಮಾಡಿದ್ದೇವೆ ಎನ್ನುವುದು ಕಣ್ಕಟ್ಟಿನ ಸಂಗತಿ, ಏಕೆಂದರೆ ಇದು ಸರಿಯಾಗಿ ಜಾರಿಯಾಗಲು ಇನ್ನೂ 8- 10 ವರ್ಷಗಳು ನಾವು ಕಾಯಬೇಕು ಎಂದು ಹೇಳಿದರು.ಬಿಜೆಪಿಯ ಪ್ರಮುಖ ಹುದ್ದೆಗಳಲ್ಲಿ ಒಬ್ಬರೂ ಮಹಿಳೆಯರಿಲ್ಲ. ದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಮಹಿಳೆಯರು ಸಿಗಲಿಲ್ಲವೇ? ಮಹಿಳಾ ಮೋರ್ಚಾಗೂ ಕೂಡ ಪುರುಷರನ್ನೇ ಅಧ್ಯಕ್ಷರನ್ನಾಗಿ ಕೂರಿಸಿದ್ದಾರೆ. ಆರ್‌ಎಸ್‌ಎಸ್ ಸೇರಿದಂತೆ ಇತರೇ ಬಿಜೆಪಿ ಸೋದರ ಸಂಘಟನೆಗಳು ಮಹಿಯರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಿಯೆ ಇಲ್ಲ ಎಂದರು.ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಮಾತನಾಡುವ ಕಿಂಚಿತ್ತೂ ನೈತಿಕತೆ ಬಿಜೆಪಿಗಿಲ್ಲ. 16 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ ಆದರೆ ಮಹಿಳೆಯರಿಗೆ ಒಂದೇ ಒಂದು ಉನ್ನತ ಸ್ಥಾನಗಳಿಲ್ಲ ಎಂದು ಟೀಕಿಸಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − nine =
Remember me
