ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಸೋಮವಾರ ಆರಂಭವಾಗಲಿದೆ. ಈಗ್ಗೆ ಕೆಲವು ದಿನಗಳ ಮುಂಚೆ ಕೋಟ್ಯಂತರ ರೂ. ಅವ್ಯವಹಾರದ ಹಲವು ಹಗರಣಗಳು ಬೆಳಕಿಗೆ ಬಂದಿರುವುದರಿಂದ ಎರಡೂ ಸದನಗಳ ಇಡೀ ಕಲಾಪ ಅವುಗಳ ಬಗೆಗಿನ ಗದ್ದಲ, ಕೋಲಾಹಲದಲ್ಲೇ ಕಳೆದುಹೋಗುವ ಸಾಧ್ಯತೆ ಇದೆ. ಕಾಂಗ್ರೆಸ್​ನ ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ಆಡಳಿತ ಪಕ್ಷದ ಇನ್ನೊಬ್ಬ ಶಾಸಕ ಬಸನಗೌಡ ದದ್ದಲ್ ಅವರೇ ಪ್ರಮುಖ ಆರೋಪಿಗಳಾಗಿರುವ ವಾಲ್ಮೀಕಿ ನಿಗಮದ 187 ಕೋಟಿ ರೂ.
ಅಕ್ರಮ ಮತ್ತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಸ್ಥರ ಮೇಲೆಯೇ ಆರೋಪವಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯ ಹಗರಣ ಈ ಬಾರಿಯ ಕಲಾಪದ ಬಹುಪಾಲು ಸಮಯವನ್ನು ಕಬಳಿಸುವ ಸಾಧ್ಯತೆ ದಟ್ಟವಾಗಿದೆ. ಇದಲ್ಲದೆ, ಕಾಂಗ್ರೆಸ್ ಚುನಾವಣೆ ವೇಳೆ ನೀಡಿದ್ದ ಗ್ಯಾರಂಟಿ ಭರವಸೆಗಳ ಈಡೇರಿಕೆಗಾಗಿ ಪರಿಶಿಷ್ಟರಿಗೆ ಮೀಸಲಾದ ವಿವಿಧ ಯೋಜನೆಗಳ ಹಣವನ್ನು ಬಳಸಲು ರಾಜ್ಯ ಸರ್ಕಾರ ಮುಂದಾಗಿರುವುದು, ಗ್ಯಾರಂಟಿ ಯೋಜನೆಗಳಿಗೆ ಮಾಡುತ್ತಿರುವ ವೆಚ್ಚದಿಂದ ಉಂಟಾಗಿರುವ ಸಂಪನ್ಮೂಲದ ಕೊರತೆಯನ್ನು ತುಂಬಿಸಿಕೊಳ್ಳಲು ಪೆಟ್ರೋಲ್- ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿರುವುದು ಕೂಡ ಸದನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಬಹುದು.
ಈ ವಿಷಯಗಳು ಮಹತ್ವದ ವಿಷಯಗಳೇ ಎಂಬುದರಲ್ಲಿ ಎರಡು ಮಾತಿಲ್ಲ. ಇವುಗಳ ವಿಸõತ ಚರ್ಚೆಗೆ ಅಧಿವೇಶನದ ಆರಂಭದಲ್ಲೇ ಪ್ರತ್ಯೇಕ ಸಮಯವನ್ನು ವಿಧಾನಸಭೆಯ ಅಧ್ಯಕ್ಷರು ಮತ್ತು ವಿಧಾನಪರಿಷತ್ತಿನ ಸಭಾಪತಿಗಳು ನಿಗದಿ ಮಾಡಿಬಿಟ್ಟರೆ ಇಡೀ ಕಲಾಪ ಗದ್ದಲದಲ್ಲಿ ಮುಳುಗಿ ಹೋಗುವುದನ್ನು ತಪ್ಪಿಸಬಹುದು. ಆಡಳಿತ ಮತ್ತು ವಿರೋಧಿ ಪಾಳಯ ಎರಡೂ ಕಡೆಯ ಸದಸ್ಯರು ಪರಸ್ಪರ ಆರೋಪ- ಪ್ರತ್ಯಾರೋಪಗಳ, ಏರುದನಿಯ, ನಿಂದನೆಯ ಮಾತುಗಳಿಗೆ ಸೀಮಿತರಾಗದೇ ದಾಖಲೆಗಳನ್ನು ಆಧರಿಸಿ ತಮ್ಮ ವಾದ ಮಂಡಿಸಬೇಕು. ಅದಕ್ಕೆ ಸರ್ಕಾರ ಕೂಡ ತನ್ನ ಉತ್ತರ ನೀಡುವ ನಿರ್ದಿಷ್ಟ ಸಮಯ ಬಂದಾಗ ದಾಖಲೆಗಳೊಂದಿಗೆ ಉತ್ತರಿಸಬೇಕು.
ಈ ಹಗರಣಗಳ ಚರ್ಚೆಯನ್ನು ಹೊರತುಪಡಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡ ಹತ್ತಾರು ವಿಷಯಗಳು ಇವೆ ಎಂಬುದನ್ನು ಶಾಸಕರು ಮರೆಯಬಾರದು. ಉಳಿದ ಸಮಯವನ್ನು ಮಳೆಹಾನಿ, ಕೃಷಿ, ಬಂಡವಾಳ ಹೂಡಿಕೆ, ಉದ್ಯೋಗಸೃಷ್ಟಿಯಂತಹ ಸಾರ್ವಜನಿಕ ಹಿತಾಸಕ್ತಿಯ ಜರೂರು ವಿಷಯಗಳಿಗೆ ವಿನಿಯೋಗಿಸಬೇಕು. ನಕಲಿ ಪಡಿತರ ಕಾರ್ಡ್​ಗಳ ರದ್ದತಿ ನಿರ್ಧಾರ, ರಾಜ್ಯದಾದ್ಯಂತ ಹರಡಿರುವ ಡೆಂಘ- ಝೀಕಾ ವೈರಸ್, ರೈತರ ಆತ್ಮಹತ್ಯೆ ಹೆಚ್ಚಳ ಮುಂತಾದ ವಿಷಯಗಳೂ ಸಾದ್ಯಂತವಾಗಿ ಚರ್ಚೆ ಆಗಬೇಕು. ಸಾಮಾನ್ಯವಾಗಿ ಜನರಿಗೆ ಸಂಬಂಧಿಸಿದ ತುರ್ತು ವಿಷಯಗಳೇ ಪ್ರಸ್ತಾಪವಾಗುವ ಪ್ರಶ್ನೋತ್ತರ ವೇಳೆ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ ಮುಂತಾದವುಗಳನ್ನು ಈ ಹಗರಣಗಳ ಗದ್ದಲದ ಕಾರಣದಿಂದಾಗಿ ರದ್ದುಪಡಿಸಬಾರದು. ಇದೆಲ್ಲವೂ ಅಧಿವೇಶನ ಆರಂಭವಾಗುವುದಕ್ಕೆ ಮುನ್ನ ನಡೆಯುವ ಉಭಯ ಸದನಗಳ ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ನಿರ್ಧಾರವಾದರೆ ಒಳ್ಳೆಯದು.
ನೀವಿಲ್ಲದೆ ನಾನೇನೂ ಅಲ್ಲ! ಕೇವಲ ಶೂನ್ಯ: ಮತ್ತೊಮ್ಮೆ ಅದೇ ವಿಷಯ ಒತ್ತಿ ಹೇಳಿದ ‘ಕಲ್ಕಿ’ ಪ್ರಭಾಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 9 =
Remember me
