ಬೆಂಗಳೂರು:ಯಾವಾಗ ಬೆಳಗಾಗುತ್ತೋ ಅಂತಾ ರಾತ್ರಿಯಿಡೀ ನಿದ್ದೆಗೆಟ್ಟು ಕಾಯ್ತಾ ಇದ್ರೋ ಏನೋ….! ಅಥವಾ ಬೆಳಗ್ಗೆದ್ದು ಮೊದಲ ಬಾಟಲಿ ನನ್ನ ಕೈಯಲ್ಲಿ ಇರಬೇಕು ಎಂದುಕೊಂಡಿದ್ದವರು ಕೂಡ ಬಹಳ ಜನ. ಒಟ್ಟಿನಲ್ಲಿ ರಾಜಧಾನಿ ಮಾತ್ರವಲ್ಲ, ರಾಜ್ಯದ ಎಲ್ಲೆಡೆಯೂ ಇದೇ ಪರಿಸ್ಥಿತಿ. ಜನರು ಮದ್ಯದಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಕೆಲವೆಡೆ ಲಾಠಿಪ್ರಹಾರವೂ ನಡೆದಿದೆ. ನೂಕುನುಗ್ಗಲು ನಿಯಂತ್ರಿಸಲು ಬ್ಯಾರಿಕೇಡ್​ಗಳನ್ನು ಹಾಕಿದ್ದರೂ ಜನರನ್ನು ನಿಯಂತ್ರಿಸಲು ಪೊಲೀಸರೇ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೆ, ಇಲ್ಲೊಂದು ರಸ್ತೆಯಲ್ಲಿ ಮಾತ್ರ ಅಬ್ಬಾ ಅದೇನ್​ ಶಿಸ್ತು ಅಂತೀರಾ…!
ಅಲ್ಲಿನ್ನೂ ಮದ್ಯದಂಗಡಿ ಪ್ರಾರಂಭವಾಗಿಲ್ಲ. ಆದರೆ, ಜನರು ಅದಾಗಲೇ ಸಾಲುಗಟ್ಟಿ ನಿಂತಿದ್ದರು. ನೂರಾರು ಜನರಿದ್ದರೂ ಯಾವುದೇ ನೂಕಾಟವಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಜನರು ಪರಸ್ಪರ ಅಂತರ ಕಾಯ್ದುಕೊಂಡು ನಿಂತಿದ್ದರು.
ಇದನ್ನೂ ಓದಿ;http://ಇದು…. ಏಲಿಯನ್​ಗಳದ್ದೇ ಕೃತ್ಯ…!
ಇಷ್ಟೊಂದು ಜನ ನಿಂತಿರೋದು ನೋಡಿದರೆ, ಈ ಅಂಗಡಿ ಅಷ್ಟೊಂದು ಜನಪ್ರಿಯವೇ ಅನ್ನೋ ಅನುಮಾನ ಬಾರದೇ ಇರಲ್ಲ…! ವಾಸ್ತವ ಹಾಗಿರಲಿಕ್ಕಿಲ್ಲ.. ಹತ್ತಿರದಲ್ಲೆಲ್ಲೂ ಇನ್ನೊಂದು ಅಂಗಡಿ ಇರಲಿಕ್ಕಿಲ್ಲವೇನೋ ಅಲ್ಲವೇ….
ಅಷ್ಟಕ್ಕೂ ಜನ ಹೀಗೆ ಸಾಲಾಗಿ ನಿಂತಿರೋದು ಬೆಂಗಳೂರಿನ ​ಐಟಿಪಿಎಲ್​ ಮುಖ್ಯರಸ್ತೆಯಲ್ಲಿರುವ ಬ್ರೂಕ್​ಫೀಲ್ಡ್​ ಪ್ರದೇಶದಲ್ಲಿ. ಐಟಿ ‘ಪ್ರತಿಷ್ಠೆ’ಯನ್ನಂತೂ ಕಾಪಾಡಿಕೊಂಡಿದ್ದಾರೆ ಎನ್ನಬಹುದೇನೋ…?ಒಟ್ಟಿನಲ್ಲಿ ಈ ವಿಡಿಯೋ ಅಂತೂ ಬಾರಿ ವೈರಲ್​ ಆಗಿದೆ. ಅದೇನು ಅಂತಾ ನೀವೇ ನೋಡಿ… ಇಲ್ಲಿದೆ ಲಿಂಕ್​https://www.facebook.com/VVani4U/videos/2720484128183982/
ಇದೆಂಥ ದೌರ್ಭಾಗ್ಯ.. ಕೇರಳದ ಅತಿದೊಡ್ಡ ಅರಮನೆಯಲ್ಲಿ ಅದರ ಮಾಲೀಕ ವಾಸವಿದ್ದದ್ದು ಕೇವಲ ಒಂದು ತಿಂಗಳಷ್ಟೇ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten − 3 =
Remember me
