ಬೆಂಗಳೂರು:ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಮುಂದಿನ ವರ್ಷ ಮಹತ್ವದ ಬದಲಾವಣೆಯೊಂದು ಆಗಲಿದೆ. ಈ ಮೂಲಕ ಇನ್ಮುಂದೆ ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿಯ ವ್ಯಾಪ್ತಿಯೂ ಹೆಚ್ಚಾಗಲಿದೆ. ಇಂಥದ್ದೊಂದು ಮಾಹಿತಿಯನ್ನು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಂಚಿಕೊಂಡಿದ್ದಾರೆ.
ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ವೇಳೆ ಮಾತನಾಡಿದ ಸಿಎಂ, ಪ್ರಶಸ್ತಿ ಕುರಿತ ಬದಲಾವಣೆಯ ಇಂಗಿತವನ್ನು ವ್ಯಕ್ತಪಡಿಸಿದರು. ಸದ್ಯ 60 ವರ್ಷ ಆದವರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ ಅಂತ ಮಾಡಿರುವುದು ಸರ್ಕಾರ ಮಾಡಿರುವ ತಪ್ಪು ಎಂದು ಹೇಳಿದ ಸಿಎಂ, ವಯಸ್ಸಿನ ಮಿತಿ ಪರಿಷ್ಕರಿಸುವುದಾಗಿ ತಿಳಿಸಿದರು.
ಸಣ್ಣ ವಯಸ್ಸಿನಲ್ಲಿಯೇ ಪ್ರಶಸ್ತಿಯನ್ನು ಕೊಟ್ಟರೆ ಇನ್ನೂ ಹೆಚ್ಚಿನ ಸಾಧನೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಮುಂದಿನ ವರ್ಷ ಇದರಲ್ಲಿ ಬದಲಾವಣೆ ಆಗಲೇಬೇಕು. ಇನ್ನುಮುಂದೆ ವಯಸ್ಸಿನ ಮಿತಿ ಇಲ್ಲದೇ ನಿಜವಾದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತೆ ಎಂಬುದಾಗಿ ಸಿಎಂ ಘೋಷಣೆ ಮಾಡಿದರು.
ಎಲ್ಲರಿಗೂ ಕನ್ನಡದ ನಮಸ್ಕಾರಗಳು. ಕನ್ನಡದ ನಮಸ್ಕಾರಗಳು ಹೃದಯದಿಂದ ಬರುತ್ತವೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು. ನಾವು ಚಿಕ್ಕವರಿದ್ದಾಗ, ನಾವು ತೊದಲು ನುಡಿಯುವ ನಮ್ಮ ತಾಯಿ ಕೊಟ್ಟ ಮುತ್ತಿನ ಪ್ರಶಸ್ತಿಯನ್ನು ನಾವು ಮರೆಯಲು ಆಗಲ್ಲ. ಶಾಲಾ ಹಂತದಲ್ಲಿ ಶಿಕ್ಷಕರು ಕೊಡುವ ಪ್ರಶಸ್ತಿಯನ್ನೂ ಮರೆಯಲು ಆಗಲ್ಲ. ಹೀಗೆ ಬದುಕಿನ ಎಲ್ಲ ಹಂತದಲ್ಲಿಯೂ ಪ್ರಶಸ್ತಿ ಇರುತ್ತದೆ. ಪ್ರಶಸ್ತಿ ಹಿಂದೆ ದೊಡ್ಡ ಕಥೆ, ಪ್ರಯತ್ನವೂ ಇರುತ್ತದೆ ಎಂದು ಸಿಎಂ ಹೇಳಿದರು.
ಬದುಕಿನಲ್ಲಿ ಎರಡು ವಿಚಾರ ಬಹಳ‌ ಕಷ್ಟ. ಮುಗ್ಧತೆ ಕಾಪಾಡಿಕೊಳ್ಳುವುದು ಮತ್ತು ಆತ್ಮಸಾಕ್ಷಿ ಅನುಗುಣವಾಗಿ ನಡೆದುಕೊಳ್ಳುವುದು. ಇವರೆಡನ್ನು ಯಾರು ಮಾಡುತ್ತಾರೋ ಅವರು ದೊಡ್ಡ ಸಾಧಕರಾಗುತ್ತಾರೆ ಎಂದು ಸಿಎಂ ಕಿವಿಮಾತು ಹೇಳಿದರು.
ಅಂದು ಅಪ್ಪಾಜಿಗೆ, ಇಂದು ‘ಅಪ್ಪು’ಗೆ; ರಾಜ್​ ಕುಟುಂಬಕ್ಕೆ 3 ದಶಕಗಳಲ್ಲಿ 2 ಕರ್ನಾಟಕ ರತ್ನ

‘ಪ್ರಗತಿ’ಯ ಹೊಳಪಲ್ಲಿ ರಿಷಬ್​ ಶೆಟ್ಟಿ; ಹಳೇದನ್ನೆಲ್ಲ ನೆನಪಿಸಿಕೊಂಡು ಆ ಮೊದಲ ಫೋಟೋ ಹಂಚಿಕೊಂಡ ನಟ-ನಿರ್ದೇಶಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + six =
Remember me
