| ಮಂಜುನಾಥ ಅಂಗಡಿ ಧಾರವಾಡ
ಅನುದಾನಿತ ಶಾಲೆಗಳ ಸಹ ಶಿಕ್ಷಕರ ಹುದ್ದೆ ನೇಮಕಾತಿ ಮೊದಲೆಲ್ಲ ಬೇಕಾಬಿಟ್ಟಿ ನಡೆಯುತ್ತಿತ್ತು. ನಾಮ್ ಕೇ ವಾಸ್ತೆಗೆ ನಡೆಯುತ್ತಿದ್ದ ಸಂದರ್ಶನ, ಬೇಕಾದವರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಪ್ರಕ್ರಿಯೆಗೆ ಈಗ ಕಡಿವಾಣ ಹಾಕುವ ಪ್ರಯತ್ನ ನಡೆಯುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ನೇಮಕಾತಿಯಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದು, ಅರ್ಹರಿಗೆ ಹುದ್ದೆ ಲಭಿಸುವ ಆಶಾಕಿರಣ ಮೂಡಿಸಿದ್ದಾರೆ.
ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಧಾರವಾಡ, ಗದಗ, ಹಾವೇರಿ, ಕಾರವಾರ, ಶಿರಸಿ ಮತ್ತು ವಿಜಯಪುರ ಶೈಕ್ಷಣಿಕ ಜಿಲ್ಲೆಗಳು ಬೆಳಗಾವಿ ವಿಭಾಗದ ವ್ಯಾಪ್ತಿಗೊಳಪಡುತ್ತವೆ. ವಿಭಾಗದಲ್ಲಿ 779 ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 2,79,147 ವಿದ್ಯಾರ್ಥಿಗಳು ಹಾಗೂ 1,253 ಅನುದಾನಿತ ಪ್ರೌಢಶಾಲೆಗಳಲ್ಲಿ 1,97,508 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು, ಶಿಕ್ಷಕರ ನಿವೃತ್ತಿ, ನಿಧನ, ವಜಾದಿಂದ ತೆರವಾಗಿರುವ ಹುದ್ದೆಗಳಿಗೆ ನೇಮಕಾತಿ ನಡೆಯುವಾಗ ಅರ್ಹ ಶಿಕ್ಷಕರಿಗೆ ಅವಕಾಶ ಸಿಗಬೇಕು. ಮಕ್ಕಳಿಗೆ ಕಲಿಕೆಯ ಫಲ ಸಂವರ್ಧನೆಯಾಗಬೇಕು ಎಂದು ಮೇಜರ್ ಹಿರೇಮಠ ಪಣ ತೊಟ್ಟಿದ್ದಾರೆ.
ಜಾಹೀರಾತು ಕುತಂತ್ರ?:ಅನುದಾನಿತ ಶಿಕ್ಷಣ ಸಂಸ್ಥೆಗಳು ಖಾಲಿ ಹುದ್ದೆಗಳ ನೇಮಕಾತಿಗೆ ನೀಡುವ ‘ಬೇಕಾಗಿದ್ದಾರೆ’ ಎಂಬ ಜಾಹೀರಾತು ನೀಡುವಲ್ಲೇ ಕುತಂತ್ರ ನಡೆಯುತ್ತಿತ್ತು. ಧಾರವಾಡದ ಅನುದಾನಿತ ಶಾಲೆಗೆ ಶಿಕ್ಷಕರ ನೇಮಕ ನಡೆಯುತ್ತಿದ್ದರೆ ದೂರದ ಕೋಲಾರ, ಚಾಮರಾಜನಗರ, ಬೀದರ್ ಭಾಗದಲ್ಲಿ ಮಾತ್ರ ಜಾಹೀರಾತು ಪ್ರಕಟಿಸುವ ಸಂಸ್ಥೆಗಳಿದ್ದವು. ಅದನ್ನು ತಪ್ಪಿಸಿರುವ ಮೇಜರ್ ಹಿರೇಮಠ, ಜಾಹೀರಾತನ್ನು ರಾಜ್ಯದ ಪ್ರಮುಖ 2 ಪತ್ರಿಕೆಗಳಲ್ಲಿ ರಾಜ್ಯವ್ಯಾಪಿ ಪ್ರಕಟಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಇದು ಅನೇಕ ಶಿಕ್ಷಣ ಸಂಸ್ಥೆಗಳಿಗೆ ನುಂಗಲಾರದ ತುತ್ತಾದರೂ, ಅರ್ಹರಿಗೆ ಉದ್ಯೋಗ ದೊರಕಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಪಾರದರ್ಶಕತೆ ಪಾಲಿಸಲೇಬೇಕು:ಸಂಸ್ಥೆಗಳು ಅನುಮತಿ ಪಡೆದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಾಗಿ ಸಂದರ್ಶನ ಸಮಿತಿ ರಚಿಸಬೇಕು. ಅದರಲ್ಲಿ ಶಿಕ್ಷಣ ಇಲಾಖೆಯಿಂದ ಸೂಚಿತ ಇಲಾಖೆ ಪ್ರತಿನಿಧಿಯೂ ಇರಬೇಕು. ಸಂಸ್ಥೆಯು ಅನುಸರಿಸಿದ ನೇಮಕಾತಿಯು ಕ್ರಮಬದ್ಧವಾಗಿರುವಂತೆ ಇಲಾಖೆ ಪ್ರತಿನಿಧಿ ನೋಡಿಕೊಳ್ಳಬೇಕು. ಅಭ್ಯರ್ಥಿಯು ಆಯಾ ಶಿಕ್ಷಣ ಸಂಸ್ಥೆಗೆ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡಿಡಿಪಿಐ ಕಚೇರಿಗೂ ಕಳುಹಿಸಬೇಕು. ಇದರಿಂದ ಅರ್ಜಿಯೊಂದಿಗೆ ಶೈಕ್ಷಣಿಕ, ಇತರ ದಾಖಲೆಗಳನ್ನು ಲಗತ್ತಿಸಿಲ್ಲ ಎಂಬ ಸಬೂಬು ಹೇಳಲು ಸಾಧ್ಯವಿಲ್ಲ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯು ಪದವಿ, ಬಿ.ಇಡಿ ಹಂತದಲ್ಲಿ ಪಡೆದ ಅಂಕಗಳ ಶೇಕಡಾವಾರು ಆಧರಿಸಬೇಕು. ಪ್ರತಿ ಹುದ್ದೆಗೆ ಮೆರಿಟ್ ಆಧಾರದ ಮೇಲೆ ಅರ್ಹ ಮೇಲ್ಪಂಕ್ತಿಯ 10 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಬೇಕು. ಸಂದರ್ಶನ ಪತ್ರ ರವಾನಿಸಿದ ನೋಂದಾಯಿತ ಅಂಚೆ ರಸೀದಿಗಳನ್ನು ಆಡಳಿತ ಮಂಡಳಿ ಕಾಯ್ದಿಟ್ಟುಕೊಳ್ಳಬೇಕು. ಅರ್ಹ ಮೇಲ್ಪಂಕ್ತಿಯಲ್ಲಿದ್ದರೂ ಸಂದರ್ಶನಕ್ಕೆ ಗೈರು ಹಾಜರಾದರೆ ಅದರ ಹಿಂದಿನ ಕಾರಣವನ್ನು ಉಪನಿರ್ದೇಶಕರು ಪರಿಶೀಲಿಸಬೇಕು ಎಂದು ಆದೇಶಿಸಲಾಗಿದೆ.
ಈ ಎಲ್ಲ ಷರತ್ತು ಹಾಗೂ ಕಠಿಣ ನಿಯಮಾವಳಿ ಪಾಲನೆ ಆಡಳಿತ ಮಂಡಳಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಹಲವೆಡೆ ವಿರೋಧ ವ್ಯಕ್ತವಾದರೂ ಪಾಲನೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಶಿಕ್ಷಕ ಹುದ್ದೆಗಳ ಮಾರಾಟ ತಪ್ಪಿ, ಮೆರಿಟ್ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕು. ಅದಕ್ಕಾಗಿ ಆಡಳಿತ ಮಂಡಳಿಗಳು ಖಾಲಿ ಹುದ್ದೆಗಳ ಮಾಹಿತಿಯನ್ನು ಮುಕ್ತವಾಗಿಸಿ, ಪಾರದರ್ಶಕವಾಗಿ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳ ಲಾಗಿದೆ. ಭ್ರಷ್ಟಾಚಾರ ತಡೆಗೆ ನಿಯಮಾವಳಿ ಪಾಲನೆ ಅತ್ಯವಶ್ಯ.
| ಮೇಜರ್ ಸಿದ್ದಲಿಂಗಯ್ಯ ಹಿರೇಮಠಅಪರ ಆಯುಕ್ತ, ಬೆಳಗಾವಿ ವಿಭಾಗ
ಒಂಬತ್ತು ಶೈಕ್ಷಣಿಕ ಜಿಲ್ಲೆಗಳ ಪ್ರೌಢಶಾಲೆಗಳಲ್ಲಿ ಖಾಲಿ ಹುದ್ದೆ ಮಾಹಿತಿ, ನೇಮಕಾತಿಗೆ ಇಲಾಖೆ ಅನುಮತಿ ನೀಡಿರುವ ಪತ್ರದ ಪ್ರತಿಯನ್ನು ಆಯುಕ್ತರು ತಮ್ಮ ಕಚೇರಿಯ ವೆಬ್​ಸೈಟ್ ್ಚಜಿಛಜಚ್ಟಡಿಚಛ.kಚ್ಟ.ಜ್ಚಿ.ಜ್ಞಿನಲ್ಲಿ ಅಪ್​ಲೋಡ್ ಮಾಡಿಸಿದ್ದಾರೆ. ಇದರಿಂದಾಗಿ ಆಸಕ್ತರು ಬಿಇಒ, ಡಿಡಿಪಿಐ ಹಾಗೂ ಆಯುಕ್ತರ ಕಚೇರಿಗೆ ಅಲೆದಾಡುವುದು ತಪ್ಪಿದೆ. ಜನಪರ ಉಪಕ್ರಮ ಗಳಿಂದಾಗಿ, ಅರ್ಹತೆ ಇಲ್ಲದಿದ್ದರೂ ಪ್ರಭಾವ ಬಳಸಿ, ಹಣಬಲದ ನೆಲೆಯಲ್ಲಿ ನೇಮಕಗೊಳ್ಳುವುದಕ್ಕೆ ಕೊಂಚ ಕಡಿವಾಣ ಬಿದ್ದಿದೆ.

ವಿಶ್ವಮಟ್ಟಕ್ಕಿಂತಲೂ ಮೈಸೂರಲ್ಲೇ ಅತ್ಯಧಿಕ ಕರೊನಾ ಸಾವು!



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
