ಬೆಂಗಳೂರು:ಜೆಡಿಎಸ್​ಗೆ ಮತ ನೀಡಿದರೆ ಅದು ಕಾಂಗ್ರೆಸ್​​ ಪಕ್ಷವನ್ನು ಗೆಲ್ಲಿಸಿದಂತೆ, ಅದರ ಬದಲು ಬಿಜೆಪಿಗೇ ಮತ ಹಾಕಿ ಬಹುಮತದಿಂದ ಗೆಲ್ಲಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಕರೆ ನೀಡಿದ್ದಾರೆ. ದೇವನಹಳ್ಳಿಯಲ್ಲಿ ಇಂದು ವಿಜಯ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇದನ್ನೂ ಓದಿ:ಗೃಹ ಸಚಿವರ ಬೆಂಗಾವಲು​ ವಾಹನ ಡಿಕ್ಕಿ, ಬೈಕ್ ಸವಾರ ಸಾವು; ಅಪಘಾತದ ಬಗ್ಗೆ ತಿಳಿದೂ ಹಾಗೇ ಹೋದ್ರಾ ಹೋಂ​ ಮಿನಿಸ್ಟರ್​?
ಜನರು ಜೆಡಿಎಸ್​ಗೆ ಮತ ನೀಡಿದರೆ ಅದು ಕೆಲವೇ ಕೆಲವು ಸ್ಥಾನಗಳಲ್ಲಿ ಗೆದ್ದು, ಕಾಂಗ್ರೆಸ್​​ಗೆ ಬೆಂಬಲ ನೀಡುತ್ತದೆ. ಇದರಿಂದ ಮತ್ತೆ ಭ್ರಷ್ಟಾಚಾರಿ ಜೆಡಿಎಸ್​-ಕಾಂಗ್ರೆಸ್​ಗಳು ಅಧಿಕಾರಕ್ಕೆ ಬಂದಂತಾಗುತ್ತದೆ. ಅದರ ಬದಲು ಬಿಜೆಪಿಯನ್ನೇ ಇನ್ನೊಮ್ಮೆ ನಂ. 1 ಆಗಿಸುವಂತೆ ಗೆಲ್ಲಿಸಿ, ನಾವು ಕರ್ನಾಟಕವನ್ನು ಭಾರತದಲ್ಲೇ ನಂ. 1 ಮಾಡುತ್ತೇವೆ ಎಂಬುದಾಗಿ ಹೇಳಿದರು.
ಇದನ್ನೂ ಓದಿ:ಟ್ರಾಫಿಕ್ ಫೈನ್, ಮತ್ತೆ 50% ಆಫರ್​​: ಎಷ್ಟು ದಿನಗಳವರೆಗೆ ಅವಕಾಶ?
ಎಫ್​ಡಿಐನಲ್ಲಿ ನಂಬರ್ ಒನ್ ಇರುವ ಬಿಜೆಪಿಯನ್ನು ಗೆಲ್ಲಿಸುತ್ತೀರೋ ಇಲ್ಲ ಭ್ರಷ್ಟಾಚಾರದಲ್ಲಿ ನಂ. 1 ಇರುವ ಕಾಂಗ್ರೆಸ್​-ಬಿಜೆಪಿಗೆ ಮತ ನೀಡುತ್ತೀರೋ ಯೋಚಿಸಿ. ಏವಿಯೇಷನ್​-ಸ್ಪೇಸ್​ ಟೆಕ್ನಾಲಜಿಯಲ್ಲಿ ನಂ. 1 ಇರುವ ಬಿಜೆಪಿಯನ್ನು ಗೆಲ್ಲಿಸುತ್ತೀರೋ ತಂತಮ್ಮ ಪರಿವಾರವನ್ನು ನಂ. 1 ಮಾಡುವ ಜೆಡಿಎಸ್-ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸುತ್ತೀರೋ ಚಿಂತಿಸಿ. ಯುನಿಕಾರ್ನ್​ ಸ್ಟಾರ್ಟಪ್​ಗಳಲ್ಲಿ ನಂ. 1 ಆಗಿಸುವ ಬಿಜೆಪಿಗೆ ಮತ ನೀಡುತ್ತೀರೋ ಇಲ್ಲ ಕುಟುಂಬದ ಪ್ರತಿಯೊಬ್ಬರಿಗೆ ಟಿಕೆಟ್ ನೀಡುವ ಜೆಡಿಎಸ್​ಗೆ ಮತ ನೀಡುತ್ತೀರೋ ಯೋಚನೆ ಮಾಡಿ. ಪಿಎಫ್​​ಐ ಬ್ಯಾನ್ ಮಾಡುವ ಬಿಜೆಪಿಗೆ ವೋಟ್ ನೀಡುತ್ತಿರೋ ಇಲ್ಲ ಭಯೋತ್ಪಾದನೆಗೆ ಬೆಂಬಲ ನೀಡುವ ಕಾಂಗ್ರೆಸ್​ಗೆ ಮತ ನೀಡುತ್ತೀರೋ ಯೋಚಿಸಿ ಎಂದ ಷಾ, ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸುವಂತೆ ಕೇಳಿಕೊಂಡರು. ಆ ಮೂಲಕ ಮೋದಿ-ಬೊಮ್ಮಾಯಿ ಕೈ ಬಲಪಡಿಸುವಂತೆ ಮನವಿ ಮಾಡಿಕೊಂಡರು.
ಕಲ್ಯಾಣ ಮಂಟಪದಲ್ಲೇ ಕುಸಿದು ಬಿದ್ದ ವರ; ಆಸ್ಪತ್ರೆಯ ಮಾರ್ಗಮಧ್ಯೆ ಸಾವು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eight =
Remember me
