ಮಂಡ್ಯ:ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆಗೆ ರಾಜ್ಯದ್ಯಂತ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್​ ದೊರೆತ್ತಿದ್ದು, ಬಸ್​ನಲ್ಲಿ ಪ್ರಯಾಣಿಸಲು ನೂಕುನುಗ್ಗಲು ಉಂಟಾಗುತ್ತಿದೆ.
ಸೋಮವಾರ ಮಳವಳ್ಳಿಯಲ್ಲಿ ಬಸ್​ ಹತ್ತುವ ವೇಳೆ ನೂಕುನುಗ್ಗಲು ಉಂಟಾದ ಕಾರಣ ಡೋರ್​ ಕಳಚಿ ಬಿದ್ದಿತ್ತು ಎಂಬ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.
ಇನ್ನು ವೈರಲ್​ ಸುದ್ದಿಯ ಕುರಿತು ಡಿಪೋ ವ್ಯವಸ್ಥಾಪಕ ಶಿವಕುಮಾರ್ ಪ್ರತಿಕ್ರಿಯಿಸಿದ್ದು,​ ಕಳಚಿಕೊಳ್ಳುವ ಹಂತದಲ್ಲಿದ್ದ ಬಸ್​ನ ಡೋರ್​ಅನ್ನು ಚಾಲಕ ಹಾಗೂ ನಿರ್ವಾಹಕ ಮುಂಜಾಗ್ರತ ಕ್ರಮವಾಗಿ ಅದನ್ನು ಬದಲಾಯಿಸಿದ್ಧಾರೆ. ಮಹಿಳೆಯರೇ ಬಸ್​ನ ಡೋರ್​ ಮುರಿದರು ಎಂದರೆ ಅದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ಧಾರೆ.
ಇದನ್ನೂ ಓದಿ:ಚಲಿಸುವ ಆಟೋದಲ್ಲಿ ಪ್ರೇಯಸಿಯ ಕತ್ತು ಸೀಳಿ ಹತ್ಯೆ ಮಾಡಿದ ಪ್ರಿಯಕರ
ಮಳವಳ್ಳಿಯಿಂದ ಮೈಸೂರಿನತ್ತ ಹೊರಟ್ಟಿದ್ದ ಬಸ್​ನ ಡೋರ್​ ಮೊದಲೇ ಅಲುಗಾಡುತ್ತಿತ್ತು. ಮಹಿಳಾ ಪ್ರಯಾಣಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್​ ಏರುತ್ತಿದ್ದರು. ಬಾಗಿಲು ಕಿತ್ತು ಬರುವ ಅಪಾಯವನ್ನು ಅಇರತ ಚಾಲಕ ಹಾಗೂ ನಿರ್ವಾಹಕ ಕೂಡಲೇ ಡಿಪೋ ಅಧಿಕಾರಿಗಳಿಗೆ ಮಾಹಿತಿ ನೀಡಿ ಹೊಸ ಡೋರ್​ ಒಂದನ್ನು ತರಿಸಿಕೊಂಡಿದ್ಧಾರೆ.
ಡೋರ್​ ಬದಲಾಯಿಸುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣ ಮಹಿಳೆಯರೇ ಬಸ್​ನ ಬಾಗಿಲನ್ನು ಕಿತ್ತು ಹಾಕಿದ್ಧಾರೆ ಎಂದು ಗೊಂದಲ ಸೃಷ್ಟಿಯಾಯಿತ್ತು ಎಂದು ಘಟನೆ ಕುರಿತು ಮಾಹಿತಿ ನೀಡಿದ್ಧಾರೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:fifteen − 3 =
Remember me
