ತಿರುವನಂತಪುರಂ:ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ನಟನ ತಾಯಿಗೆ 93 ವರ್ಷ ವಯಸ್ಸಾಗಿದ್ದು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇಂದು ಸಂಜೆ 4 ಗಂಟೆಗೆ ಚೆಂಪು ಜುಮಾ ಮಸೀದಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಆಕೆ ತನ್ನ ಐವರು ಮಕ್ಕಳನ್ನು ಅಗಲಿದ್ದಾರೆ.
ಈದ್‌ನ ಮುನ್ನ, ಮಮ್ಮುಟ್ಟಿ ಅವರ ತಾಯಿ ಮತ್ತು ದುಲ್ಕರ್ ಸಲ್ಮಾನ್ ಅವರ ಅಜ್ಜಿಯ ನಿಧನವು ಅವರ ಕುಟುಂಬವನ್ನು ದುಃಖಕ್ಕೆ ತಳ್ಳಿದೆ. ನಿಧನದ ನಂತರ, ಮಲಯಾಳಂ ಸಿನಿ ಲೋಕದ ಅನೇಕ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಸಂಸದ ಶಶಿ ತರೂರ್ ಕೂಡ ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಸುದ್ದಿಯನ್ನು ಜಗತ್ತಿಗೆ ತಿಳಿಸಿದರು.
ಅವರು “ಇಂದು ಬೆಳಿಗ್ಗೆ ಅವರ ತಾಯಿಯ ನಿಧನದ ಬಗ್ಗೆ ಸಂತಾಪವನ್ನು ವ್ಯಕ್ತಪಡಿಸಲು @ಮಮ್ಮುಕ್ಕ ಜತೆ ಮಾತನಾಡಿದ್ದೇನೆ. ನಾನು ಬೆಳೆದಂತೆ ನಾನು ನನ್ನ ಸ್ವಂತ ತಾಯಿಗೆ ಹೆಚ್ಚು ಹತ್ತಿರವಾಗಿದ್ದೇನೆ. ಹೀಗಾಗಿ ಈ ಭರಿಸಲಾಗದ ಸಂಬಂಧದ ಅಮೂಲ್ಯತೆಯನ್ನು ನಾನು ಅರಿತುಕೊಂಡಿದ್ದೇನೆ. ಅವರ ನಷ್ಟವನ್ನು ನಿಭಾಯಿಸಲು ಶಾಂತಿಯನ್ನು ಕಂಡುಕೊಳ್ಳಲಿ” ಎಂದು ಟ್ವೀಟ್​ ಮಾಡಿದ್ದಾರೆ.
Spoke to ⁦@mammukka⁩ this morning to express my sincere condolences on the passing of his mother. As I have grown older I have become much closer to my own mother, & I am aware of the preciousness of this irreplaceable bond. May he find the peace of mind to cope w/his loss.pic.twitter.com/s7ThIIb8lz— Shashi Tharoor (@ShashiTharoor)April 21, 2023
Spoke to ⁦@mammukka⁩ this morning to express my sincere condolences on the passing of his mother. As I have grown older I have become much closer to my own mother, & I am aware of the preciousness of this irreplaceable bond. May he find the peace of mind to cope w/his loss.pic.twitter.com/s7ThIIb8lz
ಮಮ್ಮುಟ್ಟಿಯವರು ತಂದೆ ತಾಯಿಯಾದ ಇಸ್ಮಾಯಿಲ್ ಮತ್ತು ಫಾತಿಮಾ ಅವರಿಗೆ 7 ಸೆಪ್ಟೆಂಬರ್ 1951 ರಂದು ಚಂದಿರೂರಿನಲ್ಲಿ ಜನಿಸಿದರು. ಅವರು ಕೊಟ್ಟಾಯಂನ ವೈಕೋಮ್ ಬಳಿಯ ಚೆಂಪು ಗ್ರಾಮದಲ್ಲಿ ತಮ್ಮ ಹೆತ್ತವರೊಂದಿಗೆ ವಾಸಿಸುತ್ತಿದ್ದರು. ಅವರು ಮಧ್ಯಮ ವರ್ಗದ ಮುಸ್ಲಿಂ ಕುಟುಂಬಕ್ಕೆ ಸೇರಿದವರು. ಅವರ ತಂದೆ ಇಸ್ಮಾಯಿಲ್ ಸಗಟು ಬಟ್ಟೆ ಮತ್ತು ಅಕ್ಕಿ ವ್ಯಾಪಾರವನ್ನು ಹೊಂದಿದ್ದರು. ಅದರ ಜತೆಗೆ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದವರು. ಅವರ ತಾಯಿ ಫಾತಿಮಾ ಗೃಹಿಣಿಯಾಗಿದ್ದರು. ಮಮ್ಮುಟ್ಟಿ ಹಿರಿಯ ಮಗನಾಗಿದ್ದು ಅವರು ಒಟ್ಟು ಐವರು ಒಡಹುಟ್ಟಿದವರು ಇದ್ದಾರೆ.
ಅವರಿಗೆ ಇಬ್ಬರು ಕಿರಿಯ ಸಹೋದರರು, ಇಬ್ರಾಹಿಂಕುಟ್ಟಿ ಮತ್ತು ಜಕಾರಿಯಾ ಮತ್ತು ಮೂವರು ಕಿರಿಯ ಸಹೋದರಿಯರು, ಅಮೀನಾ, ಸೌದಾ ಮತ್ತು ಶಫಿನಾ ಇದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 9 =
Remember me
