ಹುಬ್ಬಳ್ಳಿ:ಮಹಿಳಾ ಪ್ರಯಾಣಿಕಳ ಸೀಟಿನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆ ವಿಜಯಪುರ ಮತ್ತು ಮಂಗಳೂರು ನಡುವೆ ಸಂಚರಿಸುವ ನಾನ್ ಎಸಿ ಸ್ಲೀಪರ್ ಬಸ್​ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಹುಬ್ಬಳ್ಳಿ ತಾಲೂಕಿನ ಕಿರೇಸೂರ್ ಡಾಬಾ ಬಳಿ ಮಂಗಳೂರು-2ನೇ ಘಟಕಕ್ಕೆ‌ ಸೇರಿದ್ದ ನಾನ್ ಎಸಿ ಸ್ಲೀಪರ್ ಬಸ್​ನಲ್ಲಿ ನಡೆದಿದೆ. ಪ್ರಯಾಣಿಕರ ಊಟ, ತಿಂಡಿಗಾಗಿ ಡಾಬಾ ಬಳಿ ಬಸ್​ ನಿಲ್ಲಿಸಿದಾಗ ಎಲ್ಲ ಪ್ರಯಾಣಿಕರು ಕೆಳಗೆ ಇಳಿದಿದ್ದರು. ಈ ವೇಳೆ 30 ವರ್ಷದ ವ್ಯಕ್ತಿ ಮೂತ್ರ ವಿಸರ್ಜ‌ನೆ ಮಾಡಿದ್ದಾನೆ. ಆತ ವಿಜಯಪುರದಿಂದ ಮಂಗಳೂರಿಗೆ ಹೊರಟಿದ್ದ.
ಇದನ್ನೂ ಓದಿ:ಚಿಕ್ಕಮಗಳೂರು: ಅಧಿಕಾರಿಗಳ ವರ್ತನೆಗೆ ಬೇಸತ್ತು ಒಂದೇ ಗ್ರಾಮ ಪಂಚಾಯಿತಿಯ 10 ಸದಸ್ಯರು ರಾಜೀನಾಮೆ
ಕುಡಿದ ಮತ್ತಿನಲ್ಲಿ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆಂಬ ಮಾಹಿತಿ ಸಿಕ್ಕಿದೆ. 20 ವರ್ಷದ ಯುವತಿಯ ಮೀಸಲು ಸೀಟಿನ ಮೇಲೆ‌ ಮೂತ್ರ ವಿಸರ್ಜನೆ ಮಾಡಲಾಗಿದೆ. ಊಟ ಮಾಡಿ ವಾಪಸ್ಸಾಗುವ ವೇಳೆ ಯುವತಿಯು ಮೂತ್ರ ವಿಸರ್ಜನೆ ದೃಶ್ಯವನ್ನು ಗಮನಿಸಿದ್ದಾಳೆ. ಬಳಿಕ ಆಕೆ ಚಾಲಕ ಮತ್ತು ನಿರ್ವಾಹಕರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ಓಡಿ ಬಂದ ನಿರ್ವಾಹಕ ಮತ್ತು ಚಾಲಕ, ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕನನ್ನು ಬಸ್ಸಿನಿಂದ ಕೆಳಗಿಳಿಸಿದ್ದಾರೆ. ಈ ವೇಳೆ ಸಹ ಪ್ರಯಾಣಿಕರು ಸಹ ಆತನನ್ನು ಬೈದು ತರಾಟೆಗೆ ತೆಗೆದುಕೊಂಡರು.
ಇದಾದ ಬಳಿಕ ಮೂತ್ರ ವಿಸರ್ಜನೆ ಮಾಡಿದ ಸೀಟನ್ನು ಚಾಲಕ ಮತ್ತು ನಿರ್ವಾಹಕ ಶುಚಿಗೊಳಿಸಿದರು. ನಂತರ ಬಸ್​ ಹುಬ್ಬಳ್ಳಿಯ ಕಡೆ ಸಾಗಿತು. ಯುವತಿ ಸೇರಿ 6 ಮಂದಿ ಹುಬ್ಬಳ್ಳಿಯಲ್ಲಿ ಇಳಿದುಕೊಂಡರು. ಮೂತ್ರ ವಿಸರ್ಜನೆ ಮಾಡಿದಾತನ ಮಾಹಿತಿ ತಿಳಿದು ಬಂದಿಲ್ಲ. ಘಟನೆಯ ಬಗ್ಗೆ ದೂರು ನೀಡಲು ಯುವತಿ ಹಿಂದೇಟು ಹಾಕಿದ್ದಾಳೆಂಬ ಮಾಹಿತಿ ಸಿಕ್ಕಿದೆ.(ದಿಗ್ವಿಜಯ ನ್ಯೂಸ್​)
ಚಿಕ್ಕಮಗಳೂರು: ಅಧಿಕಾರಿಗಳ ವರ್ತನೆಗೆ ಬೇಸತ್ತು ಒಂದೇ ಗ್ರಾಮ ಪಂಚಾಯಿತಿಯ 10 ಸದಸ್ಯರು ರಾಜೀನಾಮೆ

ರಾಜ್ಯ ಚುನಾವಣೆಗೆ ಭದ್ರಕೋಟೆ: ಅರೆಸೇನಾ ಪಡೆಗಳಿಗೆ ಹೆಚ್ಚಿದ ಬೇಡಿಕೆ; ಗದ್ದಲ, ಹಿಂಸಾಚಾರದ ಭೀತಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × 3 =
Remember me
