ಬೆಂಗಳೂರು:ಸಾಗರದ ಪ್ರಜ್ಞಾ ಭಾರತಿ ವಿದ್ಯಾಮಂದಿರ ಸಂಸ್ಥೆಯ ಶ್ರೀ ಗಜಾನನ ಸಂಸ್ಕೃತ ಪಾಠಶಾಲೆ ನೀಡುವ 2020ನೇ ಸಾಲಿನ ರಂಗನಾಥ ಶರ್ಮಾ ಸಂಸ್ಮೃತಿ ಪುರಸ್ಕಾರಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಆಯ್ಕೆ ಆಗಿದ್ದಾರೆ.
ವಿದ್ವಾನ್ ರಂಗನಾಥ ಶರ್ಮಾ ಸಂಸ್ಮೃತಿ ಪುರಸ್ಕಾರದಲ್ಲಿ ರಂಗನಾಥ ಶರ್ಮಾ ಅವರ ಕಿರಿಯ ಪುತ್ರಿ ಶ್ರೀಮತಿ ಜಯಶ್ರೀ ಎನ್.ಆರ್. ಅವರು ಸಹಯೋಗ ನೀಡುತ್ತಿದ್ದಾರೆ. ಪುರಸ್ಕಾರವು ಹತ್ತು ಸಾವಿರ ರೂ. ನಗದು ಹೊಂದಿದೆ. ಕರೊನಾ ಹಿನ್ನೆಲೆಯಲ್ಲಿ ಆನ್​ಲೈನ್​ ಕಾರ್ಯಕ್ರಮದಲ್ಲಿ ಈಗ ಗೌರವ ಸಲ್ಲಿಸುತ್ತಿದ್ದು ಮುಂದಿನ ದಿನಗಳಲ್ಲಿ ಪುರಸ್ಕಾರ ಕಾರ್ಯಕ್ರಮ ಮಾಡಲಾಗುವುದೆಂದು ಸಂಸ್ಥೆಯ ವ್ಯವಸ್ಥಾಪಕ ಸದಾನಂದ ಶರ್ಮಾ ತಿಳಿಸಿದ್ದಾರೆ.
ಸಾಗರದ ಪ್ರಜ್ಞಾ ಭಾರತಿ ವಿದ್ಯಾಮಂದಿರ ಸಂಸ್ಥೆ ನಡೆಸುತ್ತಿರುವ ಶ್ರೀ ಗಜಾನನ ಸಂಸ್ಕೃತ ಪಾಠಶಾಲೆಯು ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳವರಿಂದ 1949ರಲ್ಲಿ ಸಂಸ್ಥಾಪಿತವಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಬೋಧಿಸಿದ್ದಲ್ಲದೆ ನೂರಾರು ಸಂಸ್ಕೃತ ತಜ್ಞರನ್ನು ಸಮಾಜಕ್ಕೆ ನೀಡಿದ ಹಿರಿಮೆ ಪಾಠಶಾಲೆಗಿದೆ.
ಪ್ರಶಸ್ತಿ ಹಿನ್ನೆಲೆ:2017ರಿಂದ ಪಾಠಶಾಲೆಯು ಈ ನಾಡು ಕಂಡ ಸಂಸ್ಕೃತ – ಕನ್ನಡ ಉಭಯ ಭಾಷಾ ವಿಶಾರದ ಪಂಡಿತ ಮಹಾಮಹೋಪಾಧ್ಯಾಯ ವಿದ್ವಾನ್ ನಡಹಳ್ಳಿ ರಂಗನಾಥ ಶರ್ಮಾರ ಸಂಸ್ಮೃತಿಯಲ್ಲಿ ನಾಡಿನ ಸಂಸ್ಕೃತ ವಿದ್ವಾಂಸರನ್ನು ಪುರಸ್ಕರಿಸುವ ಮೂಲಕ ರಂಗನಾಥ ಶರ್ಮಾರ ಸಾಧನೆ – ಶೋಧನೆ – ಬೋಧನೆಗಳು ಚಿರಸ್ಥಾಯಿ ಆಗಿಸಬೇಕೆಂದು ಸಂಕಲ್ಪಿಸಿ ಕಾರ್ಯಪ್ರವೃತ್ತವಾಗಿದೆ. 2017ರಲ್ಲಿ ವೇದವಿದ್ವಾಂಸ ವಿದ್ವಾನ್ ವಿಶ್ವೇಶ್ವರ ಭಟ್ಟ ಪಳ್ಳತಡ್ಕ, 2018ರಲ್ಲಿ ಸಂಸ್ಕೃತ ಕನ್ನಡ ಉಭಯ ಭಾಷಾ ವಿಶಾರದ ವಿದ್ವಾಂಸ ನರಹರಿ ಕೇಶವ ಭಟ್ಟ, 2019ರಲ್ಲಿ ಶ್ರೇಷ್ಠ ಸಂಸ್ಕೃತ ಶಾಸ್ತ್ರಜ್ಞ ಶೃಂಗೇರಿ ಶ್ರೀಸಂಸ್ಥಾನದ ಆಸ್ಥಾನ ವಿದ್ವಾಂಸ ವಿದ್ವಾನ್ ಜಿ. ಮಹಾಬಲೇಶ್ವರ ಭಟ್ಟ ಅವರಿಗೆ ಈ ಪುರಸ್ಕಾರ ನೀಡಲಾಗಿದೆ.
ವೆಂಕಟೇಶ ಅವರ ಪರಿಚಯ:ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸರು. ಲೇಖಕರಾಗಿ ಮೌಲಿಕ ಗ್ರಂಥಗಳನ್ನು ರಚಿಸಿದವರು. ಅಂಕಣಕಾರರಾಗಿ ಪ್ರವಚನ ಭಾಷಣಕಾರರಾಗಿ ಸಂಪಾದಕರಾಗಿ ಗುರುತಿಸಿಕೊಂಡವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕನ್ನಡ ವಿದ್ಯಾ ಸರಸ್ವತಿಯ ಸೇವೆಗೈದವರು. ಭಾರತೀಯ ದರ್ಶನ ಶಾಸ್ತ್ರಗಳ ತಲಸ್ಪರ್ಶಿ ಅಧ್ಯಯನ – ಅನುಭವ ಹೊಂದಿದ ಶ್ರೀಯುತರು ಸಂಸ್ಕೃತ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ಸಂಸ್ಕೃತ ಕ್ಷೇತ್ರದಲ್ಲಿ ರಚನಾತ್ಮಕ ಕಾರ್ಯ ಕೈಗೊಂಡವರು. ಪಾಠಶಾಲೆಗಳ ಪುನರಾರಂಭ ಸಂಸ್ಕೃತ ಕಾಲೇಜುಗಳಿಗೆ ಹೊಸಚೈತನ್ಯ ನೀಡಿ ವಿಶಿಷ್ಟ ಪ್ರಕಲ್ಪ ನೀಡಿದವರು. ವಿದ್ವಾನ್ ರಂಗನಾಥ ಶರ್ಮಾರ ಒಡನಾಡಿಯಾಗಿ ಗುರುಸೇವೆಗೈದವರು. ‘ಶಿವತತ್ತ್ವ ರತ್ನಾಕರ’ದಂಥ ವಿಷಯ ಕೋಶವನ್ನು ಸಂಸ್ಕೃತದಿಂದ ಕನ್ನಡ ಲೋಕಕ್ಕೆ ನೀಡುವಲ್ಲಿ ಇವರ ವಿಶೇಷ ಕೊಡುಗೆ ಇದೆ. ರಾಷ್ಟ್ರಪತಿ ಪುರಸ್ಕಾರ ಆಯ್ಕೆ ಸಮಿತಿಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ ಪಡೆದು ಸಂಮಾನಿತರೂ ಆಗಿದ್ದಾರೆ. ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಸಾವಿರಾರು ಓದುಗರ ಅಧ್ಯಾತ್ಮ ತೃಷೆ ತಣಿಸಿದ್ದಾರೆ.
ಕಾರಿನಲ್ಲೇ ಕೂತು ಲಸಿಕೆ ಪಡೆಯಿರಿ ! ಪ್ರತಿ ವಲಯದಲ್ಲೂ ಡ್ರೈವ್​ಇನ್ ಲಸಿಕಾ ಕೇಂದ್ರಗಳ ಸ್ಥಾಪನೆ

ಅಮ್ಮ ಬದುಕಬೇಕಿದ್ರೆ ವೆಂಟಿಲೇಟರ್ ಅಗತ್ಯ, ದಯವಿಟ್ಟು ಕೊಡಿಸಿ: ಸಚಿವರಿಗೆ ಕೈಮುಗಿದು ಬೇಡಿಕೊಂಡ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + thirteen =
Remember me
