ಬೆಂಗಳೂರು:ಮಲ್ಲಿಕಾರ್ಜುನ ಖರ್ಗೆ ಹಾಗೂ ಪತ್ನಿ ರಾಧಾಬಾಯಿ ಬಳಿ ಒಂದೇ ಒಂದು ಕಾರೂ ಇಲ್ಲ. ಕೃಷಿ ಭೂಮಿಯೂ ಇಲ್ಲ..!
ಚುನಾವಣಾ ನಾಮಪತ್ರದ ಜತೆ ಸಲ್ಲಿಸಿರುವ ಆಸ್ತಿ ಘೋಷಣಾ ಪತ್ರದಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಖರ್ಗೆ ಅವರಿಗಿಂತ ಪತ್ನಿ ರಾಧಾಬಾಯಿಯೇ ಸಿರಿವಂತರಾಗಿದ್ದಾರೆ. ಖರ್ಗೆ ಬಳಿ 2.50 ಲಕ್ಷ, ಪತ್ನಿ ಬಳಿ 2 ಲಕ್ಷ, ಅವಿಭಜಿತ ಕುಟುಂಬದಲ್ಲಿ 1 ಲಕ್ಷ ನಗದು ಇದ್ದರೆ, ಖರ್ಗೆ ಉಳಿತಾಯ ಖಾತೆ ಸೇರಿ ವಿವಿಧ ಬ್ಯಾಂಕ್​ಗಳಲ್ಲಿ 1,64,62,765 ರೂ. ಠೇವಣಿ ಇಟ್ಟಿದ್ದಾರೆ. ಪತ್ನಿ ಹೆಸರಿನಲ್ಲಿ 38,07,955 ರೂ., ಅವಿಭಜಿತ ಕುಟುಂಬ ಹೆಸರಿನಲ್ಲಿ 15,25,230 ರೂ. ಠೇವಣಿ ಇಡಲಾಗಿದೆ.
ಬಾಂಡ್/ಷೇರುಗಳಲ್ಲಿ ಖರ್ಗೆ ಹೆಸರಿನಲ್ಲಿ 28,39,264 ರೂ. ಹಾಗೂ ರಾಧಾಬಾಯಿ ಹೆಸರಿನಲ್ಲಿ 2,12,663 ರೂ. ಹೂಡಿಕೆಯಾಗಿದೆ. ಖರ್ಗೆ ಬಳಿ ಪಿತ್ರಾರ್ಜಿತವಾಗಿ ಬಂದ 255 ಗ್ರಾಂ ಚಿನ್ನ, 6 ಕೆಜಿ ಬೆಳ್ಳಿ ಆಭರಣಗಳಿವೆ.
ರಾಧಾಬಾಯಿ ಹೆಸರಿನಲ್ಲಿ 805 ಗ್ರಾಂ. ಚಿನ್ನಾಭರಣಗಳಿದ್ದು, ಈ ಪೈಕಿ 405 ಗ್ರಾಂ. ಪಾಲಕ ಹಾಗೂ ಸಂಬಂಧಿಕರಿಂದ ಬಂದ ಕೊಡುಗೆ, 400 ಗ್ರಾಂ ಮಕ್ಕಳ ಮದುವೆ ಸಂದರ್ಭದಲ್ಲಿ ಗಿಫ್ಟ್ ಬಂದಿರುವುದಾಗಿದೆ. 11 ಕೆಜಿ ಬೆಳ್ಳಿ ಆಭರಣಗಳಿವೆ.
ಕೃಷಿ ಭೂಮಿ: ಖರ್ಗೆ ಹೆಸರಿನಲ್ಲಿ ಕೃಷಿ ಭೂಮಿಯೇ ಇಲ್ಲ. ಆದರೆ, ಪತ್ನಿ ಹೆಸರಿನಲ್ಲಿ ಒಟ್ಟು 21.31 ಎಕರೆ ಜಮೀನಿದೆ.
ಇದನ್ನೂ ಓದಿ:ರಾಜ್ಯಸಭೆ ಟಿಕೆಟ್: ಬಿಜೆಪಿಯಲ್ಲಿ ಪಕ್ಷ ನಿಷ್ಠೆಗೇ ಮಣೆ, ಭಿನ್ನಮತ ಕಡೆಗಣನೆ
ಕೃಷಿಯೇತರ ಭೂಮಿ:ಖರ್ಗೆ ಹೆಸರಿನಲ್ಲಿ ಗುಂಡಗುರ್ತಿ ಗ್ರಾಮದಲ್ಲಿ 1.08 ಎಕರೆ (48,38,350 ರೂ. ಮೌಲ್ಯ) ಇದ್ದರೆ, ಪತ್ನಿ ಹೆಸರಿನಲ್ಲಿ ಅದೇ ಗ್ರಾಮದಲ್ಲಿ 4.9 ಎಕರೆ (ಮೌಲ್ಯ1,97,56,596 ರೂ.) ಇದೆ.
ಖರ್ಗೆ ಹೆಸರಿನಲ್ಲಿ ಯಾವುದೇ ವಾಣಿಜ್ಯ ಕಟ್ಟಡಗಳಿಲ್ಲ. ಆದರೆ, ಬೆಂಗಳೂರಿನಲ್ಲಿ ಪತ್ನಿ ಹೆಸರಿನಲ್ಲಿ ಮೂರೂವರೆ ಕೋಟಿ ರೂ.ಗೂ ಅಧಿಕ ಮೌಲ್ಯದ ಎರಡು ವಾಣಿಜ್ಯ ಕಟ್ಟಡಗಳಿವೆ. ಬೆಂಗಳೂರಿನ ಸದಾಶಿವನಗರದಲ್ಲಿ ಖರ್ಗೆ ಹಾಗೂ ಪತ್ನಿ ಇಬ್ಬರಿಗೂ ಒಂದೊಂದು ಮನೆ ಇದೆ. (7ನೇ ಒಂದು ಭಾಗ. 1,23,37,174 ರೂ. ಮೌಲ್ಯ)
ಕಲಬುರಗಿಯಲ್ಲಿ ಖರ್ಗೆ ಹೆಸರಿನಲ್ಲಿ 46,35,200 ರೂ. ಮೌಲ್ಯದ ಮನೆ ಹಾಗೂ ಪತ್ನಿ ಹೆಸರಿನಲ್ಲಿ 48,94,400 ರೂ. ಮೌಲ್ಯದ ಮನೆ ಇವೆ. ಖರ್ಗೆ ಹೆಸರಿನಲ್ಲಿ ಆರ್​ಎಂವಿ ಎಕ್ಸಟೆನ್ಷನ್​ನಲ್ಲಿ ರಾಧಾಬಾಯಿ ಹೆಸರಿನಲ್ಲಿ ಶೇ.50 ಷೇರು ಪಾಲುದಾರಿಕೆಯ 1,17,06,000 ರೂ.ಮೌಲ್ಯದ ಮನೆ ಇದೆ.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆಗೆ ಅಚ್ಚರಿಯ ಆಯ್ಕೆ ಪ್ರಕಟಿಸಿದ ಬಿಜೆಪಿ: ಎಲ್ಲರಿಗೂ ಶಾಕ್​!
ಮಲ್ಲಿಕಾರ್ಜುನ ಖರ್ಗೆ 7,01,18,724 ರೂ. ಮೌಲ್ಯದ ಸ್ಥಿರ ಆಸ್ತಿ, 2,82,20,805 ರೂ. ಮೌಲ್ಯದ ಚರಾಸ್ತಿ ಹೊಂದಿದ್ದರೆ, ಪತ್ನಿ ರಾಧಾಭಾಯಿ 8,47, 56,545 ರೂ.ಮೌಲ್ಯದ ಸ್ಥಿರಾಸ್ತಿ, 81,29,618 ರೂ. ಚರಾಸ್ತಿ ಹೊಂದಿದ್ದಾರೆ. ಅವಿಭಜಿತ ಹಿಂದು ಕುಟುಂಬಕ್ಕೆ ಸೇರಿದ್ದು 16,25,230 ರೂ .ಮೌಲ್ಯದ ಚರಾಸ್ತಿ ಇದೆ. ಖರ್ಗೆ 10 ಲಕ್ಷ ರೂ., ಪತ್ನಿ 13,75,000 ರೂ. ಸಾಲ ಹೊಂದಿದ್ದಾರೆ.
ನಾಮಪತ್ರದ ಜತೆ ಸಲ್ಲಿಸಲು 10 ಸಾವಿರ ರೂ. ಯಾರು ಕೊಡ್ತೀರಿ ಎಂದು ಕೇಳಿದ ಖರ್ಗೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 5 =
Remember me
