ಬೆಂಗಳೂರು:ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಿಂದಾಗಿ ಪಕ್ಷ ಉತ್ತರ ಕರ್ನಾಟಕದಲ್ಲಿ ಇನ್ನೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶೆಟ್ಟರ್ ಅವರಿಗೆ ಹೂಗುಚ್ಛ, ಪಕ್ಷದ ಬಾವುಟ ನೀಡಿ ಸ್ವಾಗತಿಸಿ, ಮಾತನಾಡಿದ ಖರ್ಗೆ, ಶೆಟ್ಟರ್ ಅವರಷ್ಟೇ ಗೆಲ್ಲದೇ ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲು  ಸಹಾಯ ಮಾಡುತ್ತಾರೆಂಬ ನಂಬಿಕೆ‌ ಇದೆ. ಅವರಿಂದ ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಹೆಚ್ಚಿನ‌ ಶಕ್ತಿ ಸಿಗಲಿದೆ ಎಂದು ಹೇಳಿದರು.
ಕಾಂಗ್ರೆಸ್‌‌ ಪಕ್ಷದ ನೀತಿ, ಸಿದ್ಧಾಂತ ಶೆಟ್ಟರ್‌‌ಗೆ ಗೊತ್ತಿದೆ. ಶೆಟ್ಟರ್ ಯಾವ ಸಿದ್ಧಾಂತದಲ್ಲಿ‌ ಕೆಲಸ‌ ಮಾಡಿಕೊಂಡು ಬಂದಿದ್ದಾರೆ ಎಂಬುದು ನಮಗೂ ಗೊತ್ತಿದೆ. ಈಗ ನಮ್ಮ‌ ಸಿದ್ಧಾಂತ ಒಪ್ಪಿ, ತಮ್ಮ‌ ಸ್ವಾಭಿಮಾನ‌ ಕಾಪಾಡಿಕೊಳ್ಳಲು ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಹೇಳಿದರು.
ಶೆಟ್ಟರ್ ಸರಳ ಸಜ್ಜನ ರಾಜಕಾರಣಿ. ಸ್ವಾಭಿಮಾನಿ. ಸಣ್ಣ ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣ ಮಾಡಿಕೊಂಡು ಬಂದವರು. ಇಡೀ‌ ರಾಷ್ಟ್ರ ರಾಜಕಾರಣಕ್ಕೆ ಸಂದೇಶ ಕೊಡಲು ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಶೆಟ್ಟರ್ ಪೂರ್ಣ ಹಿನ್ನೆಲೆ ಆರ್.ಎಸ್.ಎಸ್., ಜನಸಂಘದಲ್ಲಿ ಇದ್ದರೂ ವಿವಾದ ಇಲ್ಲದೇ ತಮ್ಮ‌ ಕೆಲಸ‌ ಮಾಡಿಕೊಂಡು ಹೋಗಿದ್ದಾರೆ. ನಾವು ಅವರು ಸರ್ಕಾರ- ಪ್ರತಿಪಕ್ಷದಲ್ಲಿ ಇದ್ದಾಗ ಇಬ್ಬರೂ ಜಗಳ‌ ಮಾಡಿಕೊಂಡಿಲ್ಲ.‌ ಶೆಟ್ಟರ್ ಪೊಲೈಟ್ ಆಗಿ ಕೆಲಸ‌ ಮಾಡಿಕೊಂಡು ಹೋಗುತ್ತಾರೆ. ಕರ್ನಾಟಕದಲ್ಲಿ ಪಕ್ಷವು 150 ಸ್ಥಾನ ಗೆಲ್ಲುವ ಗುರಿಯನ್ನು ರಾಹುಲ್ ಗಾಂಧಿ ನೀಡಿದ್ದರು. ಶೆಟ್ಟರ್ ಸೇರಿದ ಮೇಲೆ ನಮಗೆ 150 ಸೀಟು ಬರುವುದು ಖಾತ್ರಿಯಾಯಿತು. ರಾಜ್ಯದ ಉತ್ತರ, ಪೂರ್ವ, ಪಶ್ಚಿಮವನ್ನೂ ಅವರು ಗೆಲ್ಲುವಂತೆ ನೋಡಿಕೊಳ್ಳುತ್ತಾರೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + sixteen =
Remember me
