ಬೆಂಗಳೂರು:ಕಾಂಗ್ರೆಸ್​ ಇಬ್ಬಾಗ ಆದಾಗ ಕಲ್ಬುರ್ಗಿಯಲ್ಲಿ ಯಾರೂ ಅಧ್ಯಕ್ಷರು ಇರಲಿಲ್ಲ. ಈ ವೇಳೆ ನಾನು ವಕೀಲ ವೃತ್ತಿ ಆರಂಭ ಮಾಡಿದ್ದೆ. ಇದರಿಂದಾಗಿ ಕಾಂಗ್ರೆಸ್ ನಾಯಕರ ಸಂಪರ್ಕ ಬೆಳೆಯಿತು. ಹೀಗಿದ್ದಾಗ ಒಂದು ದಿನ ಹಿರಿಯ ನಾಯಕರು, ಇಂದಿರಾಗಾಂಧಿ ಅಧಿಕಾರಕ್ಕೆ ಬರುತ್ತಾರೆ. ನೀವು ಅಧ್ಯಕ್ಷರಾಗಿ ಎಂದು ಪ್ರೋತ್ಸಾಹ ನೀಡಿದರು ಎಂದು ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್​​ನ ಸರ್ವೋದಯ ಸಮಾವೇಶದಲ್ಲಿ ಖರ್ಗೆ ಮಾತನಾಡಿದರು. ಎಐಸಿಸಿಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕಾಗಮಿಸಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿ, ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸ್ವಯಂ ಶಕ್ತಿಯಿಂದ ಮುಂದೆ ಬಂದು ಕೆಲಸ ಮಾಡಿದಾಗ ಎಲ್ಲರೂ ಗುರುತಿಸುತ್ತಾರೆ. ಅಂದು ನಾವು 35 ವರ್ಷ ಒಳಗಿನ ವಯಸ್ಸಿನ ಯುವಕರೆಲ್ಲ ಸೇರಿಕೊಂಡು ಪಕ್ಷ ಸಂಘಟನೆ ಮಾಡಿದೆವು. ಈ ವೇಳೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಲಭಿಸಿತು. ಇಂದು ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ.
ನಾನು ಒಂದೇ ದಿನಕ್ಕೆ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷನಾಗಿಲ್ಲ. ಹಂತ ಹಂತವಾಗಿ ಬೆಳೆದು ಬಂದು ಅಧ್ಯಕ್ಷನಾಗಿದ್ದೇನೆ. ಸದ್ಯ ಕಾಲ ಬದಲಾಗಿದೆ. ಇಂದಿನ ದಿನ ಪಕ್ಷ ಸೇರಿದ ತಕ್ಷಣ ಅಧಿಕಾರ ಬೇಕು ಎಂದು ಕೇಳುವ ಮಂದಿ ಇದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಗುರಿ ಇಟ್ಟು ಕೆಲಸ ಮಾಡಿದಾಗ ಮಾತ್ರ ಮುಂದೆ ಬರಲು ಸಾಧ್ಯವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 3 =
Remember me
