ಬೆಂಗಳೂರುವಿದ್ಯಾವಂತರಾದವರೇ ಇಂದು ಅಪೃರಾಧ ಹಾಗೂ ಇತರೆ ದುಷ್ಕೃತ್ಯಗಳಲ್ಲಿ ತೊಡಗುತ್ತಿರುವುದು ಅತ್ಯಂತ ಆತಂಕದ ವಿಚಾರವಾಗಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಕಳವಳ ವ್ಯಕ್ತಪಡಿಸಿದರು.
ಪುರಭವನದಲ್ಲಿ ಮಂಗಳವಾರ ನಡೆದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೊ) 37ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಬುದ್ಧಿವಂತಿಕೆಯನ್ನು ಹೆಚ್ಚು ರಚನಾತ್ಮಕ ಉದ್ದೇಶಗಳಿಗಾಗಿ ಬಳಸಬೇಕು. ಸಂಸ್ಕೃತಿ, ಬುದ್ಧಿವಂತಿಕೆ ಮತ್ತು ಸಾಮಾಜಿಕ ಬದ್ಧತೆ ಒಳ್ಳೆಯ ಅರ್ಥವನ್ನು ಹೊಂದಿರುತ್ತದೆ. ಸಾಮಾನ್ಯರನ್ನು ಅಸಾಮಾನ್ಯವಾಗಿ ಪರಿವರ್ತಿಸುವುದು ಮತ್ತು ಸಣ್ಣತನವನ್ನು ಮೀರಿಸಲು ಪದವಿಗಳು ಕೆಲಸ ಮಾಡಬೇಕಿದೆ ಎಂದರು.
ಜ್ಞಾನ, ಕೌಶಲ, ವರ್ತನೆ ಮತ್ತು ಮೌಲ್ಯಗಳನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಸಂಯೋಜಿಸುವುದು ಮತ್ತು ಬಹು ಶಿಸ್ತಿನ ಕಲಿಕೆಯನ್ನು ಒದಗಿಸುತ್ತದೆ. ವ್ಯಕ್ತಿತ್ವದ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಈ ದೆಸೆಯಲ್ಲಿ ಉತ್ತಮ ಮಾರ್ಗವಾಗಿದೆ. ರಾಜ್ಯವು ಎನ್‌ಇಪಿಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿರುವುದು ಖುಷಿಯ ವಿಚಾರವಾಗಿದೆ ಎಂದರು.
ತಂತ್ರಜ್ಞಾನ ಬಳಕೆಯು ಹೊಸ ಶಿಕ್ಷಣ ವ್ಯವಸ್ಥೆಗೆ ಕೇಂದ್ರವಾಗಿದೆ. ಇಗ್ನೊ ಬೋಧನೆ-ಕಲಿಕೆ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುತ್ತಿರುವುದು ಶ್ಲಾಘನೀಯ. ಡಿಜಿಟಲ್ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮದ ಉನ್ನತೀಕರಣವು ಜ್ಞಾನ ಮತ್ತು ಆಲೋಚನೆಗಳ ಪ್ರಸರಣದಲ್ಲಿ ಖಂಡಿತವಾಗಿಯೂ ಕ್ರಾಂತಿಯನ್ನುಂಟು ಮಾಡಿದೆ. ಆದರೆ, ಅದು ವಿನಾಶಕಾರಿ ಮತ್ತು ಉತ್ಪಾದನಾಕಾರಿಯಾಗಿದೆ. ತಂತ್ರಜ್ಞಾನವನ್ನು ಹೆಚ್ಚು ವಿವೇಚನೆಯಿಂದ ಮತ್ತು ಸಮಾಜದ ಒಳಿತಿಗಾಗಿ ಬಳಸಬೇಕು ಎಂದರು.
ವಿಶ್ವವಿದ್ಯಾಲಯಗಳು ಎಲ್ಲ ವಿಭಾಗಗಳಲ್ಲಿ ಗುಣಮಟ್ಟದ ಸಂಶೋಧನೆಯ ಪ್ರಮಾಣ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವ ಅಗತ್ಯವಿದೆ. ಇದು ಭಾರತವು ಹೆಚ್ಚು ಸ್ಪರ್ಧಾತ್ಮಕ ಜ್ಞಾನ ಆರ್ಥಿಕತೆಯಾಗಲು ಮತ್ತು ಆತ್ಮನಿರ್ಭರ ಭಾರತವಾಗಲು ಸಹಾಯ ಮಾಡಲಿದೆ ಎಂದು ತಿಳಿಸಿದರು.ಘಟಿಕೋತ್ಸವದಲ್ಲಿ ಸ್ನಾತಕ ವಿಭಾಗದಲ್ಲಿ ಕಾರ್ತಿಕ್ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಅರ್ಪಣ ಪಟವರ್ಧನ್ ಸೇರಿ ಮೂವರು ಚಿನ್ನದ ಪದಕ ವಿದ್ಯಾರ್ಥಿಗಳು ಸೇರಿ 3 ಸಾವಿರ ವಿದ್ಯಾರ್ಥಿಗಳು ಪದವಿ ಪಡೆದರು. ಸಾಂಕೇತಿಕವಾಗಿ 500 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.
ಇಗ್ನೊ ಬೆಂಗಳೂರು ಪ್ರಾದೇಶಿಕ ಕೇಂದ್ರದ ಹಿರಿಯ ನಿರ್ದೇಶಕಿ ಡಾ. ರಾಧಾ ಎಸ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + twenty =
Remember me
