ಬೆಳಗಾವಿ:ಈ ವರ್ಷದ ಆರಂಭದಲ್ಲಿ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನೀತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದೆ. ಸಚಿವರನ್ನು ಬೆದರಿಸಲು ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರನ ಪ್ರಚೋದನೆ ಇತ್ತೆಂದು ಹೇಳಲಾಗುತ್ತಿದೆ.
ಲಷ್ಕರ್-ಎ-ತೊಯ್ಬಾ ಸಂಘಟನೆ ಜತೆ ನಂಟು ಹೊಂದಿದ್ದ ಅಫ್ಸರ್ ಪಾಷಾನನ್ನು ನಿನ್ನೆ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು, ಬೆಳಗಾವಿಯ ಹಿಂಡಲಗಾ ಜೈಲಿನಿಂದ ಮುಂಬೈಗೆ ರಸ್ತೆ ಮಾರ್ಗವಾಗಿ ಕರೆದೊಯ್ದಿದ್ದರು. ನಿನ್ನೆ ಇಡೀ ದಿನ ಅಪ್ಸರ್​ನನ್ನು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ಬಳಿಕ ಮಹಾರಾಷ್ಟ್ರದ ನಾಗ್ಪುರ ಪೊಲೀಸರಿಗೆ ಅಪ್ಸರ್ ಪಾಷಾನನ್ನು ಹಸ್ತಾಂತರಿಸಿದ್ದರು. ವಿಶೇಷ ವಿಮಾನದ ಮೂಲಕ ಅಪ್ಸರ್ ಪಾಷಾನನ್ನು ನಾಗಪುರ ಪೊಲೀಸರು ಕರೆದೊಯ್ದಿದ್ದಾರೆ.
ಇದನ್ನೂ ಓದಿ:ಟೋಲ್​ ಪ್ಲಾಜಾದಲ್ಲಿ ಕನ್ನಡಿಗರಿಗೆ ಉದ್ಯೋಗ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ ಕಣಮಿಣಕಿ ಬಳಿ ಪ್ರತಿಭಟನೆ
ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ ಜತೆಗೆ ನಂಟು ಆರೋಪದಡಿ ಬಂಧಿತನಾಗಿದ್ದ ಅಪ್ಸರ್ ಪಾಷಾ, ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ.
ಜನವರಿ 14ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗಪುರದ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ ನಂಬರ್​ಗೆ ಹಿಂಡಲಗಾ ಜೈಲಿನ ಕೈದಿ ಜಯೇಶ್ ಪೂಜಾರಿ ಎಂಬಾತ ಕರೆ ಮಾಡಿ ಜೀವ ಬೆದರಿಕೆ ಹಾಕಿ, 10 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.
ಇದೀಗ ತನಿಖೆಯಲ್ಲಿ ಜಯೇಶ್​ ಪೂಜಾರಿಗೆ ಜೀವ ಬೆದರಿಕೆ ಹಾಕುವಂತೆ ಅಪ್ಸರ್ ಪಾಷಾ ಪ್ರಚೋದಿಸಿದ್ದಾನೆ. ಈ ಅಪ್ಸರ್​ಗೆ ಲಷ್ಕರ್ ಎ ತೋಯ್ಬಾ ಸಂಘಟನೆ ಜೊತೆ ನಂಟಿದೆ ಎಂಬ ಸಂಗತಿ ಬಯಲಾಗಿದೆ. ಈ ಸಂಗತಿಯನ್ನು ನಾಗಪುರ ಪೊಲೀಸರ ವಿಚಾರಣೆ ವೇಳೆ ಜಯೇಶ್​ ಪೂಜಾರಿ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಎನ್​ಐಎ ಮತ್ತು ನಾಗಪುರ ಪೊಲೀಸರು ಅಪ್ಸರ್ ಪಾಷಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:ಸೊಂಟದ ಭಾಗವನ್ನು ಎಡಿಟ್ ಮಾಡಿ ಫೋಟೊ ಪೋಸ್ಟ್ ಮಾಡಿದ ನಟಿ; ಕುದುರೆ ಕಾಲು ಎಂದು ಕಾಲೆಳೆದ ನೆಟ್ಟಿಗರು!
ಅಲ್ಲಿಗೆ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಿಂದೆ ಲಷ್ಕರ್ ಎ ತೊಯ್ಬಾ ಸಂಘಟನೆ ಉಗ್ರನ ಪ್ರಚೋದನೆ ಇರುವ ವಿಚಾರ ಹೊರಬಿದ್ದಿದೆ. ಅಂದಹಾಗೆ ಈ ಜಯೇಶ್ ಪೂಜಾರಿ ಅಲಿಯಾಸ್ ಕಾಂತ ಮತ್ತು ಶಾಕೀರ್ ಈ ಹಿಂದೆ ಪಾಷಾ ಜೊತೆಗೆ ಬೆಳಗಾವಿ ಜೈಲಿನಲ್ಲಿದ್ದರು.(ದಿಗ್ವಿಜಯ ನ್ಯೂಸ್​)
ಸಂಬಳ ಸಾಕಾಗುತ್ತಿಲ್ಲವೆಂದು ಗಂಡ ಸಾವನ್ನಪ್ಪಿದ ವರ್ಷದ ಬೆನ್ನಲ್ಲೇ ಪತ್ನಿಯೂ ಅದೇ ಕಾರಣಕ್ಕೆ ಸಾವು

ಕುಡಿದ ಮತ್ತಿನಲ್ಲಿ ಗೋಡೆಗೆ ತಲೆ ಜಜ್ಜಿ ಮಾವನನ್ನ ಕೊಂದ ಅಳಿಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − two =
Remember me
