ಬೆಂಗಳೂರು:ಪ್ರಸಿದ್ಧ ಚಿತ್ರನಟರ ಜತೆ ಫೋಟೋ ಕ್ಲಿಕ್ಕಿಸಿಕೊಂಡು ತಾನೊಬ್ಬ ನಟ, ಸಿನಿಮಾದಲ್ಲಿ ತನಗೆ ಬಹಳ ಮಂದಿಯ ಪರಿಚಯವಿದೆ ಎಂದೆಲ್ಲಾ ಪೋಸ್‌ ಕೊಟ್ಟು, ಯುವತಿಯನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಖತರ್‌ನಾಕ್‌ ಖದೀಮನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚಿತ್ರನಟ-ನಟಿಯರ ಜತೆ ಫೋಟೋ ನೋಡಿ ಯುವತಿಯರು ಮರಳಾಗುವಂತೆ ಮಾಡುತ್ತಿದ್ದ ಬಸವರಾಜು ಶಂಕರಪ್ಪ ಕಳಸದ್, ನಂತರ ಯುವತಿಯರನ್ನು ಕಳ್ಳಸಾಗಣೆ ಮಾಡುತ್ತಿರುವ ಆರೋಪ ಎದುರಿಸುತ್ತಿದ್ದಾನೆ.
ಅನ್ಯರಾಜ್ಯಗಳ ಯುವತಿಯರಿಗೆ ಕೆಲಸ ಕೊಡಿಸುವ ಆಮಿಷ ಒಡ್ಡಿ ಅವರನ್ನು ಕರೆತಂದು ನಂತರ ಡಾನ್ಸ್‌ಬಾರ್‌ಗಳಿಗೆ ಸರಬರಾಜು ಮಾಡುತ್ತಿದ್ದ.
ಇದನ್ನೂ ಓದಿ:‘ನಿನ್ನೇ ಮದುವೆ ಆಗ್ತೇನೆ ಚಿನ್ನಾ ಅದಕ್ಕೂ ಮೊದ್ಲು ಮನೆ ಬೇಡ್ವಾ.. ಸ್ವಲ್ಪ ಹಣ ಅಕೌಂಟ್​ಗೆ ಹಾಕು.!’
ಈತನ ಮಾತನ್ನು ನಂಬಿ ಅನೇಕ ಬೇರೆ ರಾಜ್ಯಗಳ ಯುವತಿಯರು ಈತನ ಜತೆಗೆ ಬಂದಿದ್ದಾರೆ. ನಂತರ ಅವರನ್ನು ಅರಬ್‌ ಸೇರಿದಂತೆ ಅನೇಕ ದೇಶಗಳಿಗೆ ಮಾರಾಟ ಮಾಡುತ್ತಿರುವುದಾಗಿ ಸಿಸಿಬಿ ಪೊಲೀಸರು ಹೇಳಿದ್ದಾರೆ.
ಇದೀಗ ಆರೋಪಿ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ತೀವ್ರಗೊಂಡಿದೆ.
ಅಂತೂ ಸಿಕ್ಕಿಬಿದ್ಳು ಸರ್ಕಾರವನ್ನೇ ಯಾಮಾರಿಸಿದ ಶ್ರೀಮಂತ ಅಜ್ಜಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 9 =
Remember me
