ಬೆಂಗಳೂರು:ನಾನೇ ದೇವರು, ನೀನೇಕೆ ಚರ್ಚಿಗೆ ಹೋಗುತ್ತೀಯಾ ಎಂದು ತಾಯಿಗೆ ಅವಾಜ್​ ಹಾಕಿರುವ ಪುತ್ರನೊಬ್ಬ ಚರ್ಚಿ​ನಲ್ಲಿರುವ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ಬಾಣಸವಾಡಿ ಬಳಿಯಿರುವ ಕಮ್ಮನಹಳ್ಳಿಯಲ್ಲಿನ ಚರ್ಚಿನಲ್ಲಿ ನಡೆದಿದೆ.
ಕೇರಳ ಮೂಲದ ಟಾಮ್ ಮ್ಯಾಥ್ಯೂವ್ ಎಂಬಾತ ಈ ಉದ್ಧಟತನ ಮೆರೆದಿದ್ದಾನೆ. ಮನೆಯಲ್ಲಿಯೇ ದೇವರನ್ನು ಇಟ್ಟುಕೊಂಡು ಚರ್ಚಿಗೆ ಯಾಕೆ ಹೋಗ್ತೀಯಾ ಎಂದು ತನ್ನ ತಾಯಿಗೆ ಅವಾಜ್ ಹಾಕಿ, ಚರ್ಚಿನಲ್ಲಿದ್ದ ಹೂಕುಂಡ ಸೇರಿದಂತೆ ಅನೇಕ‌ ವಸ್ತುಗಳನ್ನು ಧ್ವಂಸ ಮಾಡಿದ್ದಾನೆ.
ಇದನ್ನೂ ಓದಿ:17 ಸಾವಿರ ಕೊಟ್ಟು ಫೇಶಿಯಲ್​ ಮಾಡಿಸಿಕೊಂಡವಳ ಮುಖ ವಿಕಾರ: ಡಾಕ್ಟರ್​ ಹೇಳಿದ್ದನ್ನು ಕೇಳಿ ಸಂತ್ರಸ್ತೆಗೆ ಶಾಕ್​
ಆರೋಪಿ ಮ್ಯಾಥ್ಯೂವ್​ 30 ವರ್ಷಗಳಿಂದ ಬೆಂಗಳೂರಿನಲ್ಲಿ ನಲೆಸಿದ್ದಾನೆ. ವಿದೇಶಗಳಲ್ಲಿಯು ಸಹ ಸಾಕಷ್ಟು ಓಡಾಟ ಮಾಡಿದ್ದಾನೆ. ನಿನ್ನೆ ಚರ್ಚಿಗೆ ಹೋದಾಗ ಈ ಗಲಾಟೆ ನಡೆದಿದೆ. ನಾನೇ ದೇವರು, ನೀವ್ಯಾಕೆ ಆ ದೇವರನ್ನು ಪೂಜಿಸುತ್ತೀರಾ ಎಂದು ಗಲಾಟೆ ಮಾಡಿದ್ದಾನೆ. ಸದ್ಯ ಮ್ಯಾಥ್ಯೂವ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಮಾನಸಿಕ ಅಸ್ವಸ್ಥನಾ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಆತನ ತಾಯಿಯನ್ನೂ ವಿಚಾರಣೆ ಮಾಡುತ್ತಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಜಾತಿ, ಧರ್ಮ, ಸಿದ್ಧಾಂತಗಳಿಗೆ ತಳುಕು ಹಾಕದೆ ಮಾನಸಿಕ ಆರೋಗ್ಯಕ್ಕಾಗಿ ಯೋಗ ಮಾಡೋಣ: ಸಿಎಂ ಸಿದ್ದರಾಮಯ್ಯ

ಮೊದಲ ಬಾರಿ ಗೆದ್ದ ಶಾಸಕರು ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕೆಂದು ತಿಳಿದುಕೊಳ್ಳಲಿ! ಪ್ರತಾಪ್ ಸಿಂಹ ಟಾಂಗ್

https://www.vijayavani.net/wp-admin/post.php?post=1558498&action=edit
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 18 =
Remember me
