ಮಂಡ್ಯ:ಸಾಮಾನ್ಯವಾಗಿ ಸಮಾಜದಲ್ಲಿ ಅಪರಾಧ ನಡೆಯುತ್ತಿದ್ದರೆ ಜನರು ಮಧ್ಯಪ್ರವೇಶಿಸಲು ಹಿಂಜರಿಯುವುದು ಸಹಜ. ಆದರೆ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಕ್ರೌರ್ಯ ಮೆರೆಯುತ್ತ ಕೊಲೆಗೆ ಯತ್ನಿಸುತ್ತಿದ್ದರೂ ಜನರೆಲ್ಲ ಆತನನ್ನು ಹಿಡಿದು ಬಾರಿಸಿ ಕೊನೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಕಚೇರಿ ಬಳಿ ಇಂದು ಈ ಘಟನೆ ನಡೆದಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಮರಳಿ ಗ್ರಾಮದ ನಂದನ್ ಎಂಬಾತ ಅದೇ ಗ್ರಾಮದ ಚನ್ನರಾಜು (45) ಎಂಬಾತನ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ. ತಾಲೂಕು ಕಚೇರಿಯ ಮೊದಲ ಮಹಡಿಯಲ್ಲಿ ಜಗಳ ತೆಗೆದು ಹಲ್ಲೆಗೆ ಮುಂದಾದ ನಂದನ್, ಚನ್ನರಾಜು ಹೊರಗೆ ಓಡಿಹೋದರೂ ಬಿಡದೆ ಹಲ್ಲೆ ಮುಂದುವರಿಸಿದ್ದಾನೆ.
ಇದನ್ನೂ ಓದಿ:ತಾಲೂಕು ಕಚೇರಿಯಲ್ಲೇ ವ್ಯಕ್ತಿಯ ಕೊಲೆಗೆ ಯತ್ನ; ಕುಡುಗೋಲಿನಿಂದ ಮನಬಂದಂತೆ ಹಲ್ಲೆ
ಈ ಸಂದರ್ಭದಲ್ಲಿ ಆರಂಭದಲ್ಲಿ ಹೆದರಿದ್ದ ಸಾರ್ವಜನಿಕರು ಕೊನೆಗೆ ಕೊಲೆಗೆ ಯತ್ನಿಸಿದವನನ್ನು ಹಿಡಿದು ಬಾರಿಸಿದ್ದಾರೆ. ಮೊದಲ ಮಹಡಿಯಿಂದ ಕುಡುಗೋಲಿನಲ್ಲೇ ಹೊಡೆದುಕೊಂಡು ಬಂದಿದ್ದ ನಂದನ್, ನಂತರ ಆವರಣದಲ್ಲೂ ಮನಸೋ ಇಚ್ಛೆ ಕ್ರೌರ್ಯ ನಡೆಸಿದ್ದಾನೆ. ಸಾರ್ವಜನಿಕರು ಕಿರುಚುತ್ತಿದ್ದರೂ ಲೆಕ್ಕಿಸಲಿಲ್ಲ. ಆಗ ವಕೀಲರೊಬ್ಬರು ಕಲ್ಲಿನಿಂದ ಹೊಡೆದ ಬಳಿಕ ಸ್ವಲ್ಪ ದೂರ ಹೋಗಿದ್ದ ನಂದನ್​ನನ್ನು ಸಾರ್ವಜನಿಕರೆಲ್ಲ ಒಟ್ಟಾಗಿ ಹಿಡಿದು ಬಾರಿಸಿದ್ದಾರೆ.
ಸಂಜೆ ಸ್ನೇಹಿತರ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಒಂದು ಕೆ.ಜಿ. ಚಿನ್ನಾಭರಣ ಕಳವು!

ತನಗೆ ತಾನೇ ಶ್ರದ್ಧಾಂಜಲಿ ಸ್ಟೇಟಸ್ ಹಾಕೊಂಡವನ ಶವ ಮರದಲ್ಲಿ ನೇತಾಡುತ್ತಿತ್ತು!

ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + eight =
Remember me
