ಬೆಂಗಳೂರು:ಮದ್ಯದ ಅಮಲಿನಲ್ಲಿ ಗಲಾಟೆಗಳು ನಡೆಯುವುದು ಸರ್ವೇಸಾಮಾನ್ಯ. ಆದರೆ ಪಾನಮತ್ತರ ನಡುವೆ ನಡೆದ ಈ ಗಲಾಟೆ ಕೊಲೆಯಲ್ಲಿ ಕೊನೆಗೊಂಡಿದೆ. ಅಷ್ಟಕ್ಕೂ ಆತ ಸ್ನೇಹಿತನ ಮಕ್ಕಳಿಂದಲೇ ಕೊಲೆಯಾದ ಅಪರೂಪದ ಪ್ರಕರಣವೊಂದು ಬೆಂಗಳೂರಿನಲ್ಲಿ ವರದಿಯಾಗಿದೆ.
ಇರ್ಫಾನ್​ ಎಂಬಾತ ಕೊಲೆಗೀಡಾಗಿದ್ದು, ಆತನ ಸ್ನೇಹಿತ ಗೋಪಿ ಎಂಬಾತನ ಮಕ್ಕಳೇ ಆರೋಪಿಗಳು. ಬೆಂಗಳೂರಿನ ವಿವೇಕನಗರದ ನೀಲಸಂದ್ರದಲ್ಲಿ ಬುಧವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಬುಧವಾರ ರಾತ್ರಿ ಇರ್ಫಾನ್​, ಗೋಪಿ ಹಾಗೂ ಪುನೀತ್ ಎಂಬವರು ಜೊತೆಯಾಗಿ ಮದ್ಯಪಾನ ಮಾಡುತ್ತ ಕುಳಿತಿದ್ದರು. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಇವರ ಮಧ್ಯೆ ಗಲಾಟೆ ನಡೆದಿದೆ. ಸಿಟ್ಟಿನ ಭರದಲ್ಲಿ ಗೋಪಿ ಮತ್ತು ಪುನೀತ್ ಮೇಲೆ ಇರ್ಫಾನ್​ ಹಲ್ಲೆ ಮಾಡಿದ್ದ. ಇದು ಕೆಲವೇ ಕ್ಷಣಗಳಲ್ಲಿ ಗೋಪಿಯ ಪುತ್ರರಿಗೂ ತಿಳಿದಿದ್ದರಿಂದ ಪ್ರಕರಣ ವಿಕೋಪಕ್ಕೆ ತೆರಳಿತ್ತು.
ಇದನ್ನೂ ಓದಿ:ವೀರ್ಯ ಉತ್ಪತ್ತಿಯಾಗದಿದ್ದರೆ ವೆರಿಕೋಸ್​ ಕೂಡ ಕಾರಣವಾಗಿರಬಹುದು, ನೋಡಿ…
ತಂದೆ ಗೋಪಿಗೆ ಇರ್ಫಾನ್ ಹೊಡೆದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪುತ್ರರು, ಇರ್ಫಾನ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹೊಡೆತದ ತೀವ್ರತೆಗೆ ಇರ್ಫಾನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ತಕ್ಷಣವೇ ಇರ್ಫಾನ್​​ನನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕುಳಿಯಲಿಲ್ಲ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ವಿವೇಕನಗರ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪ್ರೀತಿಗೆ ಒಲ್ಲೆ ಎಂದವಳನ್ನು ಕೊಂದಿದ್ದ ಪಾಗಲ್​ ಪ್ರೇಮಿ ನೇಣಿಗೆ ಶರಣು! ಕೊಲೆಗಡುಕನನ್ನು ಸಾವಿನಿಂದ ರಕ್ಷಿಸಿದ್ದ ಮೃತಳ ಚಿಕ್ಕಪ್ಪ!

ತನ್ನಿಂದ ಗರ್ಭಿಣಿಯಾದ ಬಾಲಕಿಯನ್ನು ಮದ್ವೆಯಾಗ್ತೇನೆಂದ ವಿವಾಹಿತ- ಅಮ್ಮನ ಸಮ್ಮತಿ; ಕೋರ್ಟ್​ ನೀಡಿತು ಜಾಮೀನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
