ಬೀದರ್:ಜಿಲ್ಲೆಯ ಹುಮನಾಬಾದ್ ತಾಲೂಕಿನ ಚಂದನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಕಲಿತ ಶಾಲೆಗೆ ಕೊಡುಗೆ ಎಂಬ ಪರಿಕಲ್ಪನೆ ಹುಟ್ಟುಹಾಕಿದ್ದು, ಹಳೇ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ.
ಕರೆಗೆ ಪ್ರೇರಿತರಾಗಿ ಹಲವು ವಿದ್ಯಾರ್ಥಿಗಳು ಶಾಲೆಗೆ ಕೈಲಾದಷ್ಟು ಕೊಡುಗೆ ನೀಡುತ್ತಿದ್ದು, ಈ ಪೈಕಿ ಅಂಗವಿಕಲರೊಬ್ಬರು ಉಚಿತವಾಗಿ ಕಾವಲುಗಾರ (ವಾಚ್​ವುನ್) ಸೇವೆಗೆ ಸೈ ಎಂದಿದ್ದು, ಈ ಸೇವಾಭಾವ, ಕಲಿತ ಶಾಲೆ ಋಣ ತೀರಿಸಬೇಕೆಂಬ ಕಾಳಜಿ ಸಮಾಜಕ್ಕೆ ಹೊಸ ಸಂದೇಶ ರವಾನಿಸಿದೆ.
ಎರಡು ತಿಂಗಳ ಹಿಂದೆ ಕಲಿತ ಶಾಲೆಗೆ ನನ್ನ ಕೊಡುಗೆ ಎಂಬ ಪ್ರಯೋಗಕ್ಕೆ ಚಾಲನೆ ನೀಡಲಾಗಿದ್ದು, ವಿವಿಧೆಡೆ ಇರುವ ಹಳೇ ವಿದ್ಯಾರ್ಥಿಗಳು ಶಾಲೆಗೆ ದೌಡಾಯಿಸಿ ತಮ್ಮಿಂದ ಆದಷ್ಟು ಕೊಡುಗೆ ನೀಡಲು ಮುಂದಾಗುತ್ತಿದ್ದಾರೆ. ಹೀಗಾಗಿ ಅಲ್ಪ ಅವಧಿಯಲ್ಲೇ ಎಲ್ಲರ ಗಮನ ಸೆಳೆಯುವಂಥ ಕೆಲಸಗಳು ನಡೆದಿವೆ.
7ನೇ ತರಗತಿವರೆಗೆ ಕಲಿತ ಗ್ರಾಮದ ಕಡು ಬಡವ, ಅನಾಥ ಹಾಗೂ ಅಂಗವಿಕಲ ಮಾರುತಿ ರಾಮಣ್ಣ ದುಬುಲಗುಂಡೆ (35) ಕೊಡುಗೆ ನೀಡಲು ಏನೂ ಇಲ್ಲದ್ದರಿಂದ ಶಾಲೆಗೆ ಕಾವಲುಗಾರ ಸೇವೆಗೆ ಸೈ ಎಂದಿದ್ದಾರೆ. ಪಾರ್ಶ್ವವಾಯು (ಲಕ್ವ)ದಿಂದ ಎಡಗೈ ಸ್ವಾಧೀನವಿಲ್ಲ. ದೇಹದ ಎಡಭಾಗ ಸ್ವಲ್ಪ ನಿಸ್ತೇಜಗೊಂಡಿದೆ. ಆದರೂ ಕಲಿತ ಶಾಲೆಗೆ ಕೊಡುಗೆ ನೀಡುವೆ ಎಂದು ನಿಶ್ಚಯಿಸಿ ವೇತನರಹಿತ ಕಾವಲುಗಾರ ಕೆಲಸದಲ್ಲೇ ಅಕ್ಷರದ ಋಣ ತೀರಿಕೆಯ ತೃಪ್ತಿ ಕಾಣುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − twelve =
Remember me
