ಬೆಂಗಳೂರು:ವೈವಾಹಿಕ ಜಾಲತಾಣದಲ್ಲಿ ಮಹಿಳೆಯನ್ನು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ 7 ಲಕ್ಷ ರೂ. ಪಡೆದು ವಂಚಿಸಿದ್ದಾನೆ.
ಬನಶಂಕರಿಯ ಕದಿರೇನಹಳ್ಳಿಯ 30 ವರ್ಷದ ಮಹಿಳೆ ವಂಚನೆಗೊಳಗಾದಾಕೆ. ವಂಚಕ ರಮೇಶ್ ಎಂಬಾತನ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ಖಾಸಗಿ ಕಂಪನಿಯೊಂದರಲ್ಲಿ ಲೆಕ್ಕ ಪರಿಶೋಧಕಿ. ವಿವಾಹ ವಿಚ್ಛೇದನ ಪಡೆದುಕೊಂಡಿದ್ದು, ಮರು ವಿವಾಹಕ್ಕಾಗಿ ಮ್ಯಾಟ್ರಿಮೋನಿಯಲ್ ವೆಬ್​ಸೈಟ್​ನಲ್ಲಿ ಅಪೇಕ್ಷೆ ವ್ಯಕ್ತಪಡಿಸಿದ್ದಳು. 2019ರ ಜೂ.5ರಂದು ರಮೇಶ್ ಎಂಬಾತ ಪರಿಚಯವಾಗಿದ್ದು ಮದುವೆ ಯಾಗುವುದಾಗಿ ಹೇಳಿದ್ದ. ಬಳಿಕ ಇಬ್ಬರು ಫೋನ್ ನಂಬರ್ ವಿನಿಮಯ ಮಾಡಿ ಕೊಂಡಿದ್ದರು. ಪ್ರತಿನಿತ್ಯ ಚಾಟಿಂಗ್ ಮಾಡುತ್ತ ಆಕೆಯ ನಂಬಿಕೆ ಗಳಿಸಿದ್ದ ರಮೇಶ್, ತನ್ನ ಪರಿಚಯಸ್ಥರಲ್ಲಿ 5 ಲಕ್ಷ ರೂ.ಗಳ ಚೀಟಿ ಕಟ್ಟಿಸಿದ್ದ. ಕೆಲ ತಿಂಗಳ ಬಳಿಕ ತಾನು ನಿವೇಶನ ಖರೀದಿಸಿದ್ದು 7 ಲಕ್ಷ ರೂ. ಬೇಕಿದೆ ಎಂದಿದ್ದ. ಆತನ ಮಾತನ್ನು ನಂಬಿ, ಚೀಟಿ ಕಟ್ಟಿದ್ದ ಹಣದಲ್ಲಿ 4 ಲಕ್ಷ ರೂ. ಹಾಗೂ ಬೇರೆ 3 ಲಕ್ಷ ರೂ. ಹೊಂದಿಸಿ ರಮೇಶ್​ಗೆ ಸಂತ್ರಸ್ತೆ ನೀಡಿದ್ದಳು.
ಕೆಲಸದ ನಿಮಿತ್ತ ಹೊರ ರಾಜ್ಯಕ್ಕೆ ಹೋಗುತ್ತಿರುವುದಾಗಿ ತಿಳಿಸಿ ತಲೆಮರೆಸಿಕೊಂಡ ರಮೇಶ್, ಮತ್ತೆ ಭೇಟಿಯಾಗಿಲ್ಲ. ಇತ್ತೀಚೆಗೆ ಫೋನ್ ಮಾಡಿದಾಗ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ, ತೆಗೆದುಕೊಂಡ ಹಣವನ್ನೂ ವಾಪಸ್ ಕೊಡುವುದಿಲ್ಲ. ಮತ್ತೊಮ್ಮೆ ಫೋನ್ ಮಾಡಿ ಹಣಕ್ಕೆ ಪೀಡಿಸಿದರೆ ಸರಿ ಇರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆ ದೂರು ಕೊಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮುದಾಯಕ್ಕೆ ಸೋಂಕು? ರಾಜ್ಯದಲ್ಲಿ ಕೈಮೀರಿತೇ ಕರೊನಾ; ಆರೋಗ್ಯ ತಜ್ಞರ ಅನುಮಾನ

ಸ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − three =
Remember me
